‘ಮನುವಾದದಿಂದ ದೇಶ ಛಿದ್ರ’

7

‘ಮನುವಾದದಿಂದ ದೇಶ ಛಿದ್ರ’

Published:
Updated:

ದಾವಣಗೆರೆ: ಮನುವಾದ ಅಧಿಕಾರಕ್ಕೆ ಬಂದಾಗಲೆಲ್ಲಾ ದೇಶ ಛಿದ್ರಗೊಂಡಿರುವುದು ಇತಿಹಾಸದಲ್ಲಿ ಕಾಣಬಹುದು. ಮುಂದೆ ಮನುವಾದದ ಮೂಲಕ ಆಡಳಿತ ಬಂದರೆ ಭಾರತ ಮತ್ತೊಮ್ಮೆ ಛಿದ್ರಗೊಳ್ಳಲಿದೆ ಎಂದು ಸಂವಿಧಾನ ಉಳಿಸಿ ಹೋರಾಟ ಸಮಿತಿಯ ಉಪಾಧ್ಯಕ್ಷ ಸಿ.ಕೆ. ಮಹೇಶ್‌ ಆತಂಕ ವ್ಯಕ್ತಪಡಿಸಿದರು.

ಅಖಂಡ ಭಾರತ ಎಂದು ಭಾಷಣ ಮಾಡುವವರು ಯಾವಾಗ ಅಖಂಡ ಭಾರತವಾಗಿತ್ತು ಎಂಬುದನ್ನು ಹೇಳುತ್ತಿಲ್ಲ. ಬುದ್ಧನ ಆಶಯಗಳನ್ನು ಇಟ್ಟುಕೊಂಡು ಅಶೋಕ ಚಕ್ರವರ್ತಿ ಆಡಳಿತ ನಡೆಸುತ್ತಿದ್ದಾಗ ಅಖಂಡವಾಗಿತ್ತು. ಆನಂತರ ಪುಷ್ಯಮಿತ್ರ ಶೃಂಗನು ಮನುವಾದದ ಮೂಲಕ ಆಡಳಿತ ಆರಂಭಿಸಿದಾಗ ಒಡೆದು ಹೋಯಿತು. ಬುದ್ಧನ, ಅಶೋಕನ ಆಶಯಗಳನ್ನು ಇಟ್ಟುಕೊಂಡು ಅಂಬೇಡ್ಕರ್‌ ಸಂವಿಧಾನ ರಚಿಸಿದ್ದರಿಂದ ಈ ದೇಶ ಒಂದಾಗಿ ಉಳಿದಿದೆ. ಅದನ್ನು ಬದಲಾಯಿಸಿದರೆ ದೇಶ ಒಂದಾಗಿ ಉಳಿಯುವುದು ಕಷ್ಟ ಎಂದು ತಿಳಿಸಿದರು.

ಉಪನ್ಯಾಸಕ ಎ.ಬಿ. ರಾಮಚಂದ್ರಪ್ಪ ಮಾತನಾಡಿ, ‘ಎಲ್ಲರನ್ನೂ ಸಮಾನತೆ, ಸೌಹಾರ್ದ, ಸಹೋದರತೆಯಿಂದ ಒಟ್ಟಿಗೆ ಒಯ್ಯುವ ಸಂವಿಧಾನ ಇರುವುದರಿಂದ ಭಾರತ ಒಂದಾಗಿ ಉಳಿದಿದೆ. ರಷ್ಯಾದಲ್ಲಿ ಅಲ್ಲಿನ ರಾಜ್ಯಗಳೇ ಪ್ರತ್ಯೇಕ ರಾಷ್ಟ್ರಗಳಾಗಿದ್ದನ್ನು ಕಂಡಿದ್ದೇವೆ. ಭಾರತದಲ್ಲಿಯೂ ಸಂವಿಧಾನ ಬದಲಾಯಿಸಿದರೆ ಇಲ್ಲಿನ ರಾಜ್ಯಗಳೇ ಪ್ರತ್ಯೇಕ ಸಂವಿಧಾನ ಕೇಳುವ ದಿನಗಳು ಬರಬಹುದು. ಹಾಗಾಗದಿರಲಿ’ ಎಂದು ಆಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !