ಮಂಗಳವಾರ, ಆಗಸ್ಟ್ 20, 2019
27 °C

ದಾವಣಗೆರೆ: ದಂಪತಿ ಕಟ್ಟಿ ಹಾಕಿ ₹2.50ಲಕ್ಷ ಮೌಲ್ಯದ ಆಭರಣ, ನಗದು ಡಕಾಯಿತಿ

Published:
Updated:

ದಾವಣಗೆರೆ: ಇಲ್ಲಿನ ಡಾಲರ್ಸ್ ಕಾಲೊನಿಯ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ದಂಪತಿಯನ್ನು ಕಟ್ಟಿಹಾಕಿ ₹ 2.50 ಲಕ್ಷ ಮೌಲ್ಯದ ಆಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಶನಿವಾರ ಬೆಳಿಗ್ಗೆ 1.15ರ ವೇಳೆಗೆ 6 ಮಂದಿಯ ಗುಂಪು ಡಾಲರ್ಸ್‌ ಕಾಲೊನಿಯ ಶಿಕ್ಷಕರಾದ ಚಂದ್ರಕಲಾ ಹಾಗೂ ಚಂದ್ರಶೇಖರ್ ದಂಪತಿಯ ಮನೆಯ ಬಾಗಿಲು ಮುರಿದು ಒಳನುಗ್ಗಿದ್ದಾರೆ. ಇವರಿಬ್ಬರನ್ನು ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಆರಂಭದಲ್ಲಿ ಚಂದ್ರಕಲಾ ಅವರ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡಿದ್ದಾರೆ. ನಂತರ ಬೀರುವಿನ ಬಾಗಿಲನ್ನು ಮುರಿದು ಅಲ್ಲಿ ಇಟ್ಟಿದ್ದ ನಾಲ್ಕು ಬಳೆ, ಕಿವಿಯೋಲೆ ಹಾಗೂ ₹8 ಸಾವಿರವನ್ನು ದೋಚಿದ್ದಾರೆ.

ಆರೋಪಿಗಳನ್ನು ಪತ್ತೆ ಹಚ್ಚಲು ತಂಡ ರಚನೆ ಮಾಡಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)