ಸೋಮವಾರ, ಜೂನ್ 14, 2021
26 °C
ಗೊಂದಲಕ್ಕೆ ಕಾರಣವಾದ ಸಂಖ್ಯೆ * 224 ಮಂದಿ ಬಿಡುಗಡೆ

ರಾಜ್ಯ ಬುಲೆಟಿನ್‌ನಲ್ಲಿ 328 ಪ್ರಕರಣ, ಅಸಲಿ 200: ಇದು ಕೋವಿಡ್‌ ತಪ್ಪು ಲೆಕ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಿಲ್ಲೆಯಲ್ಲಿ ಗುರುವಾರ ಸೋಂಕು ದೃಢಪಟ್ಟವರ ಸಂಖ್ಯೆ ರಾಜ್ಯ ಬುಲೆಟಿನ್‌ ಪ್ರಕಾರ 328, ಜಿಲ್ಲಾ ಬುಲೆಟಿನ್‌ ಪ್ರಕಾರ 323 ಮಂದಿ. ನಿಜವಾಗಿ ಸೋಂಕಿಗೆ ಒಳಗಾದವರ ಸಂಖ್ಯೆ 200. ಡಾಟ ಎಂಟ್ರಿಯಲ್ಲಿ ಪುನರಾವರ್ತನೆ ಆಗಿರುವುದೇ ಈ ಗೊಂದಲಕ್ಕೆ ಕಾರಣವಾಗಿದೆ.

ಬುಧವಾರ 239 ಪ್ರಕರಣಗಳನ್ನು ಬುಲೆಟಿನ್‌ನಲ್ಲಿ ತೋರಿಸಲಾಗಿತ್ತು. ಅದರಲ್ಲಿ ತೋರಿಸಲಾದ ಕೊನೇ 123 ಸೋಂಕಿತರನ್ನು ಗುರುವಾದ ಬುಲೆಟಿನ್‌ನಲ್ಲಿ ಮತ್ತೆ ತೋರಿಸಲಾಗಿದೆ.

‘ಐಸಿಎಂಆರ್‌ ಪೋರ್ಟಲ್‌ನಲ್ಲಿ 200 ಪ್ರಕರಣಗಳು ಮಾತ್ರ ಅಪ್‌ಲೋಡ್‌ ಆಗಿವೆ. ಜಿಲ್ಲೆಯಿಂದ ಅಪ್‌ಲೋಡ್‌ ಮಾಡುವ ಪರಿಹಾರ ಪೋರ್ಟಲ್‌ ನಲ್ಲಿ ನಮೂದು ಮಾಡುವಾಗ ನಿನ್ನೆಯ 123 ಉಳಿದುಕೊಂಡಿರುತ್ತದೆ. ಡೌಟ್‌ ಎಂಟ್ರಿ ಡಿಲೀಟ್‌ ಆದರೂ ಆಗಿಲ್ಲ. ತಾಂತ್ರಿಕ ದೋಷ ಕಾರಣದಿಂದ 200 ಬದಲು 323 ಬಂದಿದೆ ರಿಪಿಟೇಶನ್‌ ಆಗಿರುವ ಬಗ್ಗೆ ರಾಜ್ಯದ ಸರ್ವಲೆನ್ಸ್‌ ವಿಭಾಗದ ಗಮನಕ್ಕೆ ತರಲಾಗಿದೆ. ಅವರು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ’ ಎಂದು ಜಿಲ್ಲಾ ಸರ್ವಲೆನ್ಸ್‌ ಅಧಿಕಾರಿ ಡಾ. ಜಿ.ಡಿ. ರಾಘವನ್‌ ಮತ್ತು ಸರ್ವಲೆನ್ಸ್‌ನ ಸಂಪರ್ಕಾಧಿಕಾರಿ ಡಾ. ಯತೀಶ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

200 ಮಂದಿಗೆ ಸೋಂಕು: 95 ವರ್ಷದವರೊಬ್ಬರೂ ಒಳಗೊಂಡಂತೆ 30 ವೃದ್ಧರು, 17 ವೃದ್ಧೆಯರು, ಆರು ಬಾಲಕರು, ಐವರು ಬಾಲಕಿಯರು ಸೇರಿ 200 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಮೂವರು ಮೃತಪಟ್ಟಿದ್ದಾರೆ.

ಜಾಲಿನಗರದ 70 ವರ್ಷದ ವೃದ್ಧ ಉಸಿರಾಟದ ಸಮಸ್ಯೆ ಮತ್ತು ಅಧಿಕ ರಕ್ತದೊತ್ತಡದಿಂದ ಆ.12ರಂದು ನಿಧನರಾದರು. ಉಸಿರಾಟದ ಸಮಸ್ಯೆ ಇದ್ದ ಬಿ.ಎಂ. ಬಡಾವಣೆಯ 64 ವರ್ಷದ ವೃದ್ಧ ಆ.13ರಂದು ಮತತು ಶ್ರೀನಿವಾಸನಗರದ 80 ವರ್ಷದ ವೃದ್ಧ ಆ.11ರಂದು ಮೃತಪಟ್ಟರು.

18ರಿಂದ 59 ವರ್ಷದ ನಡುವಿನ 81 ಪುರುಷರಿಗೆ, 61 ಮಹಿಳೆಯರಿಗೆ ಸೋಂಕು ತಗುಲಿದೆ.  ದಾವಣಗೆರೆ ತಾಲ್ಲೂಕಿನ ಒಟ್ಟು 111 ಮಂದಿಗೆ ಸೋಂಕು ಬಂದಿದೆ. ಅದರಲ್ಲಿ ನಾಗರಕಟ್ಟೆ, ಆಲೂರಹಟ್ಟಿ, ಕುರ್ಕಿಯ ತಲಾ ಮೂವರು, ಹನುಮನಹಳ್ಳಿ, ಕತ್ತಿಗೆಯ ತಲಾ ಇಬ್ಬರು, ಕಂದನಬಾವಿ, ಮಂಡಳೂರಿನ ತಲಾ ಒಬ್ಬರು ಹೀಗೆ 16 ಮಂದಿಯನ್ನು ಹೊರತುಪಡಿಸಿದರೆ ಉಳಿದ 95 ಮಂದಿ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯವರಾಗಿದ್ದಾರೆ.

ಕೆಟಿಜೆನಗರ ಪೊಲೀಸ್‌ ಠಾಣೆಯ ಸಿಬ್ಬಂದಿ, ನ್ಯಾಯಾಧೀಶರ ಮನೆ, ಪೊಲೀಸ್‌ ಕ್ವಾರ್ಟರ್ಸ್‌, ಬ್ಯಾಂಕ್ ಆಫ್‌ ಬರೋಡ ಸಿಬ್ಬಂದಿಯೂ ಒಳಗೊಂಡಿದ್ದಾರೆ. ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ನಲ್ಲಿದ್ದ 16 ಮಂದಿಗೆ ಕೊರೊನಾ ಬಂದಿದೆ. ಆಂಜನೇಯ ದೇವಸ್ಥಾನ ಬಳಿಯ 10 ಮಂದಿ, ಎಸ್‌ಎಸ್‌ ಬಡಾವಣೆಯ 7 ಮಂದಿ, ಎಂಸಿಸಿ ಬಿ. ಬ್ಲಾಕ್‌ನ 6 ಮಂದಿ, ಗಾಂಧಿನಗರದ ಐವರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಹರಿಹರದ 23 ಮಂದಿ, ಹೊನ್ನಾಳಿ, ನ್ಯಾಮತಿಯ 39 ಮಂದಿ, ಜಗಳೂರಿನ 15 ಮಂದಿ, ಚನ್ನಗಿರಿಯ 11 ಮಂದಿಗೆ ಸೋಂಕು ಬಂದಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೇರೆ ಜಿಲ್ಲೆಯ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಪುನರಾವರ್ತನೆಯ ಅಂಕಿ ಸಂಖ್ಯೆ ಸೇರಿ ಜಿಲ್ಲೆಯಲ್ಲಿ ಈವರೆಗೆ 4392  ಸೋಂಕು ತಗುಲಿರುವುದನ್ನು ತೋರಿಸಲಾಗಿದೆ. ಅದರಲ್ಲಿ ಗುರುವಾರ ಬಿಡುಗಡೆಗೊಂಡ 224 ಮಂದಿ ಸೇರಿ 2872 ಮಂದಿ ಗುಣಮುಖರಾಗಿದ್ದಾರೆ. 114 ಮಂದಿ ಮೃತಪಟ್ಟಿದ್ದಾರೆ. 1406 ಸಕ್ರಿಯ ಪ್ರಕರಣಗಳಿವೆ. 27 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು