ಸೋಮವಾರ, ಮಾರ್ಚ್ 30, 2020
19 °C
ಜಾಲಿ ಮುಳ್ಳು ಹಾಕಿ ರಸ್ತೆ ಬಂದ್‌ ಮಾಡಿದ ಸ್ಥಳೀಯರು

ಗಣೇಶ ಬಡಾವಣೆಗೆ ನಾಗರಿಕರ ಸ್ವಯಂ ದಿಗ್ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸ್ಥಳೀಯ ನಿವಾಸಿಗಳು ನಗರದ ಗಣೇಶ ಬಡಾವಣೆ ಪ್ರವೇಶಿಸುವ ಒಳ ರಸ್ತೆಗಳ ಮೇಲೆ ಜಾಲಿ ಮುಳ್ಳುಗಳನ್ನು ಹಾಕುವ ಮೂಲಕ ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ಮನೆಯಲ್ಲೇ ಉಳಿಯುವಂತೆ ಕರೆ ನೀಡಿದ್ದಾರೆ. ಹೀಗಿದ್ದರೂ ಬಡಾವಣೆಯ ರಸ್ತೆಗಳಲ್ಲಿ ಅನಗತ್ಯವಾಗಿ ಹೊರಗಿನವರು ವಾಹನಗಳಲ್ಲಿ ಸುತ್ತಾಡುತ್ತಿದ್ದರು. ಹೀಗಾಗಿ ಬಡಾವಣೆಯ ನಿವಾಸಿಗಳೂ ಹೊರಗೆ ಹೋಗಬಾರದು ಹಾಗೂ ಹೊರಗಿನವರು ಯಾರೂ ಒಳಗೆ ಬರಬಾರದು ಎಂದು ನಾಗರಿಕ ಹಿತರಕ್ಷಣಾ ವೇದಿಕೆಯವರು ರಸ್ತೆಯನ್ನು ಬಂದ್‌ ಮಾಡಲು ನಿರ್ಧರಿಸಿದ್ದೇವೆ’ ಎಂದು ಸ್ಥಳೀಯ ನಿವಾಸಿ ಪರಮೇಶ್ವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಕ್ಕದಲ್ಲೇ ಬಸ್‌ನಿಲ್ದಾಣ ಇದೆ. ಕೊರೊನಾ ಸೋಂಕು ಯಾರಿಗೆ ತಗುಲಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುವುದಿಲ್ಲ. ಪೊಲೀಸರು ನಿರ್ಬಂಧ ಹೇರಿದ್ದರೂ ಜನ ತಿರುಗಾಡುವುದನ್ನು ನಿಲ್ಲಿಸಿಲ್ಲ. ಕೊರೊನಾ ಸೋಂಕಿನ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ಬುಧವಾರ ರಾತ್ರಿ ಜಾಲಿ ಗಿಡಗಳನ್ನು ಕಡಿದು ಬಡಾವಣೆಯ ಒಳಗೆ ಪ್ರವೇಶಿಸುವ ನಾಲ್ಕು ರಸ್ತೆಗಳ ಮೇಲೆ ಹಾಕಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದೇವೆ’ ಎಂದು ಅರವಿಂದ ಹೇಳಿದರು.

‘ಜನ ಓಡಾಡುವುದನ್ನು ನಿಲ್ಲಿಸದೇ ಇದ್ದರೆ ಈ ಸೋಂಕು ಹರಡುವುದನ್ನು ತಡೆಯುವುದು ಬಹಳ ಕಷ್ಟ. ಮುನ್ನೆಚ್ಚರಿಕೆ ಕೈಗೊಳ್ಳದಿದ್ದರೆ ಇಟಲಿ ದೇಶಕ್ಕಾದ ಸ್ಥಿತಿಯೂ ನಮಗೆ ಬರಲಿದೆ. ಆಗ ದೇಶ ಮತ್ತಷ್ಟು ಹಿಂದುಳಿಯುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು