ಸೋಮವಾರ, ಅಕ್ಟೋಬರ್ 26, 2020
20 °C

ಕೋವಿಡ್: ದಾವಣಗೆರೆ ಜಿಲ್ಲೆಯಲ್ಲಿ ಒಂದೇ ದಿನ 1,111 ಮಂದಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 1,111 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಇದು ದಾಖಲೆಯಾಗಿದೆ. 225 ಮಂದಿಗೆ ಕೋವಿಡ್‌–19 ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದಾರೆ.

ಹೊನ್ನಾಳಿ ತಾಲ್ಲೂಕಿನ ಕುಂಬಳೂರು ಗ್ರಾಮದ 77 ವರ್ಷದ ವೃದ್ಧ ಗುರುವಾರ ಮೃತಪಟ್ಟಿದ್ದಾರೆ. ಅವರಿಗೆ ಕೊರೊನಾ ಜೊತೆಗೆ ಅಧಿಕ ರಕ್ತದೊತ್ತಡ ಸಮಸ್ಯೆ ಇತ್ತು. ದಾವಣಗೆರೆ ಪಟ್ಟಣ ಹಾಗೂ ತಾಲ್ಲೂಕು ಸೇರಿ 92, ಹರಿಹರ ತಾಲ್ಲೂಕಿನ 54, ಜಗಳೂರು ತಾಲ್ಲೂಕಿನ 11, ಚನ್ನಗಿರಿ ತಾಲ್ಲೂಕಿನ 29, ಹೊನ್ನಾಳಿ ತಾಲ್ಲೂಕಿನ 36 ಹಾಗೂ ಹೊರ ಜಿಲ್ಲೆಗಳ ಮೂವರು ಮಂದಿ ಸೇರಿ 225 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಬಿಡುಗಡೆ:

ದಾವಣಗೆರೆ ನಗರ ಹಾಗೂ ತಾಲ್ಲೂಕಿನಲ್ಲಿ 643 ಮಂದಿ ಬಿಡುಗಡೆಯಾಗಿದ್ದು, ಹರಿಹರ ತಾಲ್ಲೂಕಿನ 168, ಜಗಳೂರು ತಾಲ್ಲೂಕಿನ 69, ಚನ್ನಗಿರಿ ತಾಲ್ಲೂಕಿನ 115, ಹೊನ್ನಾಳಿ ತಾಲ್ಲೂಕಿನ 104 ಹಾಗೂ ಹೊರ ಜಿಲ್ಲೆಗಳ 12 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯ‌ಲ್ಲಿ 16466 ಮಂದಿಗೆ ಕೋವಿಡ್ ದೃಢಪಟ್ಟಿದ್ದು, 242 ಮಂದಿ ಮೃತಪಟ್ಟಿದ್ದಾರೆ. 14,564 ಮಂದಿ ಗುಣಮುಖರಾಗಿದ್ದಾರೆ. 1660 ಸಕ್ರಿಯ ಪ್ರಕರಣಗಳು ಇವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು