ಗುರುವಾರ , ಅಕ್ಟೋಬರ್ 29, 2020
26 °C

ಕ್ರಿಕೆಟ್ ಬೆಟ್ಟಿಂಗ್‌: ವಿವಿಧೆಡೆ ದಾಳಿ, 8 ಜನರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದ ವಿವಿಧೆಡೆ ಕ್ರಿಕೆಟ್‌ ಬೆಟ್ಟಿಂಗ್‌ ಸಂಬಂಧ ದಾಳಿ ನಡೆಸಿರುವ ಪೊಲೀಸರು 8 ಜನರನ್ನು ಬಂಧಿಸಿ ಒಟ್ಟು ₹ 72 ಸಾವಿರ ನಗದು ಹಾಗೂ 6 ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನೂತನ ಕಾಲೇಜು ರಸ್ತೆಯ ಬಳಿ ಕ್ರಿಕೆಟ್ ಬೆಟ್ಟಿಂಗ್ ಸಂಬಂಧ ಜಯಪ್ರಕಾಶ್ ಗೌಡ, ಚಂದ್ರು, ಅವರನ್ನು ಬಂಧಿಸಿ ₹ 26 ಸಾವಿರ ನಗದು, 2 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಉಳಿದ ಆರೋಪಿಗಳಾದ ಶಾಂತ, ಷಣ್ಮುಖ, ಉಮೇಶ್ ಪರಾರಿಯಾಗಿದ್ದಾರೆ. 

ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯ ರತ್ಮಮ್ಮ ಹಾಸ್ಟೆಲ್ ಬಳಿ ಬೆಟ್ಟಿಂಗ್ ಸಂಬಂಧ ಚಿದಾನಂದಪ್ಪ, ಗಣೇಶ, ಸತ್ಯನಾರಾಯಣ, ಸಂತೋಷ ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ ₹ 24 ಸಾವಿರ ನಗದು, 4 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ಮಂಜುನಾಥ್ ಪರಾರಿಯಾಗಿದ್ದಾನೆ.

ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಮ್ಮ ಪಾರ್ಕ್ ಬಳಿ ಬೆಟ್ಟಿಂಗ್ ಸಂಬಂಧ ವಿದ್ಯಾಧರ್, ಕಿರಣ್ ಅವರನ್ನು ಬಂಧಿಸಿ ₹ 22 ಸಾವಿರ ನಗದು, 1 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ರಾಹುಲ್, ರೋಹಿತ್ ತಲೆಮರೆಸಿಕೊಂಡಿದ್ದಾರೆ. ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು