ಶುಕ್ರವಾರ, ಸೆಪ್ಟೆಂಬರ್ 24, 2021
23 °C

ದಾವಣಗೆರೆ: ತುಂಗಭದ್ರಾ ನದಿಯಲ್ಲಿ ಮೊಸಳೆ ಮರಿ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಸ್ವೆಹಳ್ಳಿ: ಇಲ್ಲಿನ ತುಂಗಭದ್ರಾ ನದಿಯ ದಂಡೆಯ ಮೇಲೆ ಮೊಸಳೆ ಮರಿ ಭಾನುವಾರ ಪತ್ತೆಯಾಗಿದೆ.

ಸಂದೀಪ್ ಎಂಬ ವಿದ್ಯಾರ್ಥಿ ತಿಪ್ಪೆಗೆ ಸಗಣಿ ಹಾಕಲು ಹೋಗಿದ್ದ ಸಂದರ್ಭದಲ್ಲಿ ನದಿಯ ದಂಡೆಯ ಮೇಲೆ ಮೊಸಳೆ ಮರಿ ಹರಿದಾಡುತ್ತಿರುವುದು ಕಂಡಿದೆ.

ಸಂದೀಪ್‌ ಅವರು ಮರಿಯನ್ನು ಪುಟ್ಟಿಯಲ್ಲಿ ಹಾಕಿಕೊಂಡು ಬಂದು ಮನೆಯ ಹಿರಿಯರಿಗೆ ತೋರಿಸಿದ್ದಾರೆ. ಮೊಸಳೆ ಮರಿಯನ್ನು ನೋಡಲು ಸುತ್ತಮುತ್ತಲ ಜನ ಸೇರಿದ್ದರು. ಸಾಸ್ವೆಹಳ್ಳಿ ಗ್ರಂಥಪಾಲಕ ವಿನಯ್ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆ ಮರಿಯನ್ನು ವಶಕ್ಕೆ ಪಡೆದರು.

ಮೊಸಳೆ ಮರಿಯನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗುವುದು ಎಂದು ಉಪವಲಯ ಅರಣ್ಯಾಧಿಕಾರಿ ಮೈಲಾರಸ್ವಾಮಿ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.