ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದ ಬಗ್ಗೆಯೇ ಎಲ್ಲರಿಗೂ ಕುತೂಹಲ

Last Updated 23 ಮೇ 2019, 13:10 IST
ಅಕ್ಷರ ಗಾತ್ರ

ದಾವಣಗೆರೆ: ಅಧಿಕಾರಿಗಳಿಗೆ, ಪೊಲೀಸರಿಗೆ ದಾವಣಗೆರೆ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಕುತೂಹಲ ಇರಲಿಲ್ಲ. ಎಲ್ಲರೂ ಕೇಳುತ್ತಿದ್ದುದು ಮಂಡ್ಯದಲ್ಲಿ ಏನಾಯಿತು ಎಂದು. ಅದಕ್ಕೆ ಉತ್ತರ ಸಿಕ್ಕಿದರೆ ಕಲಬುರ್ಗಿ ಮತ್ತು ತುಮಕೂರುಗಳ ಬಗ್ಗೆ ವಿಚಾರಿಸುತ್ತಿದ್ದರು.

ಭದ್ರತಾ ಪಡೆಯ ಸಿಬ್ಬಂದಿ ಕೂಡ ಪತ್ರಕರ್ತರನ್ನು ತಪಾಸಣೆ ಮಾಡಿ ಮತ ಎಣಿಕೆ ಕೇಂದ್ರಗಳ ಒಳಗೆ ಬಿಟ್ಟುಕೊಳ್ಳುವಾಗ ಕೇಳುವ ಪ್ರಶ್ನೆ ಅದೇ ಆಗಿದ್ದವು. ಕರ್ನಾಟಕದ ಮತ್ತು ದೇಶದಲ್ಲಿ ಯಾವ ಪಕ್ಷಗಳು ಎಷ್ಟು ಮುನ್ನಡೆಯಲ್ಲಿವೆ ಎಂದು ಕೇಳುತ್ತಿದ್ದರು.

ಕೆಲವೇ ಮೇಲಾಧಿಕಾರಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಮೊಬೈಲ್‌ ನಿಷೇಧಿಸಿದ್ದರಿಂದ ಅವರು ಮಾಹಿತಿಗಾಗಿ ಪತ್ರಕರ್ತರನ್ನೇ ಅವಲಂಬಿಸಬೇಕಾಯಿತು. ಮಾಧ್ಯಮ ಕೇಂದ್ರದಲ್ಲಷ್ಟೇ ಟಿ.ವಿ. ಇಡಲಾಗಿತ್ತು. ವಿಶ್ವವಿದ್ಯಾಲಯದ ಆವರಣದಿಂದ ಹೊರಗೆ ಬಂದೋಬಸ್ತು ನಡೆಸುತ್ತಿದ್ದ ಪೊಲೀಸರಿಗೆ ಮಾತ್ರ ಈ ಸಮಸ್ಯೆ ಇರಲಿಲ್ಲ. ಅವರು ಮೊಬೈಲಲ್ಲಿ ದೇಶದ ಫಲಿತಾಂಶವನ್ನು ನೋಡುತ್ತಿದ್ದರು.

ವಿದ್ಯಾವಂತರ ಮತ ತಿರಸ್ಕೃತವೇ ಹೆಚ್ಚು: ಅಂಚೆ ಮತ ಮತ್ತು ಇಟಿಪಿಬಿಎಸ್‌ ಮತಗಳ ಎಣಿಕೆ ಮುಗಿಯುವ ಹೊತ್ತಿಗೆ ಸಂಜೆ 4.30 ದಾಟಿತ್ತು. 2932 ಮತಗಳು ಚಲಾವಣೆಯಾಗಿದ್ದು, ಅದರಲ್ಲಿ 639 ಮತಗಳು ತಿರಸ್ಕೃತಗೊಂಡಿದ್ದವು. ಉಳಿದ 2293 ಮತಗಳಲ್ಲಿ ಜಿ.ಎಂ. ಸಿದ್ದೇಶ್ವರ ಅವರಿಗೆ 1,643 ಮತ್ತು ಎಚ್‌.ಬಿ. ಮಂಜಪ್ಪ ಅವರಿಗೆ 611 ಮತಗಳು ಬಂದಿದ್ದವು. 29 ಮತಗಳು ಇತರರ ಪಾಲಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT