ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಮನೆಯಲ್ಲಿದ್ದರೂ ಫಾಸ್ಟ್ಯಾಗ್‌ನಲ್ಲಿ ಹಣ ಕಡಿತ

Last Updated 3 ಏಪ್ರಿಲ್ 2021, 3:26 IST
ಅಕ್ಷರ ಗಾತ್ರ

ದಾವಣಗೆರೆ: ಕಾರು ಮನೆಯಲ್ಲೇ ನಿಂತಿದ್ದರೂ ಫಾಸ್ಟ್ಯಾಗ್‌ನಿಂದ ಹಣ ಕಡಿತವಾಗಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಿಇಎನ್ ಠಾಣೆಗೆ ದೂರು ನೀಡಲಾಗಿದೆ ಎಂದು ವಕೀಲ ಎಸ್. ಪರಮೇಶ್ ಹೇಳಿದರು.

‘ಇನೋವಾ ಕಾರು ಮಾರ್ಚ್ 31ರ ರಾತ್ರಿ ನನ್ನ ಮನೆಯ ಕಾಂಪೌಂಡ್ ಒಳಗಡೆಯೇ ಇದೆ. ಆದರೆ ಹೆಬ್ಬಾಳ್ ಟೋಲ್‌ನಲ್ಲಿ ₹ 60, ಕುಲಮನಹಳ್ಳಿ ಟೋಲ್‌ನಲ್ಲಿ ₹ 15, ನವಯುಗ ಟೋಲ್‌ನಲ್ಲಿ ₹ 20 ಕಡಿತವಾಗಿದೆ. ಅಲ್ಲದೇ ಗುಯಿಲಾಳು ಟೋಲ್‌ನಲ್ಲಿ ₹ 70 ಹಾಗೂ ಕರ್ಜೀವನ ಟೋಲ್‌ ಪ್ಲಾಜಾದಲ್ಲಿ ₹ 85 ಕಡಿತವಾಗಿದೆ’ ಎಂದು ಆರೋಪಿಸಿದರು.

‘ಇದೇ ರೀತಿ ಮಾರ್ಚ್ 19 ಹಾಗೂಮಾರ್ಚ್ 23ರಂದು ಒಟ್ಟು 7 ಬಾರಿ ಹಣ ಕಡಿತಗೊಂಡಿದ್ದು, ಇದೊಂದು ವೈಟ್ ಕಾಲರ್ ಅಪರಾಧವಾಗಿದೆ. ವಿನಾಕಾರಣ ಹಣ ಕಡಿತಗೊಂಡಿರುವುದರ ಬಗ್ಗೆ ಕೋರ್ಟ್‌ನಲ್ಲಿ ಖಾಸಗಿ ದೂರು (ಪಿಸಿಆರ್) ಹಾಗೂ ಗ್ರಾಹಕ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ₹ 5 ಲಕ್ಷದವರೆಗೂ ಪರಿಹಾರ ಕೇಳಲಾಗುವುದು’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT