ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರಂಗಾ ಜಾಗೃತಿಗೆ ಸೈಕಲ್ ಜಾಥಾ

Last Updated 13 ಆಗಸ್ಟ್ 2022, 4:07 IST
ಅಕ್ಷರ ಗಾತ್ರ

ದಾವಣಗೆರೆ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ತಿರಂಗಾ ಜಾಗೃತಿಯ ಸೈಕಲ್ ಜಾಥಾ ಹಾಗೂ ಮ್ಯಾರಥಾನ್ ನಡೆಯಿತು.

ಕುಸ್ತಿಪಟುಗಳು, ಕ್ರೀಡಾಪಟುಗಳು ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದರು. ಒಂದು ಗುಂಪು ಸೈಕಲ್‌, ಮತ್ತೊಂದು ತಂಡ ಬೈಕ್ ರ‌್ಯಾಲಿಯನ್ನೂ ನಡೆಸಿತು. 10 ತಂಡಗಳಲ್ಲಿ ಯುವಕರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಭಾಗಿಯಾಗಿದ್ದರು.

ನಗರದ ಪಿ.ಜೆ.ಬಡಾವಣೆಯ ರಾಮಮಂದಿರ ಬಳಿ ಆರಂಭವಾದ ಜಾಥಾ, ಎವಿಕೆ ಕಾಲೇಜು ರಸ್ತೆ, ಚಿಗಟೇರಿ ಆಸ್ಪತ್ರೆ ರಸ್ತೆ, ಗುಂಡಿ ಮಹದೆವಪ್ಪ ವೃತ್ತ, ಡೆಂಟಲ್ ಕಾಲೇಜು ರಸ್ತೆ, ವಿದ್ಯಾನಗರ, ಎಸ್‌.ಎಸ್‌ ಕಲ್ಯಾಣಮಂಟಪ ರಸ್ತೆ, ವಿದ್ಯಾರ್ಥಿಭವನ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ ಮೂಲಕ ಹೈಸ್ಕೂಲ್ ಮೈದಾನದಲ್ಲಿ ಅಂತ್ಯಗೊಂಡಿತು.

ಸೈಕಲ್ ಜಾಥಾಗೆ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿ ಸ್ವಾಮಿ ಚಾಲನೆ ನೀಡಿ ಮಾತನಾಡಿ, ‘ಔಪಚಾರಿಕ ಆಚರಣೆಯಲ್ಲಿದ್ದ ಸ್ವಾತಂತ್ರೃ ದಿನವನ್ನು ರಾಷ್ಟ್ರದ ಜನರು ಮುಕ್ತವಾಗಿ ಆಚರಿಸುವ ಅವಕಾಶ ಈಗ ಒದಗಿದೆ. ದೇಶದ ಜನರು ಅರ್ಥಪೂರ್ಣವಾಗಿ ಆಚರಿಸಿ, ಅಮೃತ ಮಹೋತ್ಸವದ ಮಹತ್ವವನ್ನು ಜಗತ್ತಿಗೆ ಸಾರಬೇಕು’ ಎಂದು ಹೇಳಿದರು.

‘ಬಲಿಷ್ಠ ಭಾರತ ನಿರ್ಮಾಣ ಮಾಡುವ ಶಕ್ತಿ ಇಂದಿನ ಯುವ ಪೀಳಿಗೆಯಲ್ಲಿದೆ. ಸೈಕಲ್ ಸವಾರರು, ಕ್ರೀಡಾಪಟುಗಳು ಪಾಲ್ಗೊಂಡು ದೇಶ ಪ್ರೇಮ ಮೆರೆದಿದ್ದಾರೆ’ ಎಂದು ಮಾಜಿ ಮೇಯರ್ ಬಿ.ಜಿ.ಅಜಯ್ ಕುಮಾರ್ ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದಿಂದಲೇ ಮಾತ್ರ ವಿಶ್ವಕ್ಕೆ ಶಾಂತಿ ಸಿಗಲಿದೆ ಎಂಬ ಆಶಾಭಾವನೆ ಇದೆ. ಇಂತಹ ಅಮೃತ ಕ್ಷಣಗಳನ್ನು ಇಡೀ ವಿಶ್ವವೇ ನೋಡಲಿದೆ’ ಬಿಜೆಪಿ ಜಿಲ್ಲಾ ಘಟಕದ ವೀರೇಶ್ ಹನಗವಾಡಿ ಅಭಿಪ್ರಾಯಪಟ್ಟರು.

ಮೇಯರ್ ಜಯಮ್ಮ ಗೋಪಿನಾಯ್ಕ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಮಾಜಿ ಮೇಯರ್ ಎಸ್.ಟಿ. ವೀರೇಶ್, ಪಾಲಿಕೆ ಸದಸ್ಯರಾದ ಸೋಗಿ, ಶಾಂತಕುಮಾರ್, ಕೆ.ಎಂ. ವೀರೇಶ್, ಆರ್.ಎಲ್. ಶಿವಪ್ರಕಾಶ್, ಮುಖಂಡರಾದ ಯಶವಂತರಾವ್ ಜಾಧವ್, ಕೊಂಡಜ್ಜಿ ಜಯಪ್ರಕಾಶ್, ಬಿ.ಎಸ್. ಜಗದೀಶ್, ಅಣಬೇರು ಜೀವನಮೂರ್ತಿ, ಟಿಂಕರ್ ಮಂಜಣ್ಣ, ಕಲ್ಲೇಶ್, ಪಿ.ಸಿ. ಶ್ರೀನಿವಾಸ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT