ಜಗಳೂರು (ದಾವಣಗೆರೆ): ಯಕೃತ್ ಸಿರೋಸಿಸ್ ಕಾಯಿಲೆಯಿಂದಾಗಿ ಸಾವು– ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ತಂದೆಗೆ ಪುತ್ರಿ ನೆರವಾಗಿದ್ದಾರೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಶಿರಸ್ತೇದಾರ್ ಅಜ್ಜಪ್ಪ ಪತ್ರಿ ಅವರಿಗೆ ಮಗಳು ಚಂದನಾ ಯಕೃತ್ ದಾನ ಮಾಡಿ ಮರುಜೀವ ನೀಡಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೊ ಆಸ್ಪತ್ರೆಯಲ್ಲಿ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ತಂದೆ ಹಾಗೂ ಮಗಳು ಚೇತರಿಸಿಕೊಳ್ಳುತ್ತಿದ್ದಾರೆ.

‘ಕೆಲಸದ ಒತ್ತಡದಿಂದ ಅನಾರೋಗ್ಯ ಬಾಧಿಸಿದೆ. ವೈದ್ಯಕೀಯ ವೆಚ್ಚ ಅಂದಾಜು ₹56 ಲಕ್ಷವಾಗಿದ್ದು, ಜೀವನವಿಡೀ ಗಳಿಸಿ, ಉಳಿಸಿದ ಹಣವನ್ನು ಇದಕ್ಕೇ ವ್ಯಯಿಸಿದಂತಾಗಿದೆ. ಸರ್ಕಾರದ ಆರೋಗ್ಯ ಸಂಜೀವಿನಿ ಯೋಜನೆಯಡಿ ಯಾವುದೇ ನೆರವು ಸಿಗುತ್ತಿಲ್ಲ’ ಎಂದು ಅಜ್ಜಪ್ಪ ‘ಪ್ರಜಾವಾಣಿ’ಯೊಂದಿಗೆ ನೋವು ತೋಡಿಕೊಂಡರು.

ಚಂದನಾ ಅವರು ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿದ್ದಾರೆ. ಅಜ್ಜಪ್ಪ ಅವರ ಮನೆಗೆ ಭೇಟಿ ನೀಡಿದ್ದ ಶಾಸಕ ಬಿ. ದೇವೇಂದ್ರಪ್ಪ, ಕುಟುಂಬದವರಿಗೆ ವೈಯಕ್ತಿಕವಾಗಿ ₹ 1 ಲಕ್ಷ ನೆರವು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.