ಶ್ರೀರಾಂಪುರ: ಗ್ರಾಮೀಣ ಭಾಗದ ಯುವಕರಿಗೆ ಸೇನೆ, ರೈಲ್ವೆ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
‘ನಾನು ಸೇನೆಯಲ್ಲಿ ತರಬೇತಿ ಪಡೆದು ಉದ್ಯೋಗ ಹೊಂದಿ ಸ್ವಯಂ ನಿವೃತ್ತಿ ಹೊಂದಿದ್ದೇನೆ. ನಿಮಗೆ ಭಾರತೀಯ ಸೇನೆ, ರೈಲ್ವೆ ಮತ್ತು ಕೇಂದ್ರ ಸರ್ಕಾರದ ಉದ್ಯೋಗ ಕೊಡಿಸುತ್ತೇನೆ ಎಂದು ಹೇಳಿ ಹುಬ್ಬಳ್ಳಿ ಮೂಲದ ಶಿವರಾಜ್ ಹಾಗೂ ಭೀಮವ್ವ ಎಂಬುವವರು ಹೋಬಳಿಯ ಗವಿರಂಗಾಪುರ ಗ್ರಾಮದಲ್ಲಿ ಪ್ರಕಾಶ್ ನಾಯ್ಕ ಸೇರಿದಂತೆ 22 ಜನರಿಂದ ಒಟ್ಟು ₹16,54,000 ಪಡೆದಿದ್ದಾರೆ’ ಎಂದು ಮೋಸಕ್ಕೊಳಗಾದವರು ದೂರಿದ್ದಾರೆ.
‘ಸ್ವಲ್ಪ ದಿನಗಳ ನಂತರ ಉದ್ಯೋಗದ ಪ್ರಕ್ರಿಯೆ ಏನಾಯಿತು ಎಂದು ಕೇಳಿದಾಗ, ನಾನು ಯಾವ ಹಣವನ್ನೂ ಪಡೆದಿಲ್ಲ. ಯಾವುದೇ ಉದ್ಯೋಗ ಕೊಡಿಸುತ್ತೇನೆ ಎಂದು ಹೇಳಿಲ್ಲ ಎಂದು ಶಿವರಾಜ್ ಹೇಳಿದ್ದಾರೆ’ ಎಂದು ದೂರು ನೀಡಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿ ಶಿವರಾಜ್ ಅವರನ್ನು ಬಂಧಿಸಲಾಗಿದೆ ಎಂದು ಶ್ರೀರಾಂಪುರ ಪೊಲೀಸ್ ಇನ್‌ಸ್ಪೆಕ್ಟರ್ ಮಧುಕುಮಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.