ಪಾಂಡೋಮಟ್ಟಿ (ಚನ್ನಗಿರಿ): ‘ಅನುಭವ ಮಂಟಪದಲ್ಲಿ ಶರಣ- ಶರಣೆಯರ ಅನುಭವವನ್ನು ಚರ್ಚೆ ಹಾಗೂ ಚಿಂತನೆ ಮಾಡಿ ಅವುಗಳಿಂದ ಬಂದಂತಹ ಘನಿಯೇ ವಚನಗಳು. ಜ್ಞಾನ ಮತ್ತು ವೈರಾಗ್ಯಕ್ಕೆ ಹೆಸರಾದವರು ಅಲ್ಲಮಪ್ರಭು’ ಎಂದು ಗುರುಬಸವ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಶನಿವಾರ ನಡೆದ 881ನೇ ಮಾಸಿಕ ಶಿವಾನುಭವ ಹಾಗೂ ಅಲ್ಲಮಪ್ರಭು ದೇವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಶರಣರ ಕಾಲದಲ್ಲಿ ಜೀವನ ಆತ್ಮಸ್ಥೈರ್ಯ ಹಾಗೂ ವ್ಯಕ್ತಿತ್ವದ ಮೇಲೆ ಆಧರಿಸಿತ್ತು. ಅನುಭವ ಮಂಟಪದ ಶೂನ್ಯಪೀಠದ ಅಧ್ಯಕ್ಷತೆ ಅಲ್ಲಮಪ್ರಭು ಅವರ ವಿದ್ವತ್ ಮೇಲೆ ಒಲಿದಿದ್ದು, ಅವರು ತತ್ವನಿಷ್ಠೆಗಾಗಿ ತಮ್ಮ ಪ್ರಾಣವನ್ನು ಬಲಿಕೊಟ್ಟಿದ್ದರಿಂದ ಇಂದಿಗೂ ಅವರ ಹೆಸರು ಜನರ ಮನ, ಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತಾಗಿದೆ. ಶರಣರು ಮತ್ತು ದಾರ್ಶನಿಕರು ಸಮಾಜದ ಉನ್ನತಿಗಾಗಿ ಹೋರಾಟ ಮಾಡಿದರು. ಲೌಕಿಕ ವ್ಯವಸ್ಥೆಯನ್ನು ಬದಿಗೊತ್ತಿ ಜನ ಕಲ್ಯಾಣಕ್ಕಾಗಿ ಹೋರಾಟ ನಡೆಸಿದರು’ ಎಂದರು.

‘ಮಕ್ಕಳಿಗೆ ಪೋಷಕರು ಮಾನವೀಯ ಸಂಸ್ಕಾರ ಮತ್ತು ಸಂಸ್ಕೃತಿ ನೀಡಿದರೆ ಅವರ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ. ಶ್ರಮ ಸಂಸ್ಕೃತಿಯನ್ನು ಶರಣರು ನಮಗೆ ನೀಡಿದ್ದಾರೆ. ಮೌಢ್ಯ, ಅಜ್ಞಾನ, ಅಂಧಶ್ರದ್ಧೆ, ಭ್ರಷ್ಟತೆ, ಜಾತೀಯತೆ, ವಂಚನೆ ಇತ್ಯಾದಿ ಸಾಮಾಜಿಕ ಅನಿಷ್ಟಗಳಿಗೆ ದಿವ್ಯೌಷಧಿ ಕಂಡು ಹಿಡಿದವರು ಬಸವಾದಿ ಶಿವಶರಣರು’ ಎಂದು ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ್ ಜಗದೀಶ್ ಹೇಳಿದರು.

ಹೊಳಲ್ಕೆರೆಯ ಡಾ.ಜಿ.ವಿ. ಮಂಜುನಾಥ್, ಇಂಚರ, ಮಾಲೂರು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್. ಬಸವರಾಜ್, ಪಾರ್ವತಮ್ಮ, ದಾನಾಕ್ಷಮ್ಮ, ಶಕುಂತಲಮ್ಮ, ಎಂ.ಬಿ. ನಾಗರಾಜ್, ಡಾ.ರಾಜು, ಶಿವಮೂರ್ತಿ, ಧನಂಜಯ್, ಚಂದ್ರಪ್ಪ, ಎಂ.ಯು. ಚನ್ನಬಸಪ್ಪ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-43-1064057168

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.