ದಾವಣಗೆರೆ: ಈ ಬಾರಿಯ ಬೇಸಿಗೆಯ ಸುಡುಬಿಸಿಲು ತೋಟಗಾರಿಕಾ ಬೆಳೆಗಾರರನ್ನು ಕಂಗೆಡಿಸಿದೆ. ಅದರಲ್ಲೂ, ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ವಿಸ್ತರಿಸಿಕೊಂಡಿರುವ ವಾಣಿಜ್ಯ ಬೆಳೆಯಾದ ಅಡಿಕೆಯು ತೇವಾಂಶ ಕೊರತೆಯಿಂದ ನಲುಗುತ್ತಿದೆ.

ಎಂಟ್ಹತ್ತು ದಿನಗಳಿಂದ ಬಿಸಿಲಿನ ತೀವ್ರತೆ ಒಂದೇ ರೀತಿಯಾಗಿದೆ. 36 ಡಿಗ್ರಿ ಸೆಲ್ಸಿಯಸ್ನಿಂದ 38 ಡಿಗ್ರಿ ಸೆಲ್ಸಿಯಸ್ನಷ್ಟು ಉಷ್ಣತೆ ಆವರಿಸಿದೆ. ಬಿಸಿಲಿನ ತಾಪವನ್ನು ತಾಳಿಕೊಳ್ಳಲು ಸಾಧ್ಯವಾಗದೇ, ಅಡಿಕೆ ಮರದ ಹರಳು ಉದುರುತ್ತಿವೆ. ತೇವಾಂಶ ಕಾಪಾಡಿಕೊಳ್ಳಲು ಎಷ್ಟೇ ಯತ್ನಿಸಿದರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಇದು ಅಡಿಕೆ ಫಸಲಿನ ಮೇಲಿದ್ದ ರೈತರ ನಿರೀಕ್ಷೆಯನ್ನು ಕಮರಿಸಿದೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಬಿಸಿಲಿನ ತಾಪ ತೀವ್ರವಾಗಿರುವುದು ಸಮಸ್ಯೆ ಉಲ್ಬಣಿಸಲು ಕಾರಣ. ಮಳೆ ಸುರಿಯದೇ ಇದೇ ಪರಿಸ್ಥಿತಿ ಇನ್ನೂ ಎರಡು ವಾರ ಮುಂದುವರಿದರೆ ಇಳುವರಿಯಲ್ಲಿ ಶೇ 30ರಿಂದ ಶೇ 40ರಷ್ಟು ಕುಸಿತವಾಗುವ ಸಾಧ್ಯತೆಯಿದೆ’ ಎಂದು ತೋಟಗಾರಿಕೆ ಇಲಾಖೆ ಅಂದಾಜಿಸಿದೆ. ಒಂದೆರೆಡು ಮಳೆಯಾದರೆ ಪರಿಸ್ಥಿತಿ ಸಹಜ ಸ್ಥಿತಿಗೆ ಬರಬಹುದು ಎಂಬ ನಿರೀಕ್ಷೆ ಇದೆ.

ತೋಟಗಾರಿಕಾ ಬೆಳೆಗಳಿಗೆ ತೇವಾಂಶ ಅತಿಮುಖ್ಯ. ನೀರಾವರಿ ಸೌಲಭ್ಯವಿದ್ದರೂ ಬೇಸಿಗೆಯ ಅವಧಿಯಲ್ಲಿ ಮರಗಳು ಕಳೆಗುಂದುತ್ತವೆ. ಹರಳು ಮರದಲ್ಲಿ ನಿಲ್ಲಲು ಬಿಸಿಗಾಳಿ ಆಸ್ಪದ ನೀಡುತ್ತಿಲ್ಲ. ತೋಟದ ಸುತ್ತಲೂ ಹಸಿರು ಬೇಲಿಯನ್ನು ಅಳವಡಿಸಿದರೆ ಬಿಸಿಗಾಳಿಯ ಹೊಡೆತವನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಿಸಬಹುದು. ಇಂತಹ ಹಲವು ಕ್ರಮಗಳನ್ನು ರೈತರು ಅಳವಡಿಸಿಕೊಂಡರೆ ನಷ್ಟದ ಪ್ರಮಾಣವನ್ನು ತಗ್ಗಿಸಬಹುದು ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಿ. ರಾಘವೇಂದ್ರ ಪ್ರಸಾದ್.

ತೆಂಗಿನ ಮರಗಳಲ್ಲೂ ಹರಳು ಉದುರುವ ಸಮಸ್ಯೆ ಕಾಣಿಸಿಕೊಂಡಿದರೆ. ಆದರೆ ಅದು ವರ್ಷಪೂರ್ತಿ ಬೆಳೆಯಾಗಿರುವ ಕಾರಣ, ಮಳೆ ಬಿದ್ದಾಗ ಹೊಸ ಹೊಂಬಾಳೆ ಮೂಡಿತ್ತವೆ. ಹೀಗಾಗಿ ತೆಂಗಿನ ಹರಳು ಉದುರುವುದರಿಂದ ಅಷ್ಟ ನಷ್ಟವಾಗದು ಎಂಬುದು ಅಧಿಕಾರಿಗಳ ಅಭಿಪ್ರಾಯ. ಆದರೆ, ಬೇಸಿಗೆಯಲ್ಲಿ ಕಪ್ಪುತಲೆ ಹುಳಗಳ ಕಾಟ ಹೆಚ್ಚಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಾರೆ.

ಕಳೆದ ವರ್ಷ ಅಡಿಕೆಯ ಉತ್ತಮ ಫಸಲು ಬಂದಿತ್ತು. ಈ ಬಾರಿ ಬೇಸಿಗೆಯ ಆರಂಭವೇ ಬಿರುಸಾಗಿದೆ. ಶೇ 20ಕ್ಕಿಂತ ಹೆಚ್ಚು ಇಳುವರಿ ಖೋತಾ ಅಗುವ ಸಾಧ್ಯತೆಯಿದೆ ಎಂದು ರೈತ ಶಶಿಕುಮಾರ್ ಆತಂಕ ವ್ಯಕ್ತಪಡಿಸುತ್ತಾರೆ.

ಬೇಸಿಗೆಯಲ್ಲಿ ತೋಟಗಾರಿಕೆ ಬೆಳೆಗಳ ನಿರ್ವಹಣೆ ರೈತರಿಗೆ ಸವಾಲಾಗಿದೆ. ಆದರೆ ಸಾಂಪ್ರದಾಯಕ ಗೊಬ್ಬರಗಳ ಜೊತೆಗೆ ಲಘು ಪೋಷಕಾಂಶ ನಿರ್ವಹಣೆ ವಿಧಾನವನ್ನು ಅಳವಡಿಸಿಕೊಂಡರೆ ಆಗಬಹುದಾದ ನಷ್ಟವನ್ನು ಒಂದಿಷ್ಟು ತಡೆಗಟ್ಟಬಹುದು ಎಂದು ಅಭಿಪ್ರಾಯಪಡುತ್ತಾರೆ.

ಜಿಲ್ಲೆಯಲ್ಲಿ 1.80 ಲಕ್ಷ ಹೆಕ್ಟೇರ್ನಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಈ ಪೈಕಿ 60,000ದಿಂದ 70,000 ಹೆಕ್ಟೇರ್ನಲ್ಲಿರುವ ಅಡಿಕೆ ಮರಗಳು ಫಸಲು ನೀಡುತ್ತಿವೆ. 7,000 ಹೆಕ್ಟೇರ್ನಲ್ಲಿ ತೆಂಗು ಬೆಳೆ ಇದೆ.

15–20 ದಿನಗಳಿಂದ ಅಡಿಕೆ ಹಾಗೂ ತೆಂಗಿನ ಹರಳು ಉದುರುತ್ತಿವೆ. ಈ ಮಧ್ಯೆ ಒಂದಿಷ್ಟು ಮಳೆಯಾಗಿದ್ದರೆ ಹರಳು ಉದುರುವುದು
ನಿಯಂತ್ರಣಕ್ಕೆ ಬರುತ್ತಿತ್ತು
ಶಶಿಕುಮಾರ್, ಅಡಿಕೆ ಬೆಳೆಗಾರ

ಅಡಿಕೆ ಕಾಯಿಕಟ್ಟುವ ಈ ಹಂತದಲ್ಲಿ ನೀರಿನ ಅಗತ್ಯ ಇರುತ್ತದೆ. ಇಂತಹ ಸಮಯದಲ್ಲಿ ಬಿಸಿಗಾಳಿ ಆಘಾತ ನೀಡಿದರೆ ನಷ್ಟ ಖಚಿತ. ತುರ್ತಾಗಿ ಮಳೆಯ ಅಗತ್ಯವಿದೆ
ಜಿ. ರಾಘವೇಂದ್ರ ಪ್ರಸಾದ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ

ತೇವಾಂಶ ನಿರ್ವಹಣೆ ಕ್ರಮಗಳು

ಅಡಿಕೆ ಹಾಗೂ ತೆಂಗಿನ ಮರಗಳ ಸುತ್ತಲೂ ಮುಚ್ಚಿಗೆ ಹಾಕುವುದರಿಂದ ತೇವಾಂಶವನ್ನು ಆದಷ್ಟೂ ಕಾಪಾಡಿಕೊಳ್ಳಬಹುದು. ಈ ಅವಧಿಯಲ್ಲಿ ಮರಗಳ ನಡುವೆ ಉಳುಮೆ ಮಾಡಬಾರದು. ಮಣ್ಣಿನ ಮೇಲೆ ಬಿಸಿಲಿನ ಕಿರಣ ನೇರವಾಗಿ ಬೀಳುವುದರಿಂದ ತೇವಾಂಶ ನಷ್ಟವಾಗುತ್ತದೆ. ಮರಗಳ ಬುಡಕ್ಕೆ ಸುಣ್ಣ ಬಳಿಯುವುದರಿಂದ ಬಿಸಿಲಿನ ಹೊಡೆತವನ್ನು ಒಂದಿಷ್ಟು ತಡೆಯಬಹುದಾದರೂ, ಅದು ಅಷ್ಟು ಪರಿಣಾಮಕಾರಿಯಲ್ಲ. ಮಿಶ್ರ ಬೆಳೆ ಪದ್ಧತಿಯು ಇಂತಹ ಸಮಯದಲ್ಲಿ ನೆರವಾಗುತ್ತದೆ. ಮರಗಳ ನಡುವೆ ಕೊಕ್ಕೊ ಮೊದಲಾದ ಗಿಡಗಳನ್ನು ನಾಟಿ ಮಾಡಬೇಕು.

ತೋಟದಲ್ಲಿ ಸ್ಪಿಂಕ್ಲರ್ ಅಳವಡಿಸಿಕೊಂಡರೆ ಮರದ ಸುತ್ತಲೂ ನೀರಿನ ಪಸೆಯನ್ನು ನಿರಂತರವಾಗಿ ಕಾಪಾಡಿಕೊಳ್ಳಬಹುದು. ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದರೆ, ನೀರು ನಿರ್ವಹಣೆ ವಿಚಾರದಲ್ಲಿ ಜಾಗ್ರತೆ ವಹಿಸಬೇಕು.

‘ಕಂಟ್ರೊಲರ್’ ಉಪಕರಣವನ್ನು ಅಳವಡಿಸಿಕೊಳ್ಳುವುದರಿಂದ ನೀರು ಪೋಲಾಗದಂತೆ ತಡೆಯಬಹುದು. ಮರಗಳಿಗೆ ನಿಗದಿತ ಪ್ರಮಾಣದಷ್ಟೇ ನೀರು ಹರಿಸಿ, ಮಿತವ್ಯಯ ಸಾಧಿಸಬಹುದು. ಮರದ ಬುಡಕ್ಕಷ್ಟೇ ನೀರು ಹರಿಸದೇ, ಅದರ ಸುತ್ತಲೂ ಎರಡು ಅಡಿಯಷ್ಟು ಸುತ್ತಳತೆಯಲ್ಲಿ ನೀರು ಹಾಯಿಸಬೇಕು. ಆಗ ಮರದ ‘ಫೀಡರ್ ರೂಟ್’ ಮೂಲಕ ಪೋಷಕಾಂಶ ನೇರವಾಗಿ ತಲುಪುತ್ತದೆ ಎಂದು ಅಧಿಕಾರಿಗಳು ಸಲಹೆ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.