ದಾವಣಗೆರೆ: ಶಿಕ್ಷಣ ಸಚಿವೆಯಾಗಿದ್ದ ನಾಗಮ್ಮ ಕೇಶವಮೂರ್ತಿ 1983ರಲ್ಲಿ ಮಾಯಕೊಂಡ ತೊರೆದು ದಾವಣಗೆರೆ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಮುಸ್ಲಿಮರ ಅಸಮಾಧಾನ ಸ್ಫೋಟಗೊಂಡಿತು. ಎಚ್.ಮೊಹಮ್ಮದ್ ಇಕ್ಬಾಲ್ ಸಾಬ್ ಕಾಂಗ್ರೆಸ್ ತೊರೆದು ಪಕ್ಷೇತರರಾಗಿ ಕಣಕ್ಕಿಳಿದರು. ‘ಕೈ’ ಪಾಳೆಯದ ಬಂಡಾಯದಲ್ಲಿ ‘ಸಿಪಿಐ’ನ ಪಂಪಾಪತಿ ವಿಜೇತರಾದರು. ನಾಗಮ್ಮ 3ನೇ ಸ್ಥಾನಕ್ಕೆ ಕುಸಿದರು.

ದಾವಣಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಅನುಭವಿಸಿದ ಈ ಸೋಲು ಕಾಂಗ್ರೆಸ್ ನಾಯಕರನ್ನು ದುಃಸ್ವಪ್ನವಾಗಿ ಕಾಡಿದೆ. ಮುಸ್ಲಿಂ ಸಮುದಾಯದ ಬಂಡಾಯದ ತೀವ್ರತೆ ಕಾಂಗ್ರೆಸ್ಗೆ ಒಂದು ಪಾಠದಂತೆ ಇತಿಹಾಸದ ಪುಟ ಸೇರಿದೆ. ಉಪಚುನಾವಣೆಯಲ್ಲಿ ‘ಕೈ’ ಪಡೆ ಇದೇ ರೀತಿಯ ಬಂಡಾಯ, ಅಸಮಾಧಾನ ಎದುರಿಸುತ್ತಿದೆ.

ಗುಂಡೂರಾವ್ ನೇತೃತ್ವದ ಸರ್ಕಾರದಲ್ಲಿ ನಾಗಮ್ಮ ಕೇಶವಮೂರ್ತಿ ಸಚಿವೆಯಾಗಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ (ಸಿಐಟಿಬಿ) ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ಸಮುದಾಯ ಬೇಡಿಕೆ ಇಟ್ಟಿತ್ತು. ಇದು ಕೈತಪ್ಪಿದ್ದರಿಂದ 1983ರ ಚುನಾವಣೆಯಲ್ಲಿ ಅಸಮಾಧಾನ ಸ್ಫೋಟಗೊಂಡಿತು. ಕಣದಲ್ಲಿದ್ದ 9 ಜನ ಅಭ್ಯರ್ಥಿಗಳಲ್ಲಿ ಮೂವರು ಮುಸ್ಲಿಮರಿದ್ದರು. ಇವರಲ್ಲಿ ಮೊಹಮ್ಮದ್ ಇಕ್ಬಾಲ್ ಅವರ ‘ಒಂಟೆ’ ಗುರುತಿಗೆ ಸಮುದಾಯದ ಬೆಂಬಲವೂ ಸಿಕ್ಕಿತ್ತು. ಇವರಿಗೆ ಶೇ 23.67 ಮತಗಳು ಸಿಕ್ಕರೆ ನಾಗಮ್ಮ ಅವರಿಗೆ ಶೇ 19.22 ಮತಗಳು ದಕ್ಕಿದವು.

45 ಮುಸ್ಲಿಮರ ಸ್ಪರ್ಧೆ: 1957ರಿಂದ ಈವರೆಗೆ ಕ್ಷೇತ್ರಕ್ಕೆ ನಡೆದ 15 ಚುನಾವಣೆಗಳಲ್ಲಿ ಮುಸ್ಲಿಂ ಸಮುದಾಯದ 45 ಜನ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಆದರೆ, ಯಾರೊಬ್ಬರೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಬೆರಳೆಣಿಕೆಯ ಜನರನ್ನು ಹೊರತುಪಡಿಸಿ ಬಹುತೇಕರು ಠೇವಣಿ ಕಳೆದುಕೊಂಡಿದ್ದಾರೆ.

1957, 1962, 1967, 1972 ಹಾಗೂ 2004ರಲ್ಲಿ ಯಾವೊಬ್ಬ ಅಲ್ಪಸಂಖ್ಯಾತರೂ ಚುನಾವಣಾ ಅಖಾಡದಲ್ಲಿರಲಿಲ್ಲ. 1978ರಲ್ಲಿ ಖಾಜಾ ಮೊಹಿದ್ದೀನ್ ಸಾಬ್ ಪಕ್ಷೇತರರಾಗಿ ಸ್ಪರ್ಧಿಸಿ ಶೇ 9.46 ಮತಗಳನ್ನು ಪಡೆದಿದ್ದರು. ಅಲ್ಲಿಂದ ಕ್ಷೇತ್ರದ ಮುಸ್ಲಿಂ ನಾಯಕರು ವಿಧಾನಸಭಾ ಚುನಾವಣೆಯ ಕಡೆಗೆ ಹೆಚ್ಚು ಒಲವು ತೋರಿದ್ದಾರೆ.

1985ರಲ್ಲಿ ನಾಲ್ವರು ಅಲ್ಪಸಂಖ್ಯಾತರು ಚುನಾವಣಾ ಕಣದಲ್ಲಿದ್ದರು. ಇದರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಮೊಹಮ್ಮದ್ ಕೊಯಾ ಶೇ 4.97ರಷ್ಟು ಮತ ಪಡೆದಿದ್ದರು. ಇದು ಬಿಜೆಪಿ ಪಡೆದ ಒಟ್ಟು ಮತಗಳ ಎರಡರಷ್ಟಾಗಿತ್ತು. 1989ರಲ್ಲಿ 6 ಜನ ಮುಸ್ಲಿಂ ನಾಯಕರು ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಇದರಲ್ಲಿ ಜೆಎನ್ಪಿ ಪಕ್ಷದ ಮರ್ದಾನ್ ಸಾಬ್ ಎಂಬುವರು ಶೇ 11 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಉಳಿದವರು ತಲಾ ಶೇ 0.50 ಮತ ಪಡೆಯಲೂ ಸಾಧ್ಯವಾಗಿರಲಿಲ್ಲ.

1994ರಲ್ಲಿ ಕಣದಲ್ಲಿದ್ದ ಇಬ್ಬರು ಅಲ್ಪಸಂಖ್ಯಾತರ ಪೈಕಿ ಅತಾವುಲ್ಲಾ ಅವರು ಎಸ್.ಬಂಗಾರಪ್ಪ ಸ್ಥಾಪಿಸಿದ್ದ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ (ಕೆಸಿಪಿ) ಸ್ಪರ್ಧಿಸಿ ಶೇ 12.75 ಮತ ಪಡೆದಿದ್ದರು. 1999ರಲ್ಲಿ ಇಬ್ಬರು, 2008ರಲ್ಲಿ ಮೂವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.

ಹುರಿಯಾಳುಗಳ ಸಂಖ್ಯೆ ಹೆಚ್ಚಳ: 2013ರಲ್ಲಿ ಕಣದಲ್ಲಿದ್ದ 15 ಅಭ್ಯರ್ಥಿಗಳಲ್ಲಿ 9 ಜನ ಮುಸ್ಲಿಮರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೆ.ಸೈಯದ್ ಸೈಫುಲ್ಲಾ ಶೇ 21 ಮತಗಳನ್ನು ಪಡೆದಿದ್ದರು. 2018ರಲ್ಲಿ ಕಣದಲ್ಲಿ ಉಳಿದ 11 ಅಭ್ಯರ್ಥಿಗಳಲ್ಲಿ 7 ಜನ ಉಮೇದುವಾರರು ಮುಸ್ಲಿಮರು. ಜೆಡಿಎಸ್ ಹುರಿಯಾಳಾಗಿದ್ದ ಕೆ.ಅಮಾನುಲ್ಲಾ ಖಾನ್ ಶೇ 4.42 ಮತ ಪಡೆದರು. ಉಳಿದ ಮುಸ್ಲಿಂ ಅಭ್ಯರ್ಥಿಗಳು ನೋಟಾಗಿಂತಲೂ ಕಡಿಮೆ ಮತ ಪಡೆದಿದ್ದಾರೆ.

2023ರಲ್ಲಿ ಕಣದಲ್ಲಿದ್ದ 16 ಅಭ್ಯರ್ಥಿಗಳ ಪೈಕಿ 8 ಜನ ಮುಸ್ಲಿಮರಿದ್ದರು. ವಿಜೇತ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಪರಾಜಿತ ಬಿಜೆಪಿ ಅಭ್ಯರ್ಥಿ ಹೊರತುಪಡಿಸಿ ಯಾರೊಬ್ಬರೂ ಶೇ 1ರಷ್ಟು ಮತ ಪಡೆದಿಲ್ಲ.

ಮೊದಲ ಬಾರಿಗೆ ಅಧಿಕ ನಾಮಪತ್ರ

ದಕ್ಷಿಣ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ 45 ನಾಮಪತ್ರಗಳು ಸಲ್ಲಿಕೆಯಾಗಿವೆ. ಕ್ಷೇತ್ರ ಪುನರ್ ವಿಂಗಡಣೆಯ ಬಳಿಕ ನಡೆದ ನಾಲ್ಕು ಸಾರ್ವತ್ರಿಕ ಚುನಾವಣೆಯಲ್ಲಿ ಇಷ್ಟು ಪ್ರಮಾಣದಲ್ಲಿ ಉಮೇದುವಾರಿಕೆಗಳು ಎಂದೂ ಸಲ್ಲಿಕೆಯಾಗಿರಲಿಲ್ಲ.

2008ರಲ್ಲಿ 17 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದರು. 2013ರಲ್ಲಿ 26, 2018ರಲ್ಲಿ 12 ಹಾಗೂ 2023ರಲ್ಲಿ 23 ಹುರಿಯಾಳುಗಳು ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದರು. ಉಪಚುನಾವಣೆಯ ಕಾರಣಕ್ಕೆ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಾಂಗ್ರೆಸ್ಗೆ ಬಂಡಾಯದ ಬಿಸಿ

ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಂಡಾಯದ ಬಿಸಿ ಎದುರಾಗಿದೆ. ‘ಬಿ’ ಫಾರಂ ಕೈತಪ್ಪಿದ್ದರಿಂದ ಕಾಂಗ್ರೆಸ್ ಮುಖಂಡ ಸಾದಿಕ್ ಪೈಲ್ವಾನ್ ಪಕ್ಷೇತರರಾಗಿ ಕಣದಲ್ಲಿದ್ದಾರೆ.

ಇದೇ ಮೊದಲ ಬಾರಿಗೆ ಮುಸ್ಲಿಂ ಸಮುದಾಯದ 22 ಜನ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ ಒಬ್ಬರ ನಾಮಪತ್ರ ತಿರಸ್ಕೃತಗೊಂಡಿದೆ. ನಾಮಪತ್ರ ಹಿಂಪಡೆಯಲು ಮಾರ್ಚ್ 26 ಕೊನೆಯ ದಿನವಾಗಿದ್ದು, 21 ಜನರಲ್ಲಿ ಎಷ್ಟು ಜನ ಕಣದಲ್ಲಿ ಉಳಿಯಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.