ದಾವಣಗೆರೆ: ಇಲ್ಲಿನ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಭಾರತ ಹವಮಾನ ಇಲಾಖೆ (ಐಎಂಡಿ) ಸ್ಥಾಪಿಸಿದ ‘ಕೃಷಿ ಸ್ವಯಂಚಾಲಿತ ಹವಾಮಾನ ಕೇಂದ್ರ’ (ಎಡಬ್ಲ್ಯೂಎಸ್) ಕಾರ್ಯಾರಂಭಕ್ಕೆ ಸಜ್ಜಾಗಿದೆ. ಮಳೆ, ಗಾಳಿ, ತೇವಾಂಶ ಹಾಗೂ ತಾಪಮಾನಕ್ಕೆ ಸಂಬಂಧಿಸಿದ ಸೇವೆಯನ್ನು ಜೂನ್ 1ರಿಂದ ಒದಗಿಸಲಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ಹಾಗೂ ಹಿರಿಯೂರಿನ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರವು ದಾವಣಗೆರೆ ಜಿಲ್ಲೆಯ ಹವಾಮಾನಕ್ಕೆ ಸಂಬಂಧಿಸಿದ ಮಾಹಿತಿ, ಮುನ್ಸೂಚನೆಯನ್ನು ನೀಡುತ್ತಿದೆ. ಭಾರತ ಹವಮಾನ ಇಲಾಖೆ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕೃಷಿ ಕೇಂದ್ರಿತವಾದ ಹವಾಮಾನ ಕೇಂದ್ರವನ್ನು ಸ್ಥಾಪಿಸಿದ್ದು, ನಿಖರ ಮಾಹಿತಿ ಕಲೆಹಾಕಲು ಸುಲಭವಾಗಲಿದೆ.

‘ಎಡಬ್ಲ್ಯೂಎಸ್’ಗೆ ಅಗತ್ಯ ಸ್ಥಳಾವಕಾಶವನ್ನು ನೀಡಿದ್ದೇವೆ. ಸೆನ್ಸಾರ್ ಆಧಾರಿತ ಉಪಕರಣ ಅಳವಡಿಸುವ ಕಾರ್ಯ ಮುಕ್ತಾಯವಾಗಿದೆ. ಉಪಕರಣಗಳು ಒದಗಿಸುವ ಮಾಹಿತಿ ಸ್ವಯಂಚಾಲಿತವಾಗಿ ಹವಾಮಾನ ಇಲಾಖೆಯ ಜಾಲತಾಣಕ್ಕೆ ರವಾನೆಯಾಗಲಿದೆ. ಕೇಂದ್ರದ ಮೇಲುಸ್ತುವಾರಿ ಜವಾಬ್ದಾರಿ ಮಾತ್ರ ನಮ್ಮದು’ ಎಂದು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಟಿ.ಎನ್. ದೇವರಾಜ್ ತಿಳಿಸಿದರು.

ಮಳೆ ಮಾಪನ, ಗಾಳಿಯ ವೇಗ, ತೇವಾಂಶದ ಪ್ರಮಾಣ, ತಾಪಮಾನ ಅಳೆಯುವ ಸ್ವಯಂಚಾಲಿತ ಉಪಕರಣಗಳು ಈ ಕೇಂದ್ರದಲ್ಲಿವೆ. ಸುತ್ತಲಿನ ಪ್ರದೇಶದ ವಾತಾವರಣದ ಮಾಹಿತಿಯನ್ನು ಉಪಕರಣಗಳು ಪ್ರತಿ 15 ನಿಮಿಷಕ್ಕೊಮ್ಮೆ ರವಾನಿಸಲಿವೆ. ಇದರ ಆಧಾರದ ಮೇರೆಗೆ ದತ್ತಾಂಶ ವಿಶ್ಲೇಷಣೆ ಮಾಡಲಾಗುತ್ತದೆ. ಕೃಷಿ ಚುಟುವಟಿಕೆಗಳಿಗೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಇದರಿಂದ ಅನುಕೂಲವಾಗಲಿದೆ.

‘ಸಾಮಾನ್ಯವಾಗಿ ತಾಪಮಾನ ಹೆಚ್ಚಿರುವ ಸಂದರ್ಭ ರಸ ಹೀರುವ ಕೀಟಗಳ ಬಾಧೆ ಹೆಚ್ಚು. ಕೀಟ, ರೋಗಗಳ ಹಾವಳಿಯ ಸಾಧ್ಯತೆ ಬಗ್ಗೆ ರೈತರಿಗೆ ಸಲಹೆ ನೀಡಲು ನಿಖರ ಮಾಹಿತಿ ಅನುಕೂಲ ಕಲ್ಪಿಸಲಿದೆ. ವರ್ಷವಿಡೀ ಸುರಿದ ಮಳೆಯ ದತ್ತಾಂಶ ಗಮನಿಸಿ ಅಂತರ್ಜಲ ಮಟ್ಟ ನಿರ್ಧರಿಸಲು ಸಾಧ್ಯವಾಗಲಿದೆ. ಆವಿಯಾದ ನೀರಿನಲ್ಲಿ ಎಷ್ಟು ಪ್ರಮಾಣ ಮಳೆಯ ರೂಪದಲ್ಲಿ ಭೂಮಿಗೆ ಮರಳಿತು ಎಂಬ ಜಲಚಕ್ರದ ವಿಶ್ಲೇಷಣೆ, ಕೃಷಿಗೆ ಸಂಬಂಧಿಸಿದ ನೀತಿಗಳನ್ನು ರೂಪಿಸಲು ಈ ಕೇಂದ್ರ ಸಹಕಾರಿ ಆಗಲಿದೆ’ ಎಂದು ದೇವರಾಜ್ ವಿವರಿಸಿದರು.

206 ಮಳೆ ಮಾಪನ ಕೇಂದ್ರ

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರಕ್ಕೆ ಸಂಬಂಧಿಸಿದ 206 ಮಳೆ ಮಾಪನ ಹಾಗೂ 30 ಹವಾಮಾನ ಮಾಪನ ಕೇಂದ್ರಗಳು ಜಿಲ್ಲೆಯಲ್ಲಿವೆ.

ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಮಳೆ ಮಾಪನ ಕೇಂದ್ರವನ್ನು ರಾಜ್ಯ ಸರ್ಕಾರ ಅಳವಡಿಸಿದೆ. ನಗರ ಪ್ರದೇಶದ ಹಲವೆಡೆ ಕೂಡ ಇಂತಹ ಕೇಂದ್ರಗಳಿವೆ. ತಾಪಮಾನ ಹಾಗೂ ಗಾಳಿಯ ವೇಗದ ಮಾಹಿತಿಯನ್ನು ಹವಾಮಾನ ಮಾಪನ ಕೇಂದ್ರಗಳು ಒದಗಿಸುತ್ತಿವೆ. ಈ ಮಾಹಿತಿಯನ್ನು ಆಧರಿಸಿ ಕೃಷಿ ಇಲಾಖೆ ರೈತರಿಗೆ ಮಾಹಿತಿ ಹಾಗೂ ಮುನ್ಸೂಚನೆ ನೀಡುತ್ತದೆ.

ಈ ಹವಾಮಾನ ಕೇಂದ್ರವನ್ನು ಕೃಷಿಗೆ ಪೂರಕವಾಗಿ ರೂಪಿಸಲಾಗಿದೆ. ಉಪಕರಣ ಅಳವಡಿಕೆ ಕಾರ್ಯವನ್ನು ತಂತ್ರಜ್ಞರು ಪೂರ್ಣಗೊಳಿಸಿದ್ದು. ಶೀಘ್ರದಲ್ಲಿ ಕಾರ್ಯಾರಂಭವಾಗಲಿದೆ
ಟಿ.ಎನ್. ದೇವರಾಜ್, ಮುಖ್ಯಸ್ಥರು, ತರಳಬಾಳು ಕೃಷಿ ವಿಜ್ಞಾನ ಕೇಂದ್ರ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-43-881671224

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.