ದಾವಣಗೆರೆ/ಬಾಗಲಕೋಟೆ: ಉಪ ಚುನಾವಣೆ ನಡೆಯುತ್ತಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರದಲ್ಲಿ ಮಂಗಳವಾರ ನಾಮಪತ್ರಗಳ ಪರಿಶೀಲನೆ ನಡೆದಿದ್ದು, ಐವರ ನಾಮಪತ್ರಗಳು ತಿರಸ್ಕೃತಗೊಂಡವು.

ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಲ್ಲಿಕೆಯಾಗಿದ್ದ 45 ನಾಮಪತ್ರಗಳಲ್ಲಿ ಮೂವರ ನಾಮಪತ್ರಗಳು ತಿರಸ್ಕೃತಗೊಂಡಿವೆ. 36 ಅಭ್ಯರ್ಥಿಗಳ 42 ನಾಮಪತ್ರಗಳು ಕ್ರಮಬದ್ಧವಾಗಿವೆ.

ಬಿಜೆಪಿ ಹೆಸರಲ್ಲಿ ಯಶವಂತರಾವ್ ಜಾಧವ್, ಕಾಂಗ್ರೆಸ್ ಹೆಸರಲ್ಲಿ ಸಾದಿಕ್ ಪೈಲ್ವಾನ್, ಕರ್ನಾಟಕ ರಾಷ್ಟ್ರ ಸಮಿತಿ ಹೆಸರಲ್ಲಿ ಎಚ್.ಕೆ.ದಾವಲ್ಸಾಬ್ ಸಲ್ಲಿಸಿದ್ದ ನಾಮಪತ್ರಗಳು ತಿರಸ್ಕೃತಗೊಂಡವರು.

ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ಸಾದಿಕ್ ಪೈಲ್ವಾನ್ ಅವರು ಪಕ್ಷೇತರರಾಗಿ ಸಲ್ಲಿಸಿದ್ದ ಮತ್ತೊಂದು ನಾಮಪತ್ರ ಊರ್ಜಿತವಾಗಿದೆ.

ಬಾಗಲಕೋಟೆ ವರದಿ: ‘ಬಾಗಲಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ಪರಶುರಾಮ ನೀಲನಾಯಕ ಮತ್ತು ಬಾಬುಷಾ ರೊಳ್ಳಿ ಅವರು ಸೂಕ್ತ ದಾಖಲೆ ಸಲ್ಲಿಸಿಲ್ಲ ಎಂದು ನಾಮಪತ್ರ ತಿರಸ್ಕೃತವಾಗಿವೆ.

16 ಮಂದಿ ನಾಮಪತ್ರ ಸಲ್ಲಿಸಿದ್ದರು. ಇಬ್ಬರ ನಾಮಪತ್ರ ತಿರಸ್ಕೃತವಾಗಿದ್ದು, 14 ಮಂದಿ ಕಣದಲ್ಲಿ ಉಳಿದಿದ್ದಾರೆ ಎಂದು ಚುನಾವಣಾಧಿಕಾರಿ ಸಂತೋಷ ಜಗಲಾಸರ ತಿಳಿಸಿದರು.

ನಾಮಪತ್ರ ವಾಪಸು ಪಡೆಯಲು ಮಾರ್ಚ್ 26 ಕಡೆಯ ದಿನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.