ಹೊನ್ನಾಳಿ: ‘ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರು ಸಲ್ಲಿಸಿದ ಒಳಮೀಸಲಾತಿ ಆಯೋಗದ ವರದಿಯಂತೆ ಸರ್ಕಾರಿ ಹುದ್ದೆಗಳನ್ನು ನೇಮಕ ಮಾಡುವಂತೆ ಆಗ್ರಹಿಸಿ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಮಾರ್ಚ್ 6ರಂದು ದಾವಣಗೆರೆ ಬಂದ್ಗೆ ಕರೆ ನೀಡಲಾಗಿದೆ’ ಎಂದು ತಾಲ್ಲೂಕು ಮಾದಿಗ ಸಂಘಟನೆಗಳ ಒಕ್ಕೂಟದ ಮುಖಂಡ ದಿಡಗೂರು ತಮ್ಮಣ್ಣ ಹೇಳಿದರು.

ಪರಿಶಿಷ್ಟ ಜಾತಿಗೆ ಸೇರಿದ 101 ಜಾತಿಗಳಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ಎಲ್ಲ ಕ್ಷೇತ್ರಗಳಲ್ಲೂ ಅತೀ ಹಿಂದುಳಿದ ಜಾತಿಯಾದ ಮಾದಿಗ ಸಮಾಜವು ಅನೇಕ ದೌರ್ಜನ್ಯಗಳಿಗೆ ತುತ್ತಾಗುತ್ತಾ ಬಂದಿರುವುದು ಶೋಚನೀಯ ಸಂಗತಿ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಂದ್ಗೆ ಸಹಕಾರ ನೀಡಿ: ಆದ್ದರಿಂದ ದಾವಣಗೆರೆ ಖಾಸಗಿ ಬಸ್ಗಳ ಮಾಲೀಕರು, ಆಟೊ ಚಾಲಕರು, ಹೋಟೆಲ್ ಉದ್ಯಮಿಗಳು, ಬೀದಿ ಬದಿ ವ್ಯಾಪಾರಸ್ಥರು ಹಾಗೂ ಸರ್ಕಾರಿ ಕಚೇರಿಗಳ ಸಿಬ್ಬಂದಿ ಬಂದ್ಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನಿವೃತ್ತ ಶಿಕ್ಷಕ ಮಾದಪ್ಪ, ಮಾರಿಕೊಪ್ಪ ಮಂಜು, ಕೆ.ಎಚ್. ರಾಜಪ್ಪ, ತ್ಯಾಗದಕಟ್ಟೆ ಹನುಮಂತಪ್ಪ, ಕ್ಯಾಸಿನಕೆರೆ ದುರ್ಗೇಶ್, ಮಲ್ಲಿಗೇನಹಳ್ಳಿ ಕಾಂತರಾಜ್, ಹನುಮಂತಪ್ಪ, ಕೆಂಗಲಹಳ್ಳಿ ಪ್ರಭಾಕರ್, ಕೆಂಚಿಕೊಪ್ಪ ಮಂಜು, ಗೋವಿನಕೋವಿ ನರಸಿಂಹಪ್ಪ, ಬೇಲಿಮಲ್ಲೂರು ಉಮೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.