ದಾವಣಗೆರೆ: ಬಿರು ಬಿಸಿಲಿನ ಜೊತೆಜೊತೆಗೇ ದಾವಣಗೆರೆಯಲ್ಲಿ ದಿನೇದಿನೇ ಉಪಚುನಾವಣೆಯ ಕಾವು ಹೆಚ್ಚುತ್ತಿದೆ. ನಾಮಪತ್ರ ಹಿಂದೆ ಪಡೆಯಲು ಕೊನೆಯ ದಿನವಾದ ಗುರುವಾರ ಸಂಜೆಯ ವೇಳೆಗೆ ಕಣಚಿತ್ರಣ ಅಂತಿಮಗೊಂಡಿದ್ದು, 25 ಜನ ಅಭ್ಯರ್ಥಿಗಳು ಮತದಾರರೆದುರು ತಮ್ಮ ಭವಿಷ್ಯವನ್ನು ಪಣಕ್ಕಿರಿಸಿದ್ದಾರೆ.

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ಈ ‘ಪ್ರತಿಷ್ಠಿತ’ ಕ್ಷೇತ್ರವು ಕಾಂಗ್ರೆಸ್ನಲ್ಲಿನ ಬಂಡಾಯದಿಂದಾಗಿ ರಾಜ್ಯದ ಗಮನ ಸೆಳೆದಿದೆ. ಆಡಳಿತಾರೂಢ ಕಾಂಗ್ರೆಸ್ಗೆ ಪ್ರತಿಷ್ಠೆಯ ಸಂಕೇತವಾಗಿದೆ.

ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿಯಲ್ಲೂ, ಈ ಉಪಚುನಾವಣೆ ಅಷ್ಟೇ ಮಹತ್ವದ ವಿಷಯವಾಗಿದ್ದು, ಜೆಡಿಎಸ್ನೊಂದಿಗಿನ ಮೈತ್ರಿಯು ಮತಗಳು ಹಂಚಿಹೋಗುವ ಸಾಧ್ಯತೆಗಳನ್ನು ನಿರಾಕರಿಸಿದೆ. ಮಾತ್ರವಲ್ಲದೆ, 2028ರ ವಿಧಾನಸಭೆ ಚುನಾವಣೆಯ ‘ಅವಕಾಶದ ಬಾಗಿಲನ್ನು’ ತೆರೆಯುವ ಸಾಧನವಾಗಲಿದೆಯೇ ಎಂಬ ಕುತೂಹಲ ಮೂಡಿಸಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಮಾತ್ರವಲ್ಲದೆ, ಎಸ್ಡಿಪಿಐ, ಎಎಪಿ ಪಕ್ಷಗಳ ಅಭ್ಯರ್ಥಿಗಳೂ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾದ ಸಾದಿಕ್ ಪೈಲ್ವಾನ್, ಎಚ್.ಸುಬಾನ್ ಸಾಬ್ ಅವರೂ ಕಣದಲ್ಲಿರುವುದರಿಂದ ಮತದಾರರ ಆಸಕ್ತಿ ಕೆರಳಿಸಿದೆ.

ಬರಲಿದೆ ಮುಖಂಡರ ದಂಡು: ಕಣಚಿತ್ರಣ ಅಂತಿಮಗೊಳ್ಳುತ್ತಿದ್ದಂತೆಯೇ ಶುಕ್ರವಾರದಿಂದ ಕ್ಷೇತ್ರದಾದ್ಯಂತ ಪ್ರಚಾರದ ಭರಾಟೆ ಅಧಿಕೃತವಾಗಿ ಗರಗೆದರಲಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರವೇ ಬಿಜೆಪಿ ಅಭ್ಯರ್ಥಿ ಟಿ.ಶ್ರೀನಿವಾಸ್ ದಾಸಕರಿಯಪ್ಪ ಪರ ಮತಯಾಚಿಸಲು ದಾವಣಗೆರೆಗೆ ಬರಲಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ರಾಜ್ಯ ಸಚಿವ ಸಂಪುಟದ ಸದಸ್ಯರೂ ಸೇರಿದಂತೆ ಪಕ್ಷದ ಅರ್ಧ ಭಾಗವೇ ನಗರದಲ್ಲಿ ಠಿಕಾಣಿ ಹೂಡಲಿದ್ದು, ಇನ್ನರ್ಧದಷ್ಟು ಬಾಗಲಕೋಟೆಯಲ್ಲಿ ನಡೆಯಲಿರುವ ಉಪ ಚುನಾವಣೆಯತ್ತ ದೃಷ್ಟಿ ನೆಡಲಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರು, ಸಂಸದರು, ಶಾಸಕರು, ಕೆಪಿಸಿಸಿ ಮುಖಂಡರು ಶುಕ್ರವಾರದಿಂದ ದಾವಣಗೆರೆಯಲ್ಲಿ ಕಾಣಸಿಗಲಿದ್ದಾರೆ.

ಏಪ್ರಿಲ್ 1 ಮತ್ತು 2ರಂದು ಬಹಿರಂಗ ಸಮಾವೇಶ ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಸಮೇತ ಬಹುತೇಕ ಸರ್ಕಾರವೇ ಇಲ್ಲಿರಲಿದೆ ಎಂದು ಕಾಂಗ್ರೆಸ್ ಮೂಲಗಳು ಖಚಿತಪಡಿಸಿವೆ.

ಇನ್ನು ಕ್ಷೇತ್ರದಲ್ಲಿರುವ ವಿವಿಧ ಸಮುದಾಯಗಳ ಮತದಾರರನ್ನು ಸೆಳೆಯಲು ಬಿಜೆಪಿ ಸಹ ವಿಶಿಷ್ಟ ಕಾರ್ಯತಂತ್ರ ರೂಪಿಸಿದ್ದು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡ, ಲಿಂಗಾಯತ, ಅಲ್ಪಸಂಖ್ಯಾಯತ ಸಮುದಾಯದ ಮುಖಂಡರ ಪ್ರತ್ಯೇಕ ಸಮಿತಿಗಳನ್ನೇ ರಚಿಸಿದ್ದು, ಆಯಾ ಸಮುದಾಯದ ಮುಖಂಡರು ಆಯಾ ಸಮುದಾಯದ ಮತದಾರರನ್ನು ಓಲೈಸಲು ಕ್ಷೇತ್ರದಾದ್ಯಂತ ಮನೆಮನೆ ಭೇಟಿ ನೀಡಲಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾರ್ಚ್ 29, ಏಪ್ರಿಲ್ 4ರಿಂದ 6ವರೆಗೆ ಇಲ್ಲೇ ವಾಸ್ತವ್ಯ ಹೂಡಿ ಮತ ಬೇಟೆಗೆ ಪ್ರಯತ್ನಿಸಲಿದ್ದಾರೆ. ಪಕ್ಷದ ಪ್ರಮುಖರಾದ ಬಿ.ಎಸ್. ಯಡಿಯೂರಪ್ಪ ಮಾರ್ಚ್ 30ರಿಂದ ಏಪ್ರಿಲ್ 1ರವರೆಗೆ ಸತತ 3 ದಿನ ನಗರದಲ್ಲೇ ಬಿಡಾರ ಹೂಡಲಿದ್ದಾರೆ. ವಿವಿಧ ಸಮುದಾಯಗಳ ಮುಖಂಡರಾದ ಬಿ.ಶ್ರೀರಾಮುಲು, ಗಾಲಿ ಜನಾರ್ದನರೆಡ್ಡಿ, ಅರವಿಂದ ಬೆಲ್ಲದ್, ಜಗದೀಶ ಶೆಟ್ಟರ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಪ್ರಲ್ಹಾದ್ ಜೋಶಿ, ಸಂಸದರಾದ ಗೋವಿಂದ ಕಾರಜೋಳ, ತೇಜಸ್ವಿ ಸೂರ್ಯ, ಶಾಸಕ ಸಿ.ಟಿ. ರವಿ, ಸಿ.ಸಿ. ಪಾಟೀಲ, ಸ್ಥಳೀಯರಾಗಿರುವ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಎಂ.ಪಿ. ರೇಣುಕಾಚಾರ್ಯ ಮತ್ತಿತರರು ಸಮಾವೇಶ, ಮನೆಮನೆ ಪ್ರಚಾರ, ಗ್ರಾಮೀಣ ಪ್ರದೇಶಗಳ ಜನರೊಂದಿಗೆ ಸಂವಾದದಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಪ್ರಮುಖರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.