ದಾವಣಗೆರೆ: ಉಪಚುನಾವಣೆಯ ಕಾರಣದಿಂದ ಮಧ್ಯ ಕರ್ನಾಟಕದ ಪ್ರಮುಖ ನಗರ ದಾವಣಗೆರೆ ಈಗ ರಾಜ್ಯದ ಗಮನ ಸೆಳೆದಿದ್ದು, ನಾಲ್ಕೈದು ದಿನಗಳಿಂದ ಪ್ರವಾಸಿ ತಾಣ ಅಥವಾ ಪಿಕ್ನಿಕ್ ಸ್ಪಾಟ್ ಆಗಿ ಪರಿಣಮಿಸಿದೆ.

ಪ್ರಮುಖ ರಾಜಕೀಯ ಪಕ್ಷಗಳಾದ ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷವಾಗಿರುವ ಬಿಜೆಪಿ ನಡುವೆ ಉಪ ಚುನಾವಣೆಯಲ್ಲಿ ನೇರ ಹಣಾಹಣಿ ನಡೆದಿರುವುದರಿಂದ ಎರಡೂ ಪಕ್ಷಗಳ ರಾಜ್ಯ ಮಟ್ಟದ ಮುಖಂಡರೂ, ಕಾರ್ಯಕರ್ತರೂ, ರಾಜಕಾರಣಿಗಳ ಬೆಂಬಲಿಗರೂ, ನಾಲ್ಕೈದು ದಿನಗಳಿಂದ ನಗರದಲ್ಲೇ ಬೀಡುಬಿಟ್ಟಿದ್ದು, ಇಡೀ ಊರು ಜನಜಂಗುಳಿಯಿಂದ ತುಂಬಿತುಳುಕುತ್ತಿದೆ.

ಮತಬೇಟೆಯ ಭಾಗವಾಗಿ ಪ್ರಚಾರ ಭರಾಟೆಯೂ ತೀವ್ರಗೊಂಡಿದೆ. ರಾಜಕೀಯ ಮುಖಂಡರು ಆರೋಪ, ಪ್ರತ್ಯಾರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ದಕ್ಷಿಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ನಾಯಕರ ದಂಡು ಮುನ್ಸೂಚನೆ ನೀಡದೆಯೇ ನುಗ್ಗುತ್ತಿದೆ.

ತಮ್ಮ ನೆಚ್ಚಿನ ಮುಖಂಡರು ಮನೆ ಬಾಗಿಲಿಗೇ ಬಂದಾಗ ಮತದಾರರಿಗೆ ಸಖೇದಾಶ್ಚರ್ಯವೂ ಆಗುತ್ತಿದೆ. ಒಂದು ಪಕ್ಷದವರು ಹೀಗೆ ಬಂದು ಹಾಗೆ ಹೋಗುತ್ತಿದ್ದಂತೆಯೇ, ಮತ್ತೊಂದು ಪಕ್ಷದವರು ಪ್ರತ್ಯಕ್ಷವಾಗುತ್ತಿದ್ದಾರೆ.

ಏ.9ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಏಪ್ರಿಲ್ 7ರ ಸಂಜೆಯ ವೇಳೆಗೆ ಈ ಕ್ಷೇತ್ರದವರಲ್ಲದ ರಾಜಕಾರಣಿಗಳೂ, ಅವರ ಬೆಂಬಲಿಗರೂ ಊರು ತೊರೆಯಬೇಕು. ಅಷ್ಟರೊಳಗೇ ಮತದಾರರನ್ನು ತಲುಪುವ ಧಾವಂತ ನಾಯಕರಲ್ಲಿದೆ.

ರೂಮ್ಗಳು ಸಿಗುತ್ತಿಲ್ಲ: ತಮ್ಮದಲ್ಲದ ಕ್ಷೇತ್ರವಾದ ದಾವಣಗೆರೆಯಲ್ಲಿ ಬೇರೆ ಊರಿನ ಮುಖಂಡರು ಸ್ವಲ್ಪ ಸರಾಗವಾಗಿ ಕೈಗೆ ಸಿಗಬಹುದು, ಈಗಲೇ ಅವರ ಗಮನವನ್ನು ಸೆಳೆಯಬಹುದು ಎಂದೇ ಅವರನ್ನು ನೋಡಲೂ, ಅವರೊಂದಿಗೆ ಇದ್ದೇವೆ ಎಂಬುದನ್ನು ತೋರಿಸಿಕೊಳ್ಳಲೂ ಅವರ ಬೆಂಬಲಿಗರ ಪಡೆ ಬಂದಿದೆ. ಇದರಿಂದಾಗಿ ನಗರದಲ್ಲಿರುವ ವಸತಿಗೃಹ (ಲಾಡ್ಜ್)ಗಳು, ಹೋಟೆಲ್ ರೂಮ್ಗಳು ಭರ್ತಿಯಾಗಿವೆ. ಅನೇಕರಿಗೆ ರೂಮ್ಗಳ ಕೊರತೆಯೂ ಆಗುತ್ತಿದ್ದು, ರೂಮ್ ಅರಸಿ ಪಕ್ಕದ ಹರಿಹರ, ರಾಣೇಬೆನ್ನೂರಿಗೆ ಹೋಗುತ್ತಿದ್ದಾರೆ ಎಂದು ಹೋಟೆಲ್ ಒಂದರ ಸಿಬ್ಬಂದಿ ವಿವರಿಸಿದರು,.

ಬೇರೆ ಕಡೆಯಿಂದ ಬಂದವರೆಲ್ಲ, ರುಚಿ ನೋಡುತ್ತಿರುವುದರಿಂದ ಸುಪ್ರಸಿದ್ಧ ಬೆಣ್ಣೆದೋಸೆ ಹೋಟೆಲ್ಗಳೂ ಕಿಕ್ಕಿರಿದು ತುಂಬುತ್ತಿವೆ. ಸಂಜೆ ಆಗುತ್ತಿದ್ದಂತೆಯೇ ಬಾರ್ ಮತ್ತು ರೆಸ್ಟೋರಂಟ್ಗಳಲ್ಲೂ ಜಾಗ ಸಿಗುತ್ತಲೇ ಇಲ್ಲ ಎಂಬಷ್ಟೇ ತುಂಬಿ ತುಳುಕುತ್ತಿವೆ ಎಂದೂ ಅವರು ಹೇಳಿದರು.

ರಸ್ತೆಗಳಲ್ಲೂ ದಟ್ಟಣೆ: ಅನ್ಯ ಕ್ಷೇತ್ರಗಳ ಮುಖಂಡರು, ಸಚಿವರು, ಶಾಸಕರು, ಅವರ ಬೆಂಬಲಿಗರಿಂದಾಗಿ ನಗರದ ರಸ್ತೆಗಳ ತುಂಬ ಭಿನ್ನವಿಭಿನ್ನ, ಅತ್ಯಾಧುನಿಕ, ಐಷಾರಾಮಿ ಕಾರ್ಗಳದ್ದೇ ಕಾರುಬಾರು ನಡದಿದೆ. ರಾಜ್ಯದ ವಿವಿಧೆಡೆ ನೋಂದಣಿಯಾದ ವಾಹನಗಳು ಇಲ್ಲಿ ಕಾಣಸಿಗುತ್ತಿವೆ. ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಂಚಾರ ದಟ್ಟಣೆಯೂ ಉಂಟಾಗುತ್ತಿದೆ. ಅದರಲ್ಲೂ ನಗರದಲ್ಲಿರುವ ಕ್ಷೇತ್ರ ವ್ಯಾಪ್ತಿಯು, ರೈಲು ಹಳಿಯಾಚಿನ ಪ್ರದೇಶವನ್ನೇ ಹೊಂದಿದ್ದರಿಂದ ಅಲ್ಲಿನ ಇಕ್ಕಟ್ಟಾದ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ವಿಪರೀತ ಎನ್ನುವಷ್ಟರ ಮಟ್ಟಿಗೆ ಕಂಡುಬರುತ್ತಿದೆ.

ಯೂಟ್ಯೂಬರ್ಗಳ ಭರಾಟೆ: ಉಪ ಚುನಾವಣೆಯ ಕವರೇಜ್ಗೆ ವಾರ ಮುಂಚೆಯೇ ದೇವನಗರಿಗೆ ಬಂದಿಳಿದಿರುವ ಯೂಟ್ಯೂಬರ್ಗಳು ಥರಹೇವಾರಿ ವರದಿಗಳನ್ನು ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ.

ಕ್ಷೇತ್ರ ವ್ಯಾಪ್ತಿಯ ಯಾವುದೇ ಪ್ರದೇಶಕ್ಕೆ ಹೋದರೂ ರಸ್ತೆಯ ಇಕ್ಕೆಲಗಳಲ್ಲೋ, ಅಂಗಡಿ ಮುಂಗಟ್ಟುಗಳೆದುರೋ, ಮತದಾರರ ಮನೆಗಳೆದುರೋ ಚುಟುಕು ಸಂದರ್ಶನ (ಚಿಟ್ಚಾಟ್) ಮಾಡುವ, ಅಭಿಪ್ರಾಯ ಪಡೆಯುವ ಯೂಟ್ಯೂಬ್ ಪತ್ರಕರ್ತರ ದಂಡು ಕಾಣಸಿಗುತ್ತಿದೆ.

ಒಂದು ಅಂದಾಜಿನ ಪ್ರಕಾರ ನಗರದಲ್ಲಿ 100ಕ್ಕೂ ಹೆಚ್ಚು ಸಂಖ್ಯೆಯ ಯೂಟ್ಯೂಬ್ ಚಾನಲ್ಗಳ (ಸ್ಥಳೀಯವಲ್ಲದ) ಪತ್ರಕರ್ತರು ಕ್ಯಾಮೆರಾ ಸಮೇತ ಓಡಾಡುತ್ತಿದ್ದು, ಸೋಲು– ಗೆಲುವಿನ ಭವಿಷ್ಯವನ್ನು ಪುಂಖಾನುಪುಂಖವಾಗಿ ಪ್ರಸ್ತುತಪಡಿಸುತ್ತಿದ್ದಾರೆ.

ಖಾಸಗಿ ಟಿವಿ ಚಾನಲ್ಗಳೂ ಇದಕ್ಕೆ ಹೊರತಾಗಿಲ್ಲ ಎಂಬಂತೆ, ರಾಜ್ಯ ರಾಜಧಾನಿಯಿಂದಲೂ, ಅಕ್ಕಪಕ್ಕದ ಜಿಲ್ಲೆಗಳಿಂದಲೂ ತಮ್ಮ ವರದಿಗಾರರನ್ನೂ, ಕ್ಯಾಮೆರಾಮನ್ಗಳನ್ನೂ ದಾವಣಗೆರೆಗೆ ನಿಯೋಜಿಸಿದ್ದು, ಅವರ ಅಸ್ತಿತ್ವವೂ ಪ್ರಚಾರದ ಸಂದರ್ಭ ಕಂಡುಬರುತ್ತಿದೆ.

ಕ್ಷೇತ್ರ ವ್ಯಾಪ್ತಿಯ ಪ್ರದೇಶವೊಂದರಲ್ಲಿ ನಿಂತು ವರದಿ ಮಾಡುತ್ತಿದ್ದ ಯೂಟ್ಯೂಬರ್ ಒಬ್ಬರು ಆಟೊ ಇಳಿದು ಮಾತನಾಡಲು ಆರಂಭಿಸಿದಾಗ, ಆ ಆಟೊ ಚಾಲಕನಿಲ್ಲದೇ ಹಿಮ್ಮುಖವಾಗಿ ಚಲಿಸಿ ಹೋಗುವ ವಿಡಿಯೋ ಜಾಲತಾಣದಲ್ಲಿ ಹರಿದಾಡುವ ಮೂಲಕ ನೋಡುಗರಲ್ಲಿ ನಗೆ ಉಕ್ಕಿಸಿದೆ.

ದಟ್ಟಣೆಯಿಂದ ತೀವ್ರ ಕಿರಿಕಿರಿ

ಹಳೆ ದಾವಣಗೆರೆಯ ವಿವಿಧ ಪ್ರದೇಶಗಳಲ್ಲಿ, ಹೊಸ ಬಸ್ ನಿಲ್ದಾಣ ರಸ್ತೆ, ಮೋತಿ ಟಾಕೀಸ್ ವೃತ್ತ, ರೈಲು ನಿಲ್ದಾಣದ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಉಪ ಚುನಾವಣೆಯ ಪ್ರಚಾರಕ್ಕೆ ಮುಖಂಡರು ತೆರಳುತ್ತಿರುವುದರಿಂದ ಅವರ ವಾಹನಗಳ ಭರಾಟೆಯಿಂದಾಗಿ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದರಿಂದ ಸಾಕಷ್ಟು ಕಿರಿಕಿರಿ ಆಗುತ್ತಿದೆ ಎಂದು ನಗರದ ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

'ಇಂಥ ಭಾಗದಲ್ಲೇ ಬಹಿರಂಗ ಸಭೆಗಳಿವೆ ಎಂಬುದು ಗೊತ್ತಾಗುವುದಿಲ್ಲ. ನಾವು ಆ ಏರಿಯಾದಗುಂಟ ಹೋದಾಗ ವಾಹನಗಳನ್ನು ಬಿಡದಿರುವುದು, ದಾರಿಯಲ್ಲೇ ನಿಲ್ಲಿಸುವುದು, ರೂಟ್ ಡೈವರ್ಟ್ ಮಾಡುವುದೂ ಕಂಡುಬರುತ್ತಿದೆ. ಇದರಿಂದ ನಮ್ಮ ಸುಲಭ ಸಂಚಾರಕ್ಕೆ ಸಂಚಕಾರ ಬಂದಿದೆ' ಎಂದು ಸಾರ್ವಜನಿಕರೊಬ್ಬರು ಹೇಳಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.