ದಾವಣಗೆರೆ: ಗೃಹ ಸಾಲದ ಮೂಲ ದಾಖಲೆಗಳನ್ನು ಹಿಂತಿರುಗಿಸುವಲ್ಲಿ ನಿರ್ಲಕ್ಷ್ಯ ತೋರಿದ ಕೆನರಾ ಬ್ಯಾಂಕ್ಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ₹ 4.15 ಲಕ್ಷ ದಂಡ ವಿಧಿಸಿದೆ.

ಸಾಲ ಪಡೆಯಲು ಬ್ಯಾಂಕ್ಗೆ ಸಲ್ಲಿಸಿದ್ದ ಮನೆಯ ಮೂಲ ದಾಖಲೆಗಳನ್ನು ಕಳೆದಿರುವುದಕ್ಕೆ ₹ 4 ಲಕ್ಷ ಹಾಗೂ ಮಾಸಿಕ ವೇದನೆ, ದೂರಿನ ವೆಚ್ಚಕ್ಕಾಗಿ ₹ 15,000 ಪರಿಹಾರದ ನೀಡುವಂತೆ ಸೂಚಿಸಿದೆ.

ಕೆ.ಬಿ. ಮಂಜುಳಾ ಎಂಬುವರು ಮನೆಯ ಮೂಲ ದಾಖಲೆಗಳನ್ನು ಸಲ್ಲಿಸಿ ಕೆನರಾ ಬ್ಯಾಂಕಿನಲ್ಲಿ ₹ 21.5 ಲಕ್ಷ ಗೃಹ ಸಾಲ ಪಡೆದಿದ್ದರು. 2024ರ ಸೆ.11ರಂದು ಸಾಲ ಮರುಪಾವತಿಸಿ ಖಾತೆಯನ್ನು ರದ್ದುಪಡಿಸಿದ್ದರು. ಆಗ ಮೂಲ ದಾಖಲೆಗಳನ್ನು ಗ್ರಾಹಕರಿಗೆ ಮರಳಿಸುವಲ್ಲಿ ಬ್ಯಾಂಕ್ ವಿಫಲವಾಗಿತ್ತು.

‘ಸಾಲ ಪಡೆಯುವ ಸಂದರ್ಭದಲ್ಲಿ ಒದಗಿಸಿದ ಮನೆ, ನಿವೇಶನದ ಮೂಲ ದಾಖಲೆಗಳು ಕಳೆದುಹೋಗಿದ್ದು, ದೃಢೀಕೃತ ಪ್ರತಿ ನೀಡಲಾಗುವುದು’ ಎಂದು ಬ್ಯಾಂಕ್ ಅಧಿಕಾರಿಗಳು ಮಹಿಳೆಗೆ ತಿಳಿಸಿದ್ದಾರೆ. ಇದನ್ನು ಪ್ರಶ್ನಿಸಿ ಮಹಿಳೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.

ಆಯೋಗದ ಅಧ್ಯಕ್ಷೆ ಎಚ್.ಎನ್. ಮೀನಾ ಹಾಗೂ ಸದಸ್ಯ ತ್ಯಾಗರಾಜನ್ ಸಿ.ಎಸ್. ಅವರು ಬ್ಯಾಂಕ್ ಸೇವೆಯಲ್ಲಿನ ಗಂಭೀರ ಲೋಪವನ್ನು ಎತ್ತಿ ಹಿಡಿದಿದ್ದಾರೆ. ಆದೇಶ ಹೊರಬಂದ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ಪರಿಹಾರದ ಮೊತ್ತ ಪಾವತಿಸಲು ಬ್ಯಾಂಕ್ಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತಾಧಿಕಾರಿ ಪದ್ಮಾ ಪಿ.ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-43-146074947

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.