ದಾವಣಗೆರೆ: ಜಿಲ್ಲೆಯ ಚನ್ನಗಿರಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್ಟಿಸಿ) ಡಿಪೊ ಉದ್ಘಾಟನೆಯಾಗಿ 6 ತಿಂಗಳು ಕಳೆದರೂ ಬಸ್ ನಿಲ್ದಾಣ ನಿರ್ಮಾಣದ ಪ್ರಯತ್ನಗಳು ಕೈಗೂಡಿಲ್ಲ. ಪ್ರಯಾಣಿಕರು ಕೆರೆ ಏರಿಯ ಮೇಲೆ ಬೇಸಿಗೆ ಬಿಸಿಲಿನಲ್ಲೇ ಬಸ್ಗಳಿಗೆ ಕಾಯುವ ದುಃಸ್ಥಿತಿ ದೂರವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಪಟ್ಟಣ ಸಮೀಪದ ಅಜ್ಜಿಹಳ್ಳಿಯಲ್ಲಿ ₹ 8 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕೆಎಸ್ಆರ್ಟಿಸಿ ಡಿಪೊ ಅ.8ರಂದು ಲೋಕಾರ್ಪಣೆಯಾಗಿದೆ. ಡಿಪೊದಿಂದ ಹೊರಬರುವ ಬಸ್ಗಳು ಪ್ರಯಾಣಿಕರಿಗೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸೇವೆ ಒದಗಿಸುತ್ತಿವೆ. ಪಟ್ಟಣದ ಕೆರೆ ಏರಿಯ ಮೇಲೆ ಪೊಲೀಸರು ಗುರುತಿಸಿದ ತಾತ್ಕಾಲಿಕ ಸ್ಥಳದಲ್ಲಿ ಕೆಎಸ್ಆರ್ಟಿಸಿ ಬಸ್ಗಳು ನಿಲುಗಡೆ ಮಾಡುತ್ತಿವೆ.

ಚನ್ನಗಿರಿ ತಾಲ್ಲೂಕು ಖಾಸಗಿ ಹಾಗೂ ಕೆಎಸ್ಆರ್ಟಿಸಿ ಬಸ್ ಸಂಪರ್ಕ ಜಾಲ ಹೊಂದಿದೆ. ಶಿವಮೊಗ್ಗ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯನ್ನು ಸಂಪರ್ಕಿಸುವ ಪ್ರಮುಖ ಸ್ಥಳದಲ್ಲಿರುವ ಈ ಪಟ್ಟಣದಲ್ಲಿ ನಿತ್ಯ 122 ಕೆಎಸ್ಆರ್ಟಿಸಿ ಬಸ್ಗಳು ಹಾದುಹೋಗುತ್ತವೆ. ಬೆಂಗಳೂರು, ಮಂಗಳೂರು, ವಿಜಯಪುರ, ಹುಬ್ಬಳ್ಳಿ, ತುಮಕೂರು ಸೇರಿ ರಾಜ್ಯದ ಹಲವೆಡೆಗೆ ಬಸ್ಗಳು ಸಂಚರಿಸುತ್ತವೆ. ಈ ಬಸ್ಗಳ ನಿಲುಗಡೆಗೆ ಇನ್ನೂ ನಿಲ್ದಾಣ ನಿರ್ಮಾಣವಾಗಿಲ್ಲ.

ಪಟ್ಟಣದಲ್ಲಿ ಖಾಸಗಿ ಬಸ್ಗಳಿಗೆ ನಿಲ್ದಾಣವಿದ್ದು, ಇದರಲ್ಲಿ ಎರಡು ಅಂಕಣಗಳನ್ನು (ಪ್ಲಾಟ್) ಕೆಎಸ್ಆರ್ಟಿಸಿ ಬಸ್ಗಳಿಗೆ ಪುರಸಭೆ ನಿಗದಿಪಡಿಸಿದೆ. ಇಲ್ಲಿ ಶಿವಮೊಗ್ಗ ಹಾಗೂ ಚಿತ್ರದುರ್ಗ ಮಾರ್ಗವಾಗಿ ಸಾಗುವ ಬಸ್ಗಳ ನಿಲುಗಡೆಗೆ ಖಾಸಗಿ ಬಸ್ ಮಾಲೀಕರ ಆಕ್ಷೇಪವಿದೆ. ಈ ವಿಚಾರದಲ್ಲಿ ಹಲವು ಬಾರಿ ಗಲಾಟೆಗಳು ನಡೆದಿವೆ. ಖಾಸಗಿ ಬಸ್ ನಿಲ್ದಾಣದ ನವೀಕರಣ ಕಾಮಗಾರಿ ಜನವರಿಯಿಂದ ನಡೆಯುತ್ತಿದ್ದು, ಕೆಎಸ್ಆರ್ಟಿಸಿ ಬಸ್ ನಿಲುಗಡೆಗೆ ಸ್ಥಳಾವಕಾಶ ಲಭ್ಯವಾಗುತ್ತಿಲ್ಲ.

ಕೆರೆ ಏರಿಯ ಮೇಲಿನ ನಿಗದಿತ ಸ್ಥಳಕ್ಕೆ ಬರುವ ಬಸ್ಗಳಿಗೆ ಪ್ರಯಾಣಿಕರು ಬಯಲಲ್ಲಿ ಕಾಯಬೇಕಿದೆ. ಕುಳಿತುಕೊಳ್ಳಲು ಕೂಡ ಸರಿಯಾದ ವ್ಯವಸ್ಥೆ ಇಲ್ಲ. ದೂಳು, ಬಿಸಿಲಿನಿಂದ ಆಕ್ರೋಶಗೊಂಡ ಪ್ರಯಾಣಿಕರು ಕೆಎಸ್ಆರ್ಟಿಸಿ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ವಾರದಿಂದ ಈಚೆಗೆ ಪೆಂಡಾಲ್ ಅಳವಡಿಸಿ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ. ಬಿರುಗಾಳಿಗೆ ಪೆಂಡಾಲ್ ಹಾರಿಹೋಗುವ ಸ್ಥಿತಿಯಲ್ಲಿದ್ದು, ಮಳೆಯಿಂದ ರಕ್ಷಣೆ ಪಡೆಯುವುದು ಹೇಗೆ ಎಂಬ ಪ್ರಶ್ನೆ ಪ್ರಯಾಣಿಕರಲ್ಲಿದೆ.

ಚನ್ನಗಿರಿಗೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಹಾಗೂ ಡಿಪೊ ಕಲ್ಪಿಸಬೇಕು ಎಂಬ ಬೇಡಿಕೆ ದಶಕಗಳಷ್ಟು ಹಳೆಯದು. ಪಟ್ಟಣದ ಹೊರಭಾಗದಲ್ಲಿ ಸ್ಥಳ ಲಭ್ಯವಾಗಿದ್ದರಿಂದ ಕೆಎಸ್ಆರ್ಟಿಸಿ ಡಿಪೊ ನಿರ್ಮಾಣ ಸಾಧ್ಯವಾಯಿತು. ಆದರೆ, ಪಟ್ಟಣದ ಮಧ್ಯಭಾಗದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ ನಿಲ್ದಾಣ ನಿರ್ಮಿಸಲು ಸೂಕ್ತ ಸ್ಥಳ ಲಭ್ಯವಾಗಿಲ್ಲ. ಇದರಿಂದ ಪುರಸಭೆ, ಜನಪ್ರತಿನಿಧಿಗಳು ಕೂಡ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

‘ಬಸ್ ನಿಲ್ದಾಣಕ್ಕೆ 2 ಎಕರೆ ಜಾಗ ಗುರುತಿಸಲಾಗಿದೆ. 6 ತಿಂಗಳಲ್ಲಿ ನೂತನ ಬಸ್ ನಿಲ್ದಾಣಕ್ಕೆ ಭೂಮಿ ಪೂಜೆ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಡಿಪೊ ಉದ್ಘಾಟನಾ ಸಮಾರಂಭದಲ್ಲಿ ಹೇಳಿದ್ದರು. ಅಗತ್ಯ ಜಾಗವನ್ನು ಒದಗಿಸುವಂತೆ ಕೆಎಸ್ಆರ್ಟಿಸಿ ಸ್ಥಳೀಯ ಆಡಳಿತವನ್ನು ಹಲವು ಬಾರಿ ಕೋರಿದೆ. ಆದರೆ, ಆಶಾದಾಯಕ ಬೆಳವಣಿಗೆಗಳು ನಡೆದಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-43-1503713675

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.