ಚನ್ನಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಶನಿವಾರ ರಾತ್ರಿ ಬಿರುಸಿನ ಮಳೆಯಾಗಿದ್ದು, ಅಪಾರ ಹಾನಿ ಉಂಟು ಮಾಡಿದೆ. ತಾಲ್ಲೂಕಿನಲ್ಲಿ ಒಟ್ಟು 510 ಎಕರೆಯಲ್ಲಿ ಬೆಳೆದಿದ್ದ ಭತ್ತದ ಬೆಳೆ ನಾಶವಾಗಿದೆ.

ತ್ಯಾವಣಿಗೆಯಲ್ಲಿ 300 ಎಕರೆ, ನಲ್ಕುದುರೆ 60, ಮೀಯಾಪುರ 50, ದೊಡ್ಡಘಟ್ಟ 50, ಅರೇಹಳ್ಳಿ 25 ಹಾಗೂ ಕತ್ತಲಗೆರೆಯಲ್ಲಿ 25 ಎಕರೆಯಲ್ಲಿ ಭತ್ತ ನೆಲಕಚ್ಚಿವೆ. ವೈಲಿಪುರ ಹಾಗೂ ಶೃಂಗಾರ್ಬಾಗ್ ತಾಂಡಾ ಸೇರಿ 500ಕ್ಕೂ ಹೆಚ್ಚು ಅಡಿಕೆ ಮರಗಳು ಬಿದ್ದಿವೆ. ಅಂದಾಜು ₹1.25 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ತಹಶೀಲ್ದಾರ್ ಎನ್.ಜೆ. ನಾಗರಾಜ್ ತಿಳಿಸಿದ್ದಾರೆ.

ಶನಿವಾರ ರಾತ್ರಿ ಬೀಸಿದ ಗಾಳಿ ಮಳೆಗೆ ಬಸವಾಪಟ್ಟಣ ಹೋಬಳಿಯ ಶೃಂಗಾರ್ಬಾಗ್ ತಾಂಡಾದಲ್ಲಿ 4, ನಿಲೋಗಲ್ 2, ತ್ಯಾವಣಿಗೆ 3, ಬಸವೇಶ್ವರ ಕ್ಯಾಂಪ್ನಲ್ಲಿ ಒಂದು ಮನೆ ಸೇರಿ ಒಟ್ಟು 10 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಅಂದಾಜು ₹3.50 ಲಕ್ಷ ನಷ್ಟವುಂಟಾಗಿದೆ.

ಶನಿವಾರ ಸಂಜೆ ಚನ್ನಗಿರಿಯಲ್ಲಿ 24 ಮಿ.ಮೀ., ಕತ್ತಲಗೆರೆ 4.4, ಬಸವಾಪಟ್ಟಣ 7.6, ಜೋಳದಹಾಳ್ 26 ಹಾಗೂ ಉಬ್ರಾಣಿ ಗ್ರಾಮದಲ್ಲಿ 19.4 ಮಿ.ಮೀ. ಮಳೆಯಾಗಿದೆ. ಭಾನುವಾರ ಸಂಜೆಯೂ ಕೆಲ ಕಡೆಗಳಲ್ಲಿ ಗುಡುಗು, ಸಿಡಿಲಿನಿಂದ ಕೂಡಿದ ಜಡಿ ಮಳೆಯಾಗಿದೆ.

ಹಾನಿ ಸ್ಥಳಗಳಿಗೆ ತಹಶೀಲ್ದಾರ್ ಎನ್.ಜೆ. ನಾಗರಾಜ್ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಮಳೆ ಹಾನಿ ಪ್ರದೇಶಕ್ಕೆ ಶಾಸಕರ ಭೇಟಿ (ತ್ಯಾವಣಿಗೆ ವರದಿ): ಆಲಿಕಲ್ಲು ಸಹಿತ ಮಳೆಗೆ 300ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದ್ದು, ಶಾಸಕ ಬಸವಂತಪ್ಪ ಅವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ರೈತರು ಧೃತಿಗೆಡಬಾರದು. ಪ್ರಾಕೃತಿಕ ವಿಕೋಪದಿಂದ ಉಂಟಾಗಿರುವ ನಷ್ಟವನ್ನು ತುಂಬಿಕೊಡಲು ಸರ್ಕಾರ ಬದ್ಧವಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ತಕ್ಷಣವೇ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳದಲ್ಲಿದ್ದ ತಹಶೀಲ್ದಾರ್ ನಾಗರಾಜ್ ಅವರಿಗೆ ಸೂಚನೆ ನೀಡಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅರುಣ್ ಕುಮಾರ್, ಕಂದಾಯ ನಿರೀಕ್ಷಕ ಬಸಣ್ಣ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ್, ಕೃಷಿ ಕೇಂದ್ರದ ರಂಗಸ್ವಾಮಿ, ಮುಖಂಡರಾದ ಬಿ.ಎಚ್. ಹಾಲಪ್ಪ, ಅಣ್ಣಪ್ಪ, ಅಂಜಿನಪ್ಪ, ಪರಶುರಾಮ್, ಸಂತೋಷ್ ಹಾಗೂ ಶ್ರೀನಿವಾಸ್ ಸೇರಿದಂತೆ ರೈತರು ಇದ್ದರು.

(ಬಸವಾಪಟ್ಟಣ ವರದಿ): ಮರಗಳು ಬಿದ್ದು, ಮನೆ ಕುಸಿದು ಹಾನಿಯಾಗಿದ್ದ ಇಲ್ಲಿನ ಶೃಂಗಾರ್ಬಾಗ್ ತಾಂಡಾಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಪಾರ ಪ್ರಮಾಣದ ಅಡಿಕೆ ಮರಗಳು ಬಿದ್ದು, ರೈತರಿಗೆ ನಷ್ಟವಾಗಿದೆ. ನಷ್ಟದ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಬಸವಂತಪ್ಪ ತಿಳಿಸಿದರು.

ಹಾಳಾದ ಮನೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

(ಸಾಸ್ವೆಹಳ್ಳಿ ವರದಿ): ಗಾಳಿ ಹಾಗೂ ಮಳೆಯಿಂದ ಕ್ಯಾಸಿನಕೆರೆ, ಜರಿಕಟ್ಟೆ, ಕುಳಗಟ್ಟೆ, ಹೊಸಹಳ್ಳಿ, ಹುಣಸಘಟ್ಟ, ಬಾಗೇವಾಡಿ, ಲಿಂಗಾಪುರ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಸಾವಿರಕ್ಕೂ ಹೆಚ್ಚು ಅಡಿಕೆ ಮರಗಳು ಬುಡಮೇಲಾಗಿವೆ ಎಂದು ತೋಟಗಾರಿಕೆ ಅಧಿಕಾರಿ ರಮೇಶ್ ಮಾಹಿತಿ ನೀಡಿದ್ದಾರೆ.

ಕಟಾವಿಗೆ ಬಂದಿರುವ ಭತ್ತವನ್ನು ರೈತರು ಆದಷ್ಟು ಬೇಗ ಕಟಾವು ಮಾಡಿಸಿಕೊಳ್ಳುವುದು ಸೂಕ್ತ ಎಂದು ಕೃಷಿ ಅಧಿಕಾರಿ ಶಶಿಧರ್ ಸಲಹೆ ನೀಡಿದರು.

ಅಡಿಕೆ ತೋಟಗಳಿಗೆ ವಿಮೆ ಮಾಡಿಸಿರುವ ರೈತರು ತಕ್ಷಣವೇ ಅರ್ಜಿ ಸಲ್ಲಿಸಿ ಪರಿಹಾರದ ಹಣವನ್ನು ಪಡೆದುಕೊಳ್ಳಲು ಅವಕಾಶವಿದೆ. ನಿಯಮಾವಳಿ ಪ್ರಕಾರ ಶೇ 30ರಷ್ಟು ಹಾನಿಯಾಗಿದ್ದರೆ ಸರ್ಕಾರದಿಂದಲೂ ಸೂಕ್ತ ಪರಿಹಾರವನ್ನು ಒದಗಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ರಮೇಶ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-43-531372228

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.