ದಾವಣಗೆರೆ: ಜಿಲ್ಲೆಯ ಅಂಗನವಾಡಿಗಳಿಗೆ ದಾಖಲಾದ 6 ವರ್ಷದೊಳಗಿನ ಚಿಣ್ಣರಲ್ಲಿ 8,099 ಮಕ್ಕಳಲ್ಲಿ ಅಸಹಜ ಬೆಳವಣಿಗೆ ಕಂಡುಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಅಧ್ಯಯನದಲ್ಲಿ ಇದು ಪತ್ತೆಯಾಗಿದೆ.

ಜಿಲ್ಲೆಯ ಅಂಗನವಾಡಿಗಳಿಗೆ ದಾಖಲಾದ 99,278 ಮಕ್ಕಳಲ್ಲಿ 99,156 ಚಿಣ್ಣರ ಆರೋಗ್ಯವನ್ನು ತಪಾಸಿಸಲಾಗಿದೆ. ವಯೋಮಾನಕ್ಕೆ ತಕ್ಕಷ್ಟು ತೂಕ ಮತ್ತು ಎತ್ತರ ಹೊಂದಿರದ ಮಕ್ಕಳು ಇರುವುದು ಗೊತ್ತಾಗಿದೆ. ಬೆಳವಣಿಗೆ ತೀವ್ರ ಕುಂಠಿತ ಇರುವ ಮಕ್ಕಳು ಶೇ 8.17ರಷ್ಟು ಇದ್ದರೆ, ಸಾಧಾರಣ ಬೆಳವಣಿಗೆ ಕುಂಠಿತ ಮಕ್ಕಳ ಪ್ರಮಾಣ ಶೇ 12.78ರಷ್ಟಿದೆ.

ಮಕ್ಕಳ ಸಹಜ ಬೆಳವಣಿಗೆಯಲ್ಲಿನ ಕೊರತೆಗೆ ಸಾಮಾಜಿಕ, ಆರ್ಥಿಕ, ಅನುವಂಶೀಯ, ಆರೋಗ್ಯ ಹಾಗೂ ಅಪೌಷ್ಟಿಕತೆಗೆ ಸಂಬಂಧಿಸಿದ ಅಂಶಗಳನ್ನು ಅಧ್ಯಯನದಲ್ಲಿ ಪತ್ತೆ ಮಾಡಲಾಗಿದೆ. ಗರ್ಭಿಣಿ, ಬಾಣಂತಿ ಹಾಗೂ ಚಿಕ್ಕ ಮಕ್ಕಳ ಆರೈಕೆಯಲ್ಲಿ ಆಗಿರುವ ತೊಂದರೆ ಕೂಡ ಅಸಹಜ ಬೆಳವಣಿಗೆಗೆ ಕಾರಣವಾಗಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿಗಳಿಗೆ ದಾಖಲಾದ ಮಕ್ಕಳ ಆರೋಗ್ಯವನ್ನು ಮಾತ್ರ ತಪಾಸಣೆ ಮಾಡಲಾಗಿದೆ.

‘ಮಹಿಳೆಯೊಬ್ಬರು ಗರ್ಭಿಣಿಯಾದ ದಿನದಿಂದ ಶಿಶು ಜನಿಸಿದ 1,000 ದಿನಗಳು ಮಗುವಿನ ಪಾಲಿಗೆ ‘ಚಿನ್ನದ ಅವಧಿ’. ಈ ಸಂದರ್ಭದಲ್ಲಿ ಗರ್ಭಿಣಿ, ಬಾಣಂತಿಯರು ಹಾಗೂ ಶಿಶುಗಳಿಗೆ ಪೌಷ್ಟಿಕ ಆಹಾರ ಅತ್ಯಗತ್ಯ. 6 ತಿಂಗಳವರೆಗೆ ತಾಯಿ ಎದೆಹಾಲು ಶಿಶುಗಳನ್ನು ಸಶಕ್ತಗೊಳಿಸುತ್ತದೆ. ಆನಂತರ ಅಗತ್ಯ ಪೌಷ್ಟಿಕ ಆಹಾರವನ್ನು ಒದಗಿಸಬೇಕು. ಕುಟುಂಬ ಆರ್ಥಿಕವಾಗಿ ಸಶಕ್ತವಾಗಿದ್ದರೂ ಮಕ್ಕಳನ್ನು ಅಪೌಷ್ಟಿಕತೆಯಿಂದ ಕಾಪಾಡುವ ಬಗೆಯು ಅನೇಕರಿಗೆ ಗೊತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಾ ನಾಯ್ಕ.

ಮಕ್ಕಳ ಅಪೌಷ್ಟಿಕತೆ ನಿರ್ಮೂಲನೆಗೆ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. 2017ರಿಂದ ‘ಮಾತೃಪೂರ್ಣ’ ಯೋಜನೆ ಜಾರಿಯಲ್ಲಿದ್ದು, ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕಾಂಶಯುಕ್ತ ಆಹಾರ ಅಥವಾ ಪದಾರ್ಥಗಳನ್ನು ಅಂಗನವಾಡಿ ಕೇಂದ್ರಗಳ ಮೂಲಕ ನೀಡಲಾಗುತ್ತಿದೆ. ರಕ್ತಹೀನತೆ ತಡೆಗಟ್ಟುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತಿದೆ. ಅಂಗನವಾಡಿಗೆ ದಾಖಲಾದ ಮಕ್ಕಳಿಗೆ 300 ದಿನ ಪೌಷ್ಟಿಕ ಆಹಾರವನ್ನು ಸರ್ಕಾರ ಒದಗಿಸುತ್ತದೆ.

6 ತಿಂಗಳಿಂದ 3 ವರ್ಷದವರೆಗಿನ ಅಪೌಷ್ಟಿಕ ಮಕ್ಕಳಿಗೆ ವಾರದಲ್ಲಿ ಮೂರು ದಿನ ಮೊಟ್ಟೆ ಹಾಗೂ ಮೂರು ದಿನ ನಿತ್ಯವೂ 20 ಗ್ರಾಂನಷ್ಟು ಹಾಲಿನ ಪುಡಿ ನೀಡಲಾಗುತ್ತದೆ. 3 ವರ್ಷದಿಂದ 6 ವರ್ಷಗಳವರೆಗಿನ ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ, ‘ಕ್ಷೀರಭಾಗ್ಯ’ ಯೋಜನೆಯಡಿ ವಾರದ 5 ದಿನ ಹಾಲು ಹಾಗೂ ಮಧ್ಯಾಹ್ನದ ಬಿಸಿಯೂಟ ಪೂರೈಸಲಾಗುತ್ತಿದೆ.

‘ಅಪೌಷ್ಟಿಕ ಮಕ್ಕಳನ್ನು ಪೌಷ್ಟಿಕ ಪುನರ್ವಸತಿ ಕೇಂದ್ರಗಳಿಗೆ (ಎನ್ಆರ್ಸಿ) ದಾಖಲಿಸಲಾಗುತ್ತಿದೆ. ಆರೋಗ್ಯ ಇಲಾಖೆ ನಿರ್ವಹಿಸುವ ಈ ಕೇಂದ್ರಗಳಲ್ಲಿ ತಾಯಿ ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಚಿಕಿತ್ಸೆಗೆ ಅವಕಾಶವಿದೆ. ಇದಕ್ಕೆ ಸರ್ಕಾರ ಪ್ರೋತ್ಸಾಹ ಧನ ಕೂಡ ನೀಡುತ್ತದೆ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಕುರಿತು ಪಾಲಕರಲ್ಲಿ ಅರಿವು ಮೂಡಿಸಲಾಗುತ್ತಿದೆ’ ಎಂದು ರಾಜಾ ನಾಯ್ಕ ವಿವರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-43-1717642086

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.