ದಾವಣಗೆರೆ: ‘ದಕ್ಷಿಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಇದನ್ನು ಬೇಧಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಆನೆಕೊಂಡದಲ್ಲಿ ಸೋಮವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಶಿವಶಂಕರಪ್ಪ ಅವರು ಸಂಸದ, ಶಾಸಕ, ಮಂತ್ರಿಯಾಗಿ ಕ್ಷೇತ್ರದ ಬಡ, ಶೋಷಿತ, ದುರ್ಬಲ, ಅಹಿಂದ ವರ್ಗದ ಪ್ರಗತಿಗೆ ಶ್ರಮಿಸಿದ್ದಾರೆ. ಮನೆ, ನಿವೇಶನ, ಭೂಮಿ ನೀಡುವ ಜೊತೆಗೆ ಕಲ್ಯಾಣ ಮಂಟಪ ಕಟ್ಟಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ₹ 10 ಕೋಟಿಗೂ ಹೆಚ್ಚು ವೆಚ್ಚ ಮಾಡಿ ಜನರಿಗೆ ಉಚಿತ ಲಸಿಕೆ ಹಾಕಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ’ ಎಂದರು.

‘ಮಾದಿಗ ಸಮುದಾಯಕ್ಕೆ ಹೆಚ್ಚಿನ ಸಹಕಾರ ನೀಡಿದ ಶಾಮನೂರು ಕುಟುಂಬದ ಕುಡಿ ಸಮರ್ಥ್ ಅವರನ್ನು ಗೆಲ್ಲಿಸಬೇಕು. ಪ್ರತಿ ಬೂತ್ಗಳಲ್ಲೂ ನೂರಕ್ಕೆ ನೂರು ಮತ ಕಾಂಗ್ರೆಸ್ಗೆ ನೀಡಬೇಕು’ ಎಂದರು.

‘ಮಾದಿಗರನ್ನು ದಾರಿ ತಪ್ಪಿಸುವ ಷಡ್ಯಂತ್ರ ನಡೆಯುತ್ತಿದೆ. ಇದಕ್ಕೆ ನಾವ್ಯಾರೂ ಅವಕಾಶ ನೀಡುವುದು ಬೇಡ. ಸರ್ಕಾರದ ಮೇಲೆ ಒತ್ತಡ ತಂದು ಪರಿಶಿಷ್ಟ ಜಾತಿಯವರಿಗೆ ಸಿಗಬೇಕಾಗ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸುವೆ’ ಎಂದು ಭರವಸೆ ನೀಡಿದರು.

ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ‘ರಾಜಕಾರಣಕ್ಕೆ ಯುವ ಪೀಳಿಗೆ ಪ್ರವೇಶಿಸಬೇಕೆಂಬ ಆಶಯದಿಂದ ಕಾಂಗ್ರೆಸ್ ಸಮರ್ಥ್ ಅವರಿಗೆ ಟಿಕೆಟ್ ನೀಡಿದ್ದು, ರಾಜ್ಯದಲ್ಲಿಯೇ ದಾಖಲೆ ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ಈ ವಿಷಯದಲ್ಲಿ ಮಾದಿಗ ಹಾಗೂ ಮುಸ್ಲಿಂ ಸಮುದಾಯದ ಹೊಣೆಗಾರಿಕೆ ಹೆಚ್ಚು ಇದೆ’ ಎಂದು ಹೇಳಿದರು.

ಬಸಾಪುರ- ಹೊಸಕ್ಯಾಂಪ್, ಇಂದಿರಾ ನಗರ ಸೇರಿ ವಿವಿಧೆಡೆ ಪ್ರಚಾರ ನಡೆಸಲಾಯಿತು. ಮುಖಂಡರಾದ ಬಿ.ಎಂ.ಹನುಮಂತಪ್ಪ, ಕೊಟ್ರಯ್ಯ, ವೀರಯ್ಯ, ಚೌಡಪ್ಪ, ದ್ಯಾಮಪ್ಪ, ಎತ್ತಪ್ಪ, ವೇಮಣ್ಣ, ಮಲ್ಲೇಶ್, ನಾಗರಾಜ್, ಭರಮಸಾಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮುಬಾರಕ್, ರೆಹಮತ್ ವುಲ್ಲಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-44-551395999

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.