ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದ ತಂಜಿಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ದಾದು ಸೇಠ್ ಅವರ ವಿರುದ್ಧ ಮುಸ್ಲಿಂ ಸಮುದಾಯದ ಯುವಕರು ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಇಮಾಮ್ ನಗರದ ತಂಜಿಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ಕಚೇರಿ ಆವರಣದಲ್ಲಿ ಮುಸ್ಲಿಂ ಯುವಕರು ‘ಸಮುದಾಯದ ಎಲ್ಲರ ಅಭಿಪ್ರಾಯ ಪಡೆಯದೇ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಳಿ ಹೋಗಿ ಶಾಮನೂರು ಕುಟುಂಬಕ್ಕೆ ಟಿಕೆಟ್ ಕೇಳಿದ್ದು ಯಾಕೆ’ ಎಂದು ತರಾಟೆಗೆ ತೆಗೆದುಕೊಂಡರು. ಯುವಕರ ಪ್ರಶ್ನೆಗಳಿಗೆ ದಾದು ಸೇಠ್ ತಬ್ಬಿಬ್ಬಾದರು.

‘ಮಂಗಳವಾರ ನಡೆದ ಉಸ್ತುವಾರಿ ಸಮಿತಿ ಸಭೆಯಲ್ಲಿ ಕೆಲವರು ಮುಸ್ಲಿಮರಿಗೆ ಅಪಮಾನ ಮಾಡಿದ್ದಾರೆ. ₹ 500, ₹ 1,000 ಕೊಟ್ಟರೆ ಮುಸ್ಲಿಮರು ಮತ ಹಾಕುತ್ತಾರೆ ಅಂತ ಘೋಷಣೆ ಕೂಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಾದು ಸೇಠ್ ಸಹಚರರು ಹಾಗೂ ಅಬ್ದುಲ್ ಜಬ್ಬಾರ್ ಬೆಂಬಲಿಗರ ನಡುವೆ ಒಂದು ಹಂತದಲ್ಲಿ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.

ಯುವಕರು ತೀವ್ರ ತರಾಟೆಗೆ ತಗೆದುಕೊಳ್ಳುತ್ತಿದ್ದಂತೆ ದಾದು ಸೇಠ್ ಅವರು ‘ರಂಜಾನ್ ಹಬ್ಬದ ಬಳಿಕ ಪ್ರತಿಕ್ರಿಯೆ ನೀಡುವೆ’ ಎಂದು ಸ್ಥಳದಿಂದ ತೆರಳಿದರು.

‘ಸಮುದಾಯದವರು ಶಾಮನೂರು ಕುಟುಂಬದವರನ್ನು ಗೆಲ್ಲಿಸುತ್ತಾ ಬಂದಿದ್ದೇವೆ. ಅವರು ನಮಗೆ ಮತ ಹಾಕಿ ಗೆಲ್ಲಿಸಬಾರದಾ? ನಮ್ಮ ಸಮುದಾಯಕ್ಕೂ ಅವರು ಅವಕಾಶ ಕಲ್ಪಿಸಬೇಕು. ಒಂದೊಳ್ಳೆ ಆಸ್ಪತ್ರೆ ಇಲ್ಲ. ಶಿಕ್ಷಣ ಸಂಸ್ಥೆಗಳಿಲ್ಲ. ಸ್ಕ್ಯಾನಿಂಗ್ ಸೆಂಟರ್ ಇಲ್ಲ, ನಮ್ಮವರಿಗೆ ಟಿಕೆಟ್ ಕೊಡದಿದ್ದರೆ ಮತ ಹಾಕುವುದಿಲ್ಲ’ ಎಂದು ತಂಜ್ಹೀಮ್ ಕಮಿಟಿಯ ಸದಸ್ಯ ಸೈಯ್ಯದ್ ಆರೀಫ್ ಹೇಳಿದರು.

‘ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ ಅವರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಗೆಲ್ಲುತ್ತದೆ’ ಎಂದು ದಾದು ಸೇಠ್ ಹೇಳಿದ್ದರು. ಅವರ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ದಾದು ಸೇಠ್ ಅವರೊಂದಿಗೆ ಕಮಿಟಿಯ ಕೆಲ ಸದಸ್ಯರೂ ಬೆಂಗಳೂರಿಗೆ ತೆರಳಿ ಸಮರ್ಥ ಪರ ಲಾಬಿ ನಡೆಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260319-43-2622544

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.