ದಾವಣಗೆರೆ: ಸೂರ್ಯನ ಪ್ರಖರತೆಯಿಂದ ಹಣೆಯಿಂದ ಕೆಳಗಿಯುತ್ತಿದ್ದ ಬೆವರ ಹನಿಗಳ ಜತೆ, ಎರಚಿದ ಬಣ್ಣದ ಪುಡಿಯೂ ಬೆರೆತು ಅಲ್ಲಿದ್ದ ಎಲ್ಲರ ಮುಖದಲ್ಲೂ ಓಕುಳಿಯ ರಂಗು.. ಕೈಯಲ್ಲಿ ಪಕ್ಷದ ಬಾವುಟ, ಬಾಯಲ್ಲಿ ಘೋಷಣೆ, ಬಿರುಬಿಸಿಲಿನಲ್ಲೂ ಮನದಲ್ಲಿ ಮಿಂಚಿನ ಸಂಚಲನ...

ನಗರದ ಪಿ.ಬಿ. ರಸ್ತೆಯ ಡಿಆರ್ಆರ್ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರದ ಹೊರಗೆ ಸೇರಿದ್ದ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸೋಮವಾರ ಇನ್ನಿಲ್ಲದ ಸಂಭ್ರಮ ಮನೆ ಮಾಡಿತ್ತು. ಮತ ಎಣಿಯು 18ನೇ ಸುತ್ತು ದಾಟುತ್ತಿದ್ದಂತೆಯೇ ಪಕ್ಷದ ಅಭ್ಯರ್ಥಿಯ ಗೆಲುವು ಬಹುತೇಕ ಪಕ್ಕಾ ಆಗಿತ್ತು. ಸಮರ್ಥ್ ಶಾಮನೂರು ಮುನ್ನಡೆಯಲ್ಲಿದ್ದಾರೆ ಎಂದು 8ನೇ ಸುತ್ತಿನ ಎಣಿಕೆಯ ನಂತರ ಮೈಕ್ನಲ್ಲಿ ಘೋಷಿಸುತ್ತಿದ್ದಂತೆಯೇ ಕಾರ್ಯಕರ್ತರ ಉತ್ಸಾಹದ ಕಟ್ಟೆಯೊಡೆಯಿತು.

‘ಜೈ ಕಾಂಗ್ರೆಸ್, ಜೈ ಮಲ್ಲಣ್ಣ, ಜೈ ಸಮರ್ಥ್’ ಎಂದು ಘೋಷಣೆ ಕೂಗುತ್ತಾ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ಮಹಿಳಾ ಕಾರ್ಯಕರ್ತರ ದಂಡೂ ಸೇರಿತ್ತು. ತಾವೂ ಒಂದೆರೆಡು ಹೆಜ್ಜೆ ಹಾಕಿ ಸಂಭ್ರಮಕ್ಕೆ ಇನ್ನಷ್ಟು ರಂಗು ತುಂಬಿದರು. ಸಮರ್ಥ್ ಶಾಮನೂರು, ಎಸ್.ಎಸ್. ಮಲ್ಲಿಕಾರ್ಜುನ್, ಡಾ. ಪ್ರಭಾ ಮಲ್ಲಿಕಾರ್ಜುನ್, ರಿಜ್ವಾನ್ ಅರ್ಷದ್, ಜಮೀರ್ ಅಹ್ಮದ್ ಮೊದಲಾದವರ ಕಟೌಟ್ ಹಿಡಿದಿದ್ದ ಕಾರ್ಯಕರ್ತರು ಜೈಕಾರ ಹಾಕಿ ಸಂಭ್ರಮದ ಕಳೆ ಹೆಚ್ಚಿಸಿದರು. ಕೆಲ ಅಭಿಮಾನಿಗಳು ಕಟೌಟ್ಗಳಿಗೆ ಹಾಲಿನ ಅಭಿಷೇಕ ಮಾಡಿ ಪಕ್ಷ ನಿಷ್ಠೆ ಮೆರೆದರು.

ಆರಂಭದಲ್ಲಿ ಬಿಜೆಪಿ ಮುನ್ನಡೆ: ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಂಡಾಗ ಎಣಿಕೆ ಕೇಂದ್ರದ ಎದುರು ಬೆರಳೆಣಿಕೆಯ ಜನರಷ್ಟೇ ಇದ್ದರು. ಮೊದಲ ಸುತ್ತಿನಿಂದಲೇ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು. ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಸತತವಾಗಿ ಮುನ್ನಡೆ ಕಾಯ್ದುಕೊಂಡಿದ್ದರೂ ಎಂಟನೇ ಸುತ್ತಿನ ಮತ ಎಣಿಕೆಯು ಫಲಿತಾಂಶಕ್ಕೆ ತಿರುವು ನೀಡಿತು.

ಏಳನೇ ಸುತ್ತಿನಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಹೆಚ್ಚು ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಶುರು ಮಾಡಿದರು. ಮೈಕ್ನಲ್ಲಿ ಈ ಮಾಹಿತಿ ಸಿಗುತ್ತಿದ್ದಂತೆಯೇ, ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮಿಂಚಿನ ಸಂಚಲನ ಉಂಟಾಯಿತು. 8ನೇ ಸುತ್ತಿನಲ್ಲಿ ದೊರತೆ ಸ್ಪಷ್ಟ ಮುನ್ನಡೆಯಿಂದ ಸ್ಥಳಕ್ಕೆ ಇನ್ನಷ್ಟು ಕಾರ್ಯಕರ್ತರು ಧಾವಿಸಲು ಶುರು ಮಾಡಿದರು. ಬೆಳಿಗ್ಗೆ 11.30ರ ಹೊತ್ತಿಗೆ ಕಾಂಗ್ರೆಸ್ ಕಾರ್ಯಕರ್ತರ ದಂಡು ಜಮಾವಣೆಗೊಂಡಿತು.

8ನೇ ಸುತ್ತಿನ ನಂತರ ಪ್ರತೀ ಸುತ್ತಿನಲ್ಲಿ ಪಕ್ಷದ ಅಭ್ಯರ್ಥಿ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಂತೆಯೇ ಕಾರ್ಯಕರ್ತರಲ್ಲಿ ತರತರದ ಲೆಕ್ಕಾಚಾರಗಳು ಶುರುವಾಗಿದ್ದವು. ‘ಮುಸ್ಲಿಂ ಬಾಹುಳ್ಯದ ಮತ್ತೊಂದು ಮತಗಟ್ಟೆಯ ಎಣಿಕೆಯ ಬಳಿಕ ಕಾಂಗ್ರೆಸ್ ಮುನ್ನಡೆ ಭಾರಿ ಪ್ರಮಾಣದಲ್ಲಿ ಹೆಚ್ಚಲಿದೆ, ಭಾಷಾ ನಗರದ ಮತದಾರರು ಅತಿಹೆಚ್ಚು ಲೀಡ್ ನೀಡಿದ್ದಾರೆ, ಸಮರ್ಥ್ ಶಾಮನೂರು ಗೆಲುವು ಬಹುತೇಕ ಪಕ್ಕಾ’ ಎಂಬಿತ್ಯಾದಿ ಮಾತುಗಳು ಕೇಳಿಬಂದವು.

ಆದರೆ, ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರ ನಿದ್ದೆಗೆಡಿಸಿದ್ದು, ಎಸ್ಡಿಪಿಐ ಅಭ್ಯರ್ಥಿಯು ಪ್ರತೀ ಸುತ್ತಿನಲ್ಲಿ ಬಾಚಿಕೊಳ್ಳುತ್ತಿದ್ದ ಮತಗಳ ಪ್ರಮಾಣ. ‘ಎಸ್ಡಿಪಿಐ ಅಭ್ಯರ್ಥಿ ಪಡೆಯುತ್ತಿರುವ ಮತಗಳೆಲ್ಲವೂ ಮುಸ್ಲಿಂ ಸಮುದಾಯದ ಮತಗಳಾಗಿದ್ದು, ಅವು ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳು. ಅಫ್ಸರ್ ಕೊಡ್ಲಿಪೇಟೆ 5,000ಕ್ಕಿಂತ ಹೆಚ್ಚು ಮತ ಪಡೆಯಲಿಕ್ಕಿಲ್ಲ ಎಂದುಕೊಂಡಿದ್ದೆವು. ಆದರೆ, ದಾಖಲೆಯ ಪ್ರಮಾಣದ ಮತಗಳನ್ನು ಪಡೆಯುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ’ ಎಂದು ಕಾಂಗ್ರೆಸ್ ಕಾರ್ಯಕರ್ತ ಸಾಜದ್ ಅಚ್ಚರಿ ವ್ಯಕ್ತಪಡಿಸಿದರು.

ಕೊನೆವರೆಗೂ ಬಿಜೆಪಿ ನಿರೀಕ್ಷೆ: ‘15ನೇ ಸುತ್ತಿನ ಮತ ಎಣಿಕೆಯ ಹೊತ್ತಿಗೆ ಮುಸ್ಲಿಂ ಬಾಹುಳ್ಯದ ಮತಗಟ್ಟೆಗಳ ಎಣಿಕೆ ಮುಕ್ತಾಯವಾಗಿ, ಗ್ರಾಮೀಣ ಭಾಗದ ಒಂದಿಷ್ಟು ಮತಗಟ್ಟೆಗಳ ಎಣಿಕೆ ಶುರುವಾಗಲಿದೆ. ಬಹುಶಃ ಕಣ ಚಿತ್ರಣ ಅಲ್ಲಿಂದ ಬದಲಾಗಲಿದೆ’ ಎಂದು ಬಿಜೆಪಿ ಕಾರ್ಯಕರ್ತರು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದರು. ಗ್ರಾಮೀಣ ಭಾಗ ಬಿಜೆಪಿಗೆ ಮತ್ತೆ ಮುನ್ನಡೆ ತಂದುಕೊಡಲಿವೆ ಎಂದು ಇಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಭಾರಿ ವಿಶ್ವಾಸ ಇಟ್ಟುಕೊಂಡಿದ್ದರು. ಆದರೆ ಅವರ ನಿರೀಕ್ಷೆ ಕೈಗೂಡಲಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-43-974298821

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.