ಬೆಂಗಳೂರು: ‘ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಎಸ್ಡಿಪಿಐ ಪಡೆದಿರುವ ಶೇ 100ರಷ್ಟು ಮತಗಳು ಕಾಂಗ್ರೆಸ್ನವೇ ಆಗಿವೆ. ತಪ್ಪು ಸರಿಪಡಿಸದಿದ್ದರೆ ಮತ್ತೆ ಅನಾಹುತ ಆಗಲಿದೆ’ ಎಂದು ಕಾಂಗ್ರೆಸ್ನಿಂದ ಅಮಾನತು ಗೊಂಡಿರುವ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಎಚ್ಚರಿಕೆ ನೀಡಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಶಾಮನೂರು ಶಿವಶಂಕರಪ್ಪ ಅವರು ಇದ್ದಾಗಲೇ ನಾವು ಟಿಕೆಟ್ ಕೇಳಿದ್ದೆವು. ಅವರ ನಿಧನದ ನಂತರವೂ ಕೇಳಿದ್ದೇವೆ. ಅದಕ್ಕೆ ಇಷ್ಟೆಲ್ಲಾ ಆಗಿದೆ. ಮುಂದೆ ಎಲ್ಲ ಸರಿ ಹೋಗಬಹುದು. ಸರಿ ಮಾಡಲು ಅವಕಾಶವಿದೆ’ ಎಂದರು.

‘ಗೆಲುವಿನ ಶ್ರೇಯ ಸಚಿವ ಜಮೀರ್ ಅಹಮದ್ಗೆ ಸೇರಬೇಕು. ದಾವಣಗೆರೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಮನೆಯಲ್ಲಿ ಜಮೀರ್ ಸುದ್ದಿಗೋಷ್ಠಿ ನಡೆಸಿ ಸಮರ್ಥ್ಗೆ ಮತ ಹಾಕುವಂತೆ ಮನವಿ ಮಾಡಿದ್ದರಿಂದ ಗೆಲ್ಲಲು ಸಾಧ್ಯವಾಯಿತು. ಇಲ್ಲದೇ ಇದ್ದಿದ್ದರೆ ಚುನಾವಣಾ ಚಿತ್ರಣವೇ ಬದಲಾಗುತ್ತಿತ್ತು’ ಎಂದು ಹೇಳಿದರು.

‘ಗೆಲುವಿನ ಅಂತರ ಕಡಿಮೆಯಾಗಲಿದೆ. ಆದರೆ, ಕಾಂಗ್ರೆಸ್ ಗೆಲ್ಲಲಿದೆ ಎಂದು ಫಲಿತಾಂಶಕ್ಕೂ ಮೊದಲೇ ಹೇಳಿದ್ದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ಕೊಡದ ಕಾರಣಕ್ಕೆ ಮುಸ್ಲಿಮರು ಬೇಸರಗೊಂಡಿದ್ದರು. ಗೆಲುವಿನ ಅಂತರ ಕಡಿಮೆಯಾಗಲು ಇದೇ ಕಾರಣ’ ಎಂದರು.

‘ನನ್ನನ್ನು ಪಕ್ಷದಿಂದ ಅಮಾನತುಗೊಳಿಸಿರುವುದು ಮಾಧ್ಯಮಗಳಿಂದಷ್ಟೇ ತಿಳಿದುಬಂದಿದೆ. ಇದುವರೆಗೆ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಬಂದಿದ್ದರೆ ಉತ್ತರ ಕೊಡುತ್ತಿದ್ದೆ. ಪಕ್ಷ ಕ್ರಮ ತೆಗೆದುಕೊಂಡಿರುವುದು ಸರಿಯಾಗಿದೆ ಎಂದು ಮುಖ್ಯಮಂತ್ರಿ ಕೂಡಾ ಹೇಳಿದ್ದಾರಂತೆ. ಕ್ರಮ ತೆಗೆದುಕೊಂಡಿರುವುದು ಸರಿಯೇ ಎನ್ನುವುದನ್ನು ಅವರು ಒಮ್ಮೆ ಇಲ್ಲಿಗೆ ಬಂದು ನೋಡಲಿ’ ಎಂದು ಆಗ್ರಹಿಸಿದರು.

‘ಮತ ಕೊಡಬಾರದು ಎಂದು ಒಮ್ಮೆ ಜನ ತೀರ್ಮಾನಿಸಿದರೆ ಕೊಡುವುದಿಲ್ಲ. ಬೇರೆಯವರನ್ನು ಒಳ್ಳೆಯವರಾ, ಕೆಟ್ಟವರಾ ಎಂದೂ ನೋಡುವುದಿಲ್ಲ. ಕ್ಷೇತ್ರಕ್ಕೆ ಜಮೀರ್ ಹೋದ ಕಾರಣ ಅಸಮಾಧಾನ ಸರಿ ಹೋಗಿತ್ತು. ಸೋಲುವ ಕ್ಷೇತ್ರವನ್ನು ನಾವು ಗೆದ್ದಿದ್ದೇವೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-51-1196726931

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.