ಹೊನ್ನಾಳಿ: ದೀಪಾವಳಿ ಅಂಗವಾಗಿ ಹೂವು, ಹಣ್ಣು ಮತ್ತು ಹಬ್ಬದ ಇತರೆ ಸಾಮಗ್ರಿಗಳ ಖರೀದಿಗೆ ಜನರು ಬುಧವಾರ ಮುಗಿಬಿದ್ದ ಕಾರಣ ದಟ್ಟಣೆ ಹೆಚ್ಚಿ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಕಂಡುಬಂದಿತು.

ಬುಧವಾರ ಸಂತೆ ದಿನವೂ ಆಗಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಖರೀದಿಗೆ ಬಂದಿದ್ದರು. ಪಟ್ಟಣದ ತುಮ್ಮಿನಕಟ್ಟೆ ರಸ್ತೆ, ಹಿರೇಕಲ್ಮಠ ರಸ್ತೆ, ದೇವನಾಯಕನಹಳ್ಳಿಗೆ ಹೋಗುವ ರಸ್ತೆ, ಸಂಪಿಗೆ ರಸ್ತೆ ಹಾಗೂ ಮಾರುಕಟ್ಟೆಯಲ್ಲಿ ಈ ಬಾರಿ ಕಾಲಿಡಲಾರದಷ್ಟು ಜನಜಂಗುಳಿ ಸೇರಿತ್ತು.

ರಾಜ್ಯ ಹೆದ್ದಾರಿ ತುಮ್ಮಿನಕಟ್ಟೆ ರಸ್ತೆಯ ಇಕ್ಕೆಲಗಳಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದರಿಂದ ರಸ್ತೆ ಮತ್ತಷ್ಟು ಕಿರಿದಾಗಿತ್ತು. ಅಲ್ಲದೇ ತುಮ್ಮಿನಕಟ್ಟೆ ರಸ್ತೆಯ ಅಕ್ಕಪಕ್ಕದಲ್ಲಿಯೇ ಹೂವು, ಹಣ್ಣು ಸೇರಿ ದೀಪಾವಳಿ ಹಬ್ಬಕ್ಕೆ ಬೇಕಾದ ಎಲ್ಲಾ ವಸ್ತುಗಳ ಮಾರಾಟ ನಡೆದಿದ್ದರಿಂದ ವಾಹನಗಳ ಸವಾರರು ಪರದಾಡಬೇಕಾಯಿತು.

ಹಣ್ಣುಗಳು ಸೋವಿ: ಈ ಬಾರಿ ಹಣ್ಣುಗಳು ಸೋವಿಯಾಗಿದ್ದವು. ಸೇಬು, ಕಿತ್ತಳೆ, ಮೊಸಂಬಿ, ಪೇರಲ, ದ್ರಾಕ್ಷಿ, ದಾಳಿಂಬೆ ಸೇರಿ ಎಲ್ಲಾ ಹಣ್ಣುಗಳ ದರ ಕಡಿಮೆಯಾಗಿತ್ತು. ಆದರೆ, ಹೂವು ಮಾತ್ರ ದುಬಾರಿಯಾಗಿತ್ತು. ಸೇವಂತಿ ಹೂವು ಕೆ.ಜಿ.ಗೆ 200 ದಾಟಿತ್ತು.

ತರಕಾರಿ ದುಬಾರಿ: ತರಕಾರಿ ದರ ಹಿಂದೆಂದಿಗಿಂತಲೂ ಈ ವಾರ ತುಸು ಹೆಚ್ಚಾಗಿತ್ತು. ಕಳಪೆ ಗುಣಮಟ್ಟದ ತರಕಾರಿ ಮಾರುಕಟ್ಟೆಯಲ್ಲಿ ತುಂಬಿ ತುಳುಕುತ್ತಿತ್ತು. ಗುಣಮಟ್ಟದ ತರಕಾರಿಯನ್ನು ಕೊಳ್ಳಲು ಇಡೀ ಮಾರುಕಟ್ಟೆಯನ್ನು ತಡಕಾಡಬೇಕಾಗಿತ್ತು. ಬೀನ್ಸ್ನಿಂದ ಹಿಡಿದು ಎಲ್ಲ ತರಕಾರಿಗಳ ತರಕಾರಿ ದರ ₹ 100, ₹ 200ರ ಗಡಿ ದಾಟಿತ್ತು. ಆದರೂ ಜನರಿಗೆ ಕೊಳ್ಳುವುದು ಅನಿವಾರ್ಯವಾಗಿತ್ತು. ಕೆ.ಜಿ. ಲೆಕ್ಕದಲ್ಲಿ ಕೊಳ್ಳುತ್ತಿದ್ದವರು ದರ ಏರಿಕೆಯ ಕಾರಣದಿಂದ ಕಾಲು ಕೆ.ಜಿ. ಲೆಕ್ಕದಲ್ಲಿ ಕೊಂಡು ಸಮಾಧಾನಪಟ್ಟುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.