ತ್ಯಾವಣಿಗೆ: ‘ಖಾಸಗಿ ಶಾಲೆಯಿರಲಿ ಅಥವಾ ಸರ್ಕಾರಿ ಶಾಲೆ ಆಗಿರಲಿ ಒಂದೇ ಮಾದರಿಯ ಶಿಕ್ಷಣ ಹಾಗೂ ಮೂಲ ಸೌಕರ್ಯಗಳು ಬೇಕೇ ವಿನಾ ಧರ್ಮ ಸೂಚಕಗಳು ಅಲ್ಲ’ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಅಭಿಪ್ರಾಯಪಟ್ಟರು.

ತ್ಯಾವಣಿಗೆ ಸಮೀಪದ ಕಾರಿಗ ನೂರು ಗ್ರಾಮದ ಸರ್ಕಾರಿ ಶಾಲೆಯ ಪ್ರಾರಂಭೋತ್ಸವ ಅಂಗವಾಗಿ ಏರ್ಪಡಿಸಿದ್ದ ಪೋಷಕರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳ ಕಲಿಕೆಗೆ ಆಧುನಿಕ ತಂತ್ರಜ್ಞಾನ ಒಳಗೊಂಡ ಸುಸಜ್ಜಿತ ಕಟ್ಟಡ, ಆಡಳಿತ ಪಕ್ಷದ ಕಾರ್ಯಸೂಚಿ ಇಲ್ಲದ ಪಠ್ಯ, ಸಕಾಲಕ್ಕೆ ಪುಸ್ತಕ ವಿತರಣೆ, ಹಳ್ಳಿಗಳಿಂದ ಜಿಲ್ಲಾ ಕೇಂದ್ರಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯಗಳು ಅಗತ್ಯ ಇವೆಯೇ ಹೊರತು ಹಿಜಾಬ್, ವಿಭೂತಿ, ಜನಿವಾರಗಳಲ್ಲ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳ ಕಲಿಕೆಗೆ ಉಚಿತ ಸೌಲಭ್ಯಗಳು ಎಷ್ಟು ಮುಖ್ಯವೋ, ಗುಣಮಟ್ಟಕ್ಕೆ ಒತ್ತು ಕೊಡುವಂತಹ ವಾತಾವರಣ ನಿರ್ಮಾಣದ ಜವಾಬ್ದಾರಿ ಸರ್ಕಾರದ ಮೇಲಿದೆ’ ಎಂದು ತಿಳಿಸಿದರು.

‘ಎಲ್ಲ ಸೌಲಭ್ಯಗಳಿಗೂ ಸರ್ಕಾರದ ಮೇಲೆ ಅವಲಂಬನೆಯಾಗದೆ ಸುಣ್ಣ– ಬಣ್ಣದಂತಹ ಸಣ್ಣಪುಟ್ಟ ಖರ್ಚುಗಳನ್ನು ಪೋಷಕರೇ ನಿರ್ವಹಿಸೋಣ’ ಎಂದು ಎಸ್ಡಿಎಂಸಿ ಅಧ್ಯಕ್ಷ ಗಂಗಾಧರ್ ಸಲಹೆ ನೀಡಿದರು.

ಗ್ರಾ.ಪಂ. ಮಾಜಿ ಸದಸ್ಯ ಬಸವೇಶ್ ಪಟೇಲ್, ಮುಖ್ಯಶಿಕ್ಷಕಿ ಎಚ್.ಎಂ. ಅಕ್ಕ ಮಹಾದೇವಿ, ವಸಂತಮ್ಮ, ಮಮತಾ, ಧೀಲ್ಫಿಜಾಬಾನು ಹಾಗೂ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-43-691433297

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.