ದಾವಣಗೆರೆ: ‘ಹಿರಿಯ ನಾಗರಿಕರು ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ಒಳ್ಳೆಯ ಚಿಂತನೆಗಳೊಂದಿಗೆ ಖುಷಿಯಾಗಿ ಜೀವನ ಸಾಗಿಸಬೇಕು’ ಎಂದು ಹಿರಿಯ ರೇಡಿಯಾಲಜಿಸ್ಟ್ ಡಾ.ಎಸ್.ಆರ್. ಹೆಗಡೆ ಸಲಹೆ ನೀಡಿದರು.

ತಾಲ್ಲೂಕಿನ ಹಳೇಬಾತಿಯ ತಪೋವನ ಆಸ್ಪತ್ರೆಯಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಆಸರೆ’ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವ್ಯಾಯಾಮ, ನಡಿಗೆ ಮುಂತಾದ ದೈಹಿಕ ಚಟುವಟಿಕೆಗಳಲ್ಲಿ ತೊಡಗುವುದರಿಂದ ಆರೋಗ್ಯ ಸುಧಾರಿಸುತ್ತದೆ. ಜಾಸ್ತಿ ನೀರು ಕುಡಿಯಿರಿ. ಅದರಿಂದ ವಿಷಕಾರಿ ವಸ್ತುಗಳು ದೇಹದಿಂದ ಹೊರ ಹೋಗುತ್ತವೆ. ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಉತ್ತಮ ಆಹಾರ ಸೇವಿಸಬೇಕು. ಇರುವಷ್ಟು ದಿನ ಸಂತೋಷವಾಗಿರಬೇಕು. ಇನ್ನೊಬ್ಬರನ್ನು ಅವಲಂಬಿಸದಂತೆ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಮರೆವು ಸೇರಿ ಹಲವು ಬಗೆಯ ಆರೋಗ್ಯ ಸಮಸ್ಯೆಗಳನ್ನು ಹಿರಿಯ ನಾಗರಿಕರು ಎದುರಿಸುತ್ತಾರೆ. ಸರ್ಕಾರ ಜಾರಿಗೆ ತಂದಿರುವ ಆಸರೆ ಯೋಜನೆಯು ಅವರಿಗೆ ಸಹಾಯಕವಾಗಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಹೇಳಿದರು.

‘ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಮೆದು ಆಹಾರ ಸೇವಿಸಬೇಕು, ಚೆನ್ನಾಗಿ ನಿದ್ದೆ ಮಾಡಬೇಕು. ವ್ಯಾಯಾಮ, ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು’ ಎಂದು ಡಾ. ಚೈತ್ರಾ ತಿಳಿಸಿದರು.

‘ಹಿರಿಯ ನಾಗರಿಕರು ಚುರುಕಾಗಿ, ಖುಷಿಯಾಗಿರಬೇಕು. ಗುಂಪು ಚಟುವಟಿಕೆಗಳಲ್ಲಿ ತೊಡಗಬೇಕು. ಯಾವುದೇ ವಿಚಾರಕ್ಕೆ ಅನವಶ್ಯಕವಾಗಿ ಹೆದರಬಾರದು’ ಎಂದು ತಪೋವನ ಆಸ್ಪತ್ರೆ, ವಿದ್ಯಾಸಂಸ್ಥೆಗಳ ಚೇರ್ಮನ್ ಡಾ. ಶಶಿಕುಮಾರ್ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ರುದ್ರಪ್ಪ ಉಜ್ಜನಕೊಪ್ಪ, ‘ಆಸರೆ ಯೋಜನೆಯು ಮಾನವೀಯ ಮೌಲ್ಯಗಳ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ’ ಎಂದು ಹೇಳಿದರು. ನಗರ ಡಿವೈಎಸ್ಪಿ ಶರಣಬಸವೇಶ್ವರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.