ದಾವಣಗೆರೆ: ಖೋಟಾ ನೋಟು ಮುದ್ರಿಸಿ, ಚಲಾವಣೆ ಮಾಡುತ್ತಿದ್ದ ಇಬ್ಬರು ಅಪರಾಧಿಗಳಿಗೆ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹ 40,000 ದಂಡ ವಿಧಿಸಿದೆ.

ದಾವಣಗೆರೆಯ ಯಲ್ಲಮ್ಮ ನಗರದ ನಿವಾಸಿ ಎಸ್. ಅಶೋಕ (40) ಹಾಗೂ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಹಲವಾಗಲು ಗ್ರಾಮದ ನಿವಾಸಿ ಹಾಲೇಶ ಶಿಕ್ಷೆಗೆ ಗುರಿಯಾದವರು.

2022ರಲ್ಲಿ ಯಲ್ಲಮ್ಮ ನಗರದಲ್ಲಿ ಅಪರಾಧಿಗಳು ಖೋಟಾ ನೋಟು ಚಲಾವಣೆಯಲ್ಲಿ ತೊಡಗಿದ್ದರು. ಪೊಲೀಸರು ದಾಳಿ ನಡೆಸಿ ಖೋಟಾ ನೋಟು ಹಾಗೂ ಅವುಗಳ ತಯಾರಿಕೆಗೆ ಬಳಸುತ್ತಿದ್ದ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರವೀಣಕುಮಾರ್ ಆರ್.ಎನ್. ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಅಪರಾಧಿಗಳು ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವುದರಿಂದ ಶಿಕ್ಷಾ ಅವಧಿಯನ್ನು ಸೆಟ್ಆಫ್ ಮಾಡಲಾಗಿದೆ.

ತನಿಖಾಧಿಕಾರಿ ಮಂಜುನಾಥ್ ಬಿ. ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಕೀಲ ಜಯಪ್ಪ ಕೆ. ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.