ದಾವಣಗೆರೆ: ‘ನಮ್ಮ ನಂತರವೂ ನಾವು ಮಾಡಿದ ಸೇವೆಯನ್ನು ಜನರು ಸ್ಮರಿಸುವಂತಿರಬೇಕು. ರೈತರ ಸೇವೆ ಮಾಡುವ ಅವಕಾಶವನ್ನು ಭಗವಂತ ನಮಗೆ ಕಲ್ಪಿಸಿದ್ದಾನೆ. ರೈತರ ಸೇವೆ ಮಾಡುವ ನಾವೆಲ್ಲರೂ ಪುಣ್ಯವಂತರು’ ಎಂದು ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ. ಹೇಳಿದರು.

ದಾವಣಗೆರೆಯ ಕಾಡಜ್ಜಿಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಗುರುವಾರ ನಡೆದ ಕೃಷಿ ವಿಸ್ತರಣಾ ಸೇವೆಯ ಡಿಪ್ಲೊಮಾ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

‘ಪ್ರಮಾಣಪತ್ರ ಪಡೆದ ನೀವೆಲ್ಲರೂ ಕೃಷಿ ವಿಸ್ತರಣಾ ಸೇವೆಯ ಸಮಾನಂತರ ಕಾರ್ಯಕರ್ತರಾಗಿದ್ದೀರಿ. ಆಗಾಗ್ಗೆ ಪರಿಷ್ಕೃತವಾಗುವ ಇಲಾಖೆಯ ಕಾನೂನುಗಳನ್ನು ತಪ್ಪದೇ ಪಾಲಿಸಬೇಕು’ ಎಂದು ಸಲಹೆ ನೀಡಿದರು,.

ಹೇಮಂತ್ ಆರ್., ಪ್ರಥಮ, ಮೈತ್ರಾ ಎಂ.ಎಂ. ದ್ವಿತೀಯ, ನರೇಂದ್ರ ಅವರು ತೃತೀಯ ರ್ಯಾಂಕ್ ಪಡೆದರು. ವಿಜೇತರಿಗೆ ಪದಕ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಸಂಯೋಜಕ ಜಿ.ಟಿ. ಸುದರ್ಶನ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಉಪ ಕೃಷಿ ನಿರ್ದೇಶಕಿ ಭಾರತಮ್ಮ ಬಿ.ಯು., ಕಾಡಜ್ಜಿ ಎಫ್ಸಿಎಲ್ ಉಪ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಆರ್., ಕಾಡಜ್ಜಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥ ಗೊಂದಿ ಮಂಜುನಾಥ್, ನಿವೃತ್ತ ಡೀನ್ ಮಂಜುನಾಥ್, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ್, ಶಿಬಿರಾರ್ಥಿಗಳು ಹಾಗೂ ಕೃಷಿ ಪರಿಕರ ಮಾರಾಟಗಾರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-43-1686167163

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.