ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಿನ ಮನೆಯಲ್ಲಿ ಅರಳಿದ ಐಫೆಲ್ ಟವರ್

Last Updated 23 ಆಗಸ್ಟ್ 2019, 9:00 IST
ಅಕ್ಷರ ಗಾತ್ರ

ದಾವಣಗೆರೆ: ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿದ್ದ ಫಲಫುಷ್ಪ ಪ್ರದರ್ಶನ ಮತ್ತು ಸಸ್ಯ ಸಂತೆಗೆ ಶಾಸಕ ಎಸ್. ರವೀಂದ್ರನಾಥ್ ಶುಕ್ರವಾರ ಚಾಲನೆ ನೀಡಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿ 'ಗಾಜಿನ ಮನೆ ಅಭಿವೃದ್ಧಿಗೆ ಈವರೆಗೆ ₹ 25 ಕೋಟಿ ಖರ್ಚಾಗಿದ್ದು, ₹5ಕೋಟಿಯನ್ನು ಸ್ಮಾರ್ಟ್ ಸಿಟಿ ಕಂಪನಿ ನೀಡಲಿದೆ. ಈ ಹಣದಲ್ಲಿ ಇನ್ನಷ್ಟು ಗಿಡ ಮರಗಳನ್ನ ಬೆಳೆಸಿ ಜನರು ಆಕರ್ಷಿಸುಂತೆ ಅಭಿವೃದ್ಧಿ ಪಡಿಸಲಾಗುವುದು' ಎಂದರು.

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಲಕ್ಷ್ಮಿಕಾಂತ್ ಬೊಮ್ಮನ್ನರ ಮಾತನಾಡಿ ' ಗಾಜಿನ ಮನೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆಯ ಜೊತೆ ಚರ್ಚಿಸಲಾಗಿದೆ. ಬೆಂಗಳೂರಿನ ಲಾಲ್ ಭಾಗ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಅನುದಾನದ ಕೊರತೆ ಇದೆ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್ ಇತರರು ಇದ್ದರು.

ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆ ಎಂದರೆ 80 ಸಾವಿರ ಹೂವುಗಳದ ತಯಾರಿಸಿದ ಐಫೆಲ್ ಟವರ್. ವಿವಿಧ ಬಣ್ಣದ ಗುಲಾಬಿ ಹೂಗಳಿಂದ 30 ಅಡಿ ಎತ್ತರ ಹಾಗೂ 23 ಅಡಿ ಅಗಲದಲ್ಲಿ ನಿರ್ಮಿಸಿರುವ ಈ ಐಫೆಲ್ ಟವರ್ ಬಳಿ ಯುವತಿಯರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.

ವಿವಿಧ ಹಣ್ಣುಗಳಲ್ಲಿ ಕೆತ್ತಿದ ಗಾಂಧೀಜಿ, ಅಂಬೇಡ್ಜರ್, ಸ್ವಾಮಿ ವಿವೇಕಾನಂದ, ಸುಧಾಮೂರ್ತಿ, ಚಿತ್ರ ನಟರಾದ ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಅವರ ಮೂರ್ತಿಗಳು ಎಲ್ಲರನ್ನು ಆಕರ್ಷಿಸಿದವು. ಇವುಗಳಲ್ಲದೆ ಬೋನ್ಸಾಯ್ ಗಿಡಗಳು, ವಿವಿಧ ಹೂಗಳ ಜೋಡಣೆಗಳನ್ನು ಜನರು ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT