ಕುರುವ (ನ್ಯಾಮತಿ): ತಾಲ್ಲೂಕಿನ ಕುರುವ ಗಡ್ಡೆರಾಮೇಶ್ವರಸ್ವಾಮಿ ರಥೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು.

ಕೊನೆಯ ದಿನ ಶನಿವಾರ ರಾಂಪುರ ಹಾಲಸ್ವಾಮಿ ಮಠದ ಶಿವಕುಮಾರ ಹಾಲಸ್ವಾಮೀಜಿ ಅವರು ರಾಮೇಶ್ವರ ಮತ್ತು ದುರ್ಗಮ್ಮನವರಿಗೆ ಹಾಗೂ ಗವಿ ಹಾಲಸಿದ್ದೇಶ್ವರ ಅವರಿಗೆ ಪೂಜೆ ಸಲ್ಲಿಸಿ, ‘ಹೊನ್ನ ಕಲಶ ಶಿಖರ ಏರಿತ್ತು, ಅಂಗೈಯಲ್ಲಿನ ಲಿಂಗ ನಕ್ಕಿತು, ಗುರು ಕಾಯುವ’ ಎಂದು ನೂರಾರು ಭಕ್ತರ ಸಮ್ಮುಖದಲ್ಲಿ ಈ ವರ್ಷದ ಕಾರ್ಣಿಕ ನುಡಿದರು.

ಪ್ರತಿವರ್ಷದ ಪದ್ಧತಿಯಂತೆ ರಾಂಪುರ ಹಾಲಸ್ವಾಮಿ ಮಠದಿಂದ ಸ್ವಾಮೀಜಿ ಆಗಮಿಸಿ ಎಲ್ಲ ದೇವತೆಗಳಿಗೂ ಪೂಜೆ ಸಲ್ಲಿಸಿ, ಮಠದಿಂದ ತಂದ ಬುತ್ತಿಗಂಟನ್ನು ಬಿಚ್ಚಿ, ನಾಲ್ಕು ದಿಕ್ಕಿನ ಜನರನ್ನು ಕರೆದು ಹಂಚುತ್ತಾರೆ. ಯಾವ ದಿಕ್ಕಿನ ಜನರಿಗೆ ಹೆಚ್ಚಿನ ಬುತ್ತಿ ಬಂದಿರುತ್ತದೆಯೋ ಆ ದಿಕ್ಕಿನಲ್ಲಿ ಮಳೆ, ಬೆಳೆ ಸಮೃದ್ಧಿ ಆಗುತ್ತದೆ ಎಂಬುದು ಈ ಭಾಗದ ಜನರ ನಂಬಿಕೆ.

ಶ್ರೀಗಳ ಕಾರ್ಣಿಕ ನಾಡಿನ ಜನರಿಗೆ ಶುಭದ ಸಂಕೇತವಾಗಿದೆ ಎಂದು ಹಿರಿಯರು ವಿಶ್ಲೇಷಣೆ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-43-899775657

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.