ದಾವಣಗೆರೆ: ಮಳೆಗಾಲದಲ್ಲಿ ಸೋರುವ ನೀರು.. ಹಾಳಾಗಿರುವ ಬಾಗಿಲು ಹಾಗೂ ಕಿಟಕಿಗಳು.. ಕಳಚಿ ಬೀಳುವ ಆರ್ಸಿಸಿ ಕೊಠಡಿಗಳ ಚಾವಣಿಯ ಪದರ.. ಗಾಳಿ– ಬೆಳಕಿನ ಸರಿಯಾದ ವ್ಯವಸ್ಥೆ ಇಲ್ಲದಿರುವುದು..

ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಹಳೆಯ ಕಟ್ಟಡಗಳಲ್ಲಿ ಕಂಡುಬರುವ ಸಾಮಾನ್ಯ ದೃಶ್ಯಗಳಿವು. ಕೆಲವು ಶಾಲೆಗಳ ಕೊಠಡಿಗಳು ತೀರಾ ಹಳೆಯವಾಗಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜೀವ ಭಯದಲ್ಲೇ ನಿತ್ಯದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕಿದೆ.

ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಸೇರಿದ ಒಟ್ಟು 6,377 ಕೊಠಡಿಗಳಿವೆ. ಈ ಪೈಕಿ 166 ಕೊಠಡಿಗಳು ತೀರಾ ಹದಗೆಟ್ಟಿದ್ದು, ಅಪಾಯಕಾರಿ ಸ್ಥಿತಿಗೆ ತಲುಪಿವೆ. ಇನ್ನುಳಿದಂತೆ 957 ಕೊಠಡಿಗಳು ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸುತ್ತಿದ್ದು, ದುರಸ್ತಿಗಾಗಿ ಎದುರು ನೋಡುತ್ತಿವೆ.

‘2024–25ನೇ ಸಾಲಿನಲ್ಲಿ ₹ 5.59 ಕೋಟಿ ಮೊತ್ತದಲ್ಲಿ 518 ಶಾಲಾ ಕೊಠಡಿಗಳನ್ನು ದುರಸ್ತಿ ಮಾಡಲಾಗಿದೆ. 2025–26ನೇ ಸಾಲಿನಲ್ಲಿ ₹ 3.95 ಕೋಟಿ ವೆಚ್ಚದಲ್ಲಿ 283 ಕೊಠಡಿಗಳನ್ನು ರಿಪೇರಿ ಮಾಡಲಾಗಿದೆ. ಇದರ ಜೊತೆಗೆ 50 ನೂತನ ಕೊಠಡಿಗಳನ್ನೂ ನಿರ್ಮಿಸಲಾಗಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಪ್ರತೀ ವರ್ಷವೂ ಒಂದಿಷ್ಟು ಕೊಠಡಿಗಳನ್ನು ದುರಸ್ತಿ ಮಾಡಲಾಗುತ್ತದೆ. ಆದರೆ, ಹೊಸದಾಗಿ ಮತ್ತೊಂದಿಷ್ಟು ಕೊಠಡಿಗಳು ಹಾಳಾಗಿರುತ್ತವೆ. ತೀರಾ ಹಳೆಯ ಕೊಠಡಿಗಳನ್ನು ಕೆಡವಿ ಹೊಸ ಕಟ್ಟಡಗಳನ್ನು ನಿರ್ಮಿಸುವುದು ಸೂಕ್ತ. ಆದರೆ, ಅನುದಾನದ ಕೊರತೆಯಿಂದ ಇದು ಸಾಧ್ಯವಾಗುವುದಿಲ್ಲ. ದೊರೆಯುವ ಅಲ್ಪ ಅನುದಾನದಲ್ಲೇ ರಿಪೇರಿ ಕೆಲಸಗಳನ್ನು ಮಾಡಿಸಲಾಗುತ್ತದೆ’ ಎಂದು ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರು ಹೇಳುತ್ತಾರೆ.

ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮದ ಕೆಪಿಎಸ್ ಶಾಲೆಯಲ್ಲಿ ಎಲ್.ಕೆ.ಜಿ. ಯಿಂದ ಪಿಯುಸಿವರೆಗೆ ಒಟ್ಟು 1,680 ವಿದ್ಯಾರ್ಥಿಗಳಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರೂ, ಶಾಲೆಯು ಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ಶೌಚಾಲಯದ ಸಮಸ್ಯೆಯನ್ನೂ ವಿದ್ಯಾರ್ಥಿಗಳು ಅನುಭವಿಸುತ್ತಿದ್ದಾರೆ.

ತಾಲ್ಲೂಕಿನ ಹಳ್ಳಿಹಾಳ್, ಯಲವಟ್ಟಿ, ಎಳೆಹೊಳೆ, ಗುತ್ತೂರು, ಕೆ.ಎನ್.ಹಳ್ಳಿ, ಬೆಳ್ಳೂಡಿ, ಬಿಳಸನೂರು, ಕುಂಬಳೂರು, ಹರಿಹರ, ಮಲೇಬೆನ್ನೂರು, ಜಿ.ಬೇವಿನಹಳ್ಳಿ, ಜಿಗಳಿ, ಗುಳದಹಳ್ಳಿ, ಸತ್ಯನಾರಾಯಣಪುರ ಕ್ಯಾಂಪ್, ಅಮರಾವತಿ, ಕೊಂಡಜ್ಜಿ, ಸಾರಥಿ, ದೀಟೂರು, ಹಾಲಿವಾಣ, ಷಂಶೀಪುರ ಸೇರಿದಂತೆ 40ಕ್ಕೂ ಹೆಚ್ಚು ಗ್ರಾಮಗಳಲ್ಲಿನ ಶಾಲಾ ಕೊಠಡಿಗಳ ದುರಸ್ತಿಗೆ ಶಿಕ್ಷಕರು ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನಲ್ಲಿ 50ಕ್ಕೂ ಹೆಚ್ಚು ಶಾಲೆಗಳ ಕೊಠಡಿಗಳು ದುರಸ್ತಿಗಾಗಿ ಕಾದಿವೆ. ಅವಳಿ ತಾಲ್ಲೂಕಿನಲ್ಲಿ 20 ಕೊಠಡಿಗಳ ಕೊರತೆಯೂ ಇದೆ.

‘ಕೊಠಡಿಗಳು ಕೊರತೆ ಇರುವ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಬೋಧನೆ ಮಾಡುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ’ ಎಂದು ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎಂ. ತಿಪ್ಪೇಶಪ್ಪ ತಿಳಿಸಿದರು.

‘ಪಟ್ಟಣ ಸಮೀಪದ ದೇವನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶತಮಾನ ಕಂಡಿದೆ. ಈ ಶಾಲೆಯಲ್ಲಿ ಓದಿದವರು ಶಾಸಕರಾಗಿದ್ದಾರೆ. ಹಲವರು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದು, ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅಲ್ಪಸ್ವಲ್ಪ ಪ್ರಮಾಣದ ದುರಸ್ತಿ ಬಿಟ್ಟರೆ, ಇದುವರೆಗೂ ಶಾಲೆಯನ್ನು ಸಂಪೂರ್ಣವಾಗಿ ದುರಸ್ತಿಪಡಿಸುವ ಕೆಲಸವಾಗಿಲ್ಲ. ಈ ಶಾಲೆಯ ಚಾವಣಿ, ಕಿಟಕಿ, ಬಾಗಿಲುಗಳು ಸಂಪೂರ್ಣ ಕಿತ್ತುಹೋಗಿವೆ. ಹಳೆ ಕಟ್ಟಡವನ್ನು ತೆರವುಗೊಳಿಸಿ, ಹೊಸ ಕಟ್ಟಡ ಕಟ್ಟಿಸುವ ಕೆಲಸವಾಗಬೇಕು’ ಎನ್ನುತ್ತಾರೆ ದೊಡ್ಡಕೇರಿಯ ಆಂಜನೇಯ.

‘ನ್ಯಾಮತಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳ ಕೆಲ ಕಟ್ಟಡಗಳು ದುರಸ್ತಿಗೆ ಬಂದಿವೆ. ಅವುಗಳನ್ನು ದುರಸ್ತಿ ಪಡಿಸುವ ಬಗ್ಗೆ ಈಗಾಗಲೇ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಶಿಥಿಲಾವಸ್ಥೆ ತಲುಪಿದ್ದ ಕೊಠಡಿಗಳನ್ನು ತೆರವುಗೊಳಿಸಿ ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಕೊಠಡಿಗಳ ದುರಸ್ತಿಗೆ ಸರ್ಕಾರ ಹಾಗೂ ಶಾಸಕರಿಗೆ ಮನವಿ ಮಾಡಿದ್ದು, ಅನುದಾನದ ಲಭ್ಯತೆ ಆಧರಿಸಿ ದುರಸ್ತಿಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ. ನಿಂಗಪ್ಪ ತಿಳಿಸಿದರು.

ಪೂರಕ ಮಾಹಿತಿ: ಡಿ.ಎಂ. ಹಾಲಾರಾಧ್ಯ, ಡಿ. ಶ್ರೀನಿವಾಸ್, ಇನಾಯತ್ ಉಲ್ಲಾ ಟಿ., ಎನ್.ಕೆ. ಆಂಜನೇಯ, ಎಚ್.ವಿ. ನಟರಾಜ್, ಮಂಜುನಾಥ ಎಸ್.ಎಂ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-43-2043081827

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.