ಮಲೇಬೆನ್ನೂರು: ಸಮೀಪದ ಕುಂಬಳೂರು ಗ್ರಾಮದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಹನುಮಂತ ದೇವಸ್ಥಾನದ ಅರ್ಚಕರನ್ನು ಬದಲಿಸುವಂತೆ ಗುರುವಾರ ಗ್ರಾಮಸ್ಥರು ಪಟ್ಟು ಹಿಡಿದರು. ದೇವಾಲಯದ ಆಡಳಿತಾಧಿಕಾರಿ ಹಾಗೂ ಅಧಿಕಾರಿಗಳ ತಂಡ ತಾತ್ಕಾಲಿಕವಾಗಿ ಬೇರೊಬ್ಬ ಅರ್ಚಕರನ್ನು ನೇಮಿಸಿ, ಈ ಬಗ್ಗೆ ತಹಶೀಲ್ದಾರ್ಗೆ ಮಾಹಿತಿ ರವಾನಿಸುವುದಾಗಿ ತಿಳಿಸಿದರು.

ಅರ್ಚಕರು ಸಮರ್ಪಕವಾಗಿ ಪೂಜೆ ಮಾಡುತ್ತಿಲ್ಲ. ಜೊತೆಗೆ ಭಕ್ತರಿಂದ ಪೂಜೆಗೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಾರೆ. ಅಷ್ಟೇ ಅಲ್ಲದೆ ರಥೋತ್ಸವದ ವೇಳೆ ಆಹ್ವಾನ ಪತ್ರಿಕೆಯಲ್ಲಿ ತಪ್ಪು ಮಾಹಿತಿ ಪ್ರಕಟಿಸಿ ಹಂಚಿದ್ದರು ಎಂದು ಗ್ರಾಮಸ್ಥರು ಆರೋಪಿಸಿ, ಹೊಸ ಅರ್ಚಕರ ನಿಯೋಜನೆಗೆ ಆಗ್ರಹಿಸಿ ತಹಶೀಲ್ದಾರ್ ಅವರಿಗೆ ಈ ಹಿಂದೆ ಲಿಖಿತ ದೂರು ಸಲ್ಲಿಸಿದ್ದರು.

ದೂರಿನ ಮೇರೆಗೆ ನಾಡಕಚೇರಿ ಉಪತಹಶೀಲ್ದಾರ್ ಆರ್. ರವಿ, ರಾಜಸ್ವ ನಿರೀಕ್ಷಕ ಆನಂದ್, ಆಡಳಿತಾಧಿಕಾರಿ ಶ್ರೀಧರ್ ಆಗಮಿಸಿ, ದೂರಿನ ಬಗ್ಗೆ ವಿಚಾರಣೆ ನಡೆಸುವಾಗ ಅರ್ಚಕರಾದ ಸಂಜಯ್, ರಾಜೀವ್ ಹಾಗೂ ಗ್ರಾಮಸ್ಥರ ನಡುವೆ ಭಾರಿ ವಾಗ್ವಾದ ನಡೆದಿದ್ದು, ಕೈ–ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.

ವಿಷಯ ತಿಳಿಯುತ್ತಿದ್ದಂತೆ ಪಿಎಸ್ಐ ಹಾರೂನ್ ಅಖ್ತರ್ ಸ್ಥಳಕ್ಕೆ ಬಂದು ದೇವಾಲಯದ ಆವರಣದಲ್ಲಿ ಶಾಂತಿ ಸಾಮರಸ್ಯ ಕಾಪಾಡದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಬಳಿಕ ದೇವಾಲಯದ ಆಡಳಿತಾಧಿಕಾರಿ ಹಾಗೂ ಅಧಿಕಾರಿಗಳ ತಂಡ ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ತಾತ್ಕಾಲಿಕವಾಗಿ ಸೀತಾರಾಂ ಎಂಬುವವರನ್ನು ನೂತನ ಅರ್ಚಕರಾಗಿ ನಿಯೋಜಿಸಿದ್ದಾಗಿ ತಿಳಿಸಿದರು.

ಗ್ರಾಮಸ್ಥರಾದ ಆರ್.ಎಚ್, ಬಸವರಾಜಪ್ಪ, ಕಲ್ಲೇಶ್, ಲೋಕೇಶ್, ರಮೇಶ್, ಎ.ಕೆ. ಆಂಜನೇಯ, ರೇವಣಸಿದ್ದಪ್ಪ, ಗಿರೀಶ್, ಲಿಂಗರಾಜ್, ಕುಬೇರಪ್ಪ, ಕರಡೇರ ಸೋಮಣ್ಣ, ತೀರ್ಥಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-43-837789962

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.