ದಾವಣಗೆರೆ: ಗೃಹ ಬಳಕೆಯ ಎಲ್ಪಿಜಿ ಅನಿಲವನ್ನು ಅಕ್ರಮವಾಗಿ ಆಟೊಗಳಿಗೆ ತುಂಬುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, 6 ಸಿಲಿಂಡರ್ಗಳನ್ನು ಜಪ್ತಿ ಮಾಡಿದ್ದಾರೆ.

ನಗರದ ನಿವಾಸಿ ಮಲ್ಲೇಶಪ್ಪ ಬಂಧಿತ ಆರೋಪಿ. ಖಾಲಿ ಶೆಡ್ನಲ್ಲಿ ಆರೋಪಿಯು ಗೃಹ ಬಳಕೆಯ ಸಿಲಿಂಡರ್ ಮೂಲಕ ಆಟೊಗಳಿಗೆ ಎಲ್ಪಿಜಿ ಗ್ಯಾಸ್ ತುಂಬುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಆರ್.ಎಂ.ಸಿ ಯಾರ್ಡ್ ಪೊಲೀಸರು ಮತ್ತು ಆಹಾರ ಇಲಾಖೆಯ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.

ಗುಜರಿ ಕೆಲಸ ಮಾಡುತ್ತಿದ್ದ ಮಲ್ಲೇಶಪ್ಪ ಕಾಳಸಂತೆಯಲ್ಲಿ ಸಿಲಿಂಡರ್ ತಂದು ಹೆಚ್ಚಿನ ಹಣಕ್ಕೆ ಆಟೊಗಳಿಗೆ ತುಂಬುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

2 ಫಿಲ್ಲಿಂಗ್ ಮಿಷಿನ್, 2 ವೇಯಿಂಗ್ ಮಿಷಿನ್ಗಳನ್ನು ವಶಕ್ಕೆ ಪಡೆದಿದ್ದಾರೆ. ಆಹಾರ ನಿರೀಕ್ಷಕ ಮಂಜುನಾಥ್, ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯ ಪಿಎಸ್ಐಗಳಾದ ನಿರ್ಮಲಾ, ರಮೇಶ್, ಸಿಬ್ಬಂದಿ ಮಂಜುನಾಥ್, ಸಯ್ಯದ್ ಅಲಿ, ಮಂಜುನಾಥ್ ಪ್ರಸಾದ್ ಕಾರ್ಯಾಚರಣೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.