ದಾವಣಗೆರೆ: ದಂಪತಿ ಸೇರಿದಂತೆ ಜೈನ ಸಮುದಾಯದ ನಾಲ್ವರು ಬುಧವಾರ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ಆಚಾರ್ಯ ಅಭಯ್ ಶೇಖರ್ ಸುರೀಶ್ವರ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಸನ್ಯಾಸ ಜೀವನಕ್ಕೆ ಪದಾರ್ಪಣೆ ಮಾಡಿದರು.

ಇಲ್ಲಿನ ಲಲಿತ್ ಗಾರ್ಮೆಂಟ್ಸ್ ಮಾಲೀಕರಲ್ಲಿ ಒಬ್ಬರಾದ ಭರತ್ ಜೈನ್ (52), ಇವರ ಪತ್ನಿ ಆರತಿ (50), ಎಂಬಿಎ ಪದವೀಧರೆ ಕ್ರುನಾಲಿ ಜೈನ್ (30) ಹಾಗೂ ಬಿಕಾಂ ಪದವೀಧರೆ ದೀಕ್ಷಿತಾ (25) ಸನ್ಯಾಸ ದೀಕ್ಷೆ ಸ್ವೀಕರಿಸಿದರು. ಭರತ್ ಜೈನ್ ಹಾಗೂ ಆರತಿ ದಂಪತಿಯ ಇಬ್ಬರು ಪುತ್ರರು ಮೂರು ವರ್ಷಗಳ ಹಿಂದೆ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು. ಪುತ್ರರ ಮಾರ್ಗವನ್ನು ದಂಪತಿ ಅನುಸರಿಸಿದರು.

ನಗರದ ಅರುಣಾ ಟಾಕೀಸ್ ಮುಂಭಾಗದ ಹೊಳೆಹೊನ್ನೂರು ತೋಟದ ಆವರಣದಲ್ಲಿ ಸನ್ಯಾಸ ದೀಕ್ಷೆಯ ವಿಧಿವಿಧಾನಗಳು ನಡೆದವು. ನಾಲ್ವರು ಶುದ್ಧ ಬಟ್ಟೆಯಲ್ಲಿ ತೀರ್ಥಂಕರರ ಅಂತಿಮ ಪೂಜೆಯನ್ನು ನೆರವೇರಿಸಿದರು. ತೀರ್ಥಂಕರರ ಮೂರ್ತಿಗಳ ಮೇಲೆ ಅಕ್ಷತೆಗಳನ್ನು ಹಾಕಿ ಪೂರ್ವಾಶ್ರಮದ ಜೀವನಕ್ಕೆ ವಿದಾಯ ಹೇಳಿದರು.

ದೀಕ್ಷಾ ವಿಧಿವಿಧಾನಗಳು ಜೈನ ಧರ್ಮದ ಪ್ರಕಾರ ನೆರವೇರಿದವು. ಅಭಯ್ ಶೇಖರ್ ಸುರೀಶ್ವರ ಮಹಾರಾಜ್ ಅವರು ನಾಲ್ವರಿಗೂ ಪವಿತ್ರ ‘ರಜೋಹರನ್’ ನೀಡಿದರು. ‘ರಜೋಹರನ್’ ಕೈಗೆ ಬರುತ್ತಿದ್ದಂತೆ ಉಲ್ಲಾಸಭರಿತರಾಗಿ ತೀರ್ಥಂಕರರ ಪ್ರತಿಮೆಯ ಮುಂದೆ ಕುಣಿದಾಡಿದರು.

ಅಂತಿಮ ಸ್ನಾನ ಪೂರೈಸಿ ಕೇಶ ಮುಂಡನ ಮಾಡಿಕೊಂಡು ಶ್ವೇತ ವಸ್ತ್ರಧಾರಿಗಳಾದರು. ಸಾಧು ಜೀವನಕ್ಕೆ ಬೇಕಾಗಿರುವ ಪಾತ್ರೆ, ದಂಡ ಹಾಗೂ ಆಸನವನ್ನು ನೀಡಲಾಯಿತು. ದೀಕ್ಷೆಯ ಬಳಿಕ ಭರತ್ ಜೈನ್ ಅವರು ಭವೋದ್ವೇಗ್ ಶೇಖರ್ ವಿಜಯ್ ಮಹಾರಾಜ, ಆರತಿ ಅವರು ಅರಹಂಧ್ಯಾನ್ ಪ್ರಭಾ, ಕ್ರುನಾಲಿ ಅವರು ಕ್ಷಾಮಾನಂದಿ ವರ್ಧನ ಹಾಗೂ ದೀಕ್ಷಿತಾ ಅವರು ದಯ ಸಿಂಧು ಪ್ರಭಾ ಎಂಬುದಾಗಿ ನಾಮಕರಣಗೊಂಡರು.

‘ಸನ್ಯಾಸ ದೀಕ್ಷೆ ಬಳಿಕ ಸ್ನಾನ ಮಾಡುವುದಿಲ್ಲ. ಇದರಿಂದ ತೀರ್ಥಂಕರರ ಪೂಜೆ ಮಾಡುವಂತಿಲ್ಲ. ಹೀಗಾಗಿ, ನಾಲ್ವರು ತಮ್ಮ ಅಂತಿಮ ಪೂಜೆಯನ್ನು ನೆರವೇರಿಸಿದರು. ಚೌಕಿಪೇಟೆಯಲ್ಲಿರುವ ಸುಪಾರ್ಶ್ವನಾಥ ಜೈನ ದೇವಸ್ಥಾನದಲ್ಲಿ ಧ್ಯಾನಕ್ಕೆ ಕುಳಿತ ಅವರು ಗುರುವಾರ ನಗರಕ್ಕೆ ವಿದಾಯ ಹೇಳಲಿದ್ದಾರೆ. ನಗರದಿಂದ ಈವರೆಗೂ 68 ಅನುಯಾಯಿಗಳು ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ’ ಎಂದು ಜೈನ ಸಮುದಾಯದ ಮುಖಂಡ ಗೌತಮ್ ಜೈನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.