ದಾವಣಗೆರೆ: ನಗರದ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎರಡು ದಿನಗಳಲ್ಲಿ ರೋಬೋಟಿಕ್ ಹಾಗೂ ಕೃತಕ ಮಂಡಿ ಕೀಲು ಬದಲಾವಣೆಯ 10 ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.

ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ರವಿಕುಮಾರ್ ಟಿ.ಜಿ. ಮಾರ್ಗದರ್ಶನದಲ್ಲಿ ಈ ಚಿಕಿತ್ಸೆಗಳು ನಡೆದಿವೆ. ಮಂಡಿಕೀಲು ಬದಲಾವಣೆ ಶಸ್ತ್ರಚಿಕಿತ್ಸಕರಾದ ಡಾ.ಲಿಂಗರಾಜು ಎ.ಪಿ. ಮತ್ತು ಡಾ.ಧ್ರುವ ವಿ. ಹಾಗೂ ಅರಿವಳಿಕೆ ತಜ್ಞ ಡಾ.ದೀಪಕ್ ಆರ್.ಎಂ. ನೇತೃತ್ವದ ತಂಡದ ವೈದ್ಯಕೀಯ ನೈಪುಣ್ಯತೆ ಚಿಕಿತ್ಸೆಯ ಯಶಸ್ಸಿಗೆ ಕಾರಣವಾಗಿದೆ.

‘ರೋಬೋಟಿಕ್ ಮಂಡಿ ಕೀಲು ಬದಲಾವಣೆ ಶಸ್ತ್ರಚಿಕಿತ್ಸೆಯಂತಹ ಆಧುನಿಕ ತಂತ್ರಜ್ಞಾನವನ್ನು ಮಾನವೀಯ ಆರೈಕೆಯೊಂದಿಗೆ ನೀಡಲಾಗುತ್ತಿದೆ. ಇದು ಆಸ್ಪತ್ರೆಯ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಈ ಮೂಲಕ ಅತ್ಯಾಧುನಿಕ ಚಿಕಿತ್ಸೆಗಳು ಕೂಡ ಸ್ಥಳೀಯರಿಗೆ ಸುಲಭವಾಗಿ ಕೈಗೆಟಕುತ್ತಿವೆ’ ಎಂದು ಡಾ.ರವಿಕುಮಾರ್ ಟಿ.ಜಿ. ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-43-324913307

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.