ದಾವಣಗೆರೆ: ಪರಸ್ಪರ ಗುರಾಯಿಸಿದರು ಎಂಬ ಕಾರಣಕ್ಕೆ ಶುರುವಾದ ಜಗಳದಲ್ಲಿ ಯುವಕನೊಬ್ಬನಿಗೆ ಚಾಕು ಇರಿಯಲಾಗಿದೆ. ಇರಿತಕ್ಕೆ ಒಳಗಾದ ಗಾಂಧಿನಗರದ ನಿವಾಸಿ ಮನೋಜ್ಕುಮಾರ್ (22) ಸ್ಥಿತಿ ಗಂಭೀರವಾಗಿದ್ದು, ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಇಲ್ಲಿನ ವಿಜಯ ನಗರ ಬಡಾವಣೆಯಲ್ಲಿ ಶನಿವಾರ ರಾತ್ರಿ ಜಗಳ ನಡೆದಿದೆ.

ಆಗಿದ್ದೇನು: ಮನೋಜ್ಕುಮಾರ್ ಸ್ನೇಹಿತರು ಜನ್ಮದಿನದ ಪಾರ್ಟಿಗೆಂದು ವಿಜಯನಗರ ಬಡಾವಣೆಗೆ ತೆರಳಿದ್ದರು. ಈ ವೇಳೆ ಮನೋಜ್ಕುಮಾರ್ ಸ್ನೇಹಿತ ಹಾಗೂ ವಿಜಯ ನಗರ ಬಡಾವಣೆಯ ನಿವಾಸಿ ರಾಹುಲ್ ನಡುವೆ ‘ಗುರಾಯಿಸಿದ’ ಎಂಬ ಕಾರಣಕ್ಕೆ ಜಗಳ ನಡೆದಿದೆ. ಸ್ಥಳೀಯರು ಬಿಡಿಸಿ ಇಬ್ಬರನ್ನೂ ಮನೆಗೆ ಕಳಿಸಿದ್ದಾರೆ.

ಬಳಿಕ ವಿಷಯ ತಿಳಿದ ಮನೋಜ್ ಹಾಗೂ ಸ್ನೇಹಿತರು ರಾಹುಲ್ ಮನೆ ಬಳಿ ತೆರಳಿ ಗಲಾಟೆ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ರಾಹುಲ್ನ ಚಿಕ್ಕಪ್ಪ ಹಾಗೂ ಇನ್ನಿತರರು ಮನೋಜ್ ಮೇಲೆ ಹಲ್ಲೆ ನಡೆಸಿ ಚಾಕು ಇರಿದಿದ್ದಾರೆ. ಬಳಿಕ ಮನೋಜ್ ಕಡೆಯವರೂ ರಾಹುಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಎರಡೂ ಕಡೆಯವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ವಿಷಯ ತಿಳಿದ ಗಾಂಧಿ ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಗಲಾಟೆ ಪ್ರಕರಣದಲ್ಲಿ ರಾಹುಲ್ ಚಿಕ್ಕಪ್ಪನನ್ನು ಬಂಧಿಸಲಾಗಿದೆ. ಇತರೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಎರಡೂ ಕಡೆಯವರು ದೂರು ನೀಡಿದ್ದು, ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-43-1629997008

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.