ಮಲೇಬೆನ್ನೂರು: ‘ಸರ್ಕಾರಿ ಸೇವೆ ಮಾಡುವಾಗ ಕಚೇರಿಗೆ ವಿವಿಧ ಬಗೆಯ ಕೆಲಸಕ್ಕಾಗಿ ಬರುವ ಸಾರ್ವಜನಿಕರನ್ನು ಸತಾಯಿಸಬೇಡಿ’ ಎಂದು ಸೋಮವಾರ ಇಲ್ಲಿನ ನಾಡಕಚೇರಿಯಿಂದ ಧರ್ಮಪುರಕ್ಕೆ ವರ್ಗಾವಣೆಯಾಗಿರುವ ಉಪತಹಶೀಲ್ದಾರ್ ಆರ್. ರವಿ ಸಲಹೆ ನೀಡಿದರು.

ನಾಡಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಟ್ಟಣದ ನಾಡ ಕಚೇರಿಯು ದಾವಣಗೆರೆ ಜಿಲ್ಲೆಯಲ್ಲಿ ಕಡತ ವಿಲೇವಾರಿಯಲ್ಲಿ ಪ್ರಥಮ ಸ್ಥಾನ ಪಡೆಯಲು ಸಿಬ್ಬಂದಿ ಸಹಕಾರ ಕಾರಣ. ವಿದ್ಯಾರ್ಥಿಗಳು, ರೈತರು, ವೃದ್ಧರು, ಮಹಿಳೆಯರು ಮುಖ್ಯವಾಗಿ ಪ್ರಮಾಣ ಪತ್ರ, ವಂಶವೃಕ್ಷ, ಪೌತಿ ಖಾತೆ, ಪಿಂಚಣಿ ಯೋಜನೆ, ಆದಾಯ ಪ್ರಮಾಣ ಪತ್ರಕ್ಕಾಗಿ ಬರುತ್ತಾರೆ. ಗ್ರಾಮ ಆಡಳಿತಾಧಿಕಾರಿ, ಕಂದಾಯ ನಿರೀಕ್ಷಕರು, ಗ್ರಾಮದ ಕಂದಾಯ ಕಾರ್ಯದರ್ಶಿಗಳು, ಗಣಕಯಂತ್ರ ವಿಭಾಗದವರು ಜವಾಬ್ದಾರಿಯುತವಾಗಿ ತಪ್ಪುಗಳಿಲ್ಲದಂತೆ ಕೆಲಸ ಮಾಡಿಕೊಡಿ’ ಎಂದರು.

ಪುರಸಭೆ ಸದಸ್ಯರಾದ ಭೋವಿ ಶಿವು, ಸಿದ್ದೇಶ್, ನಯಾಜ್, ಮಾಜಿ ಸದಸ್ಯ ಭಾನುವಳ್ಳಿ ಸುರೇಶ್, ಪೂಜಾರ್ ಗಂಗಾಧರ್, ಕೆ.ಜಿ. ಪರಮೇಶ್, ಗ್ರಾಮ ಸಹಾಯಕರು, ರೈತ ಸಂಘದ ಅಧ್ಯಕ್ಷ ಕೋಗಳಿ ಮಂಜು, ಹೋಬಳಿ ವ್ಯಾಪ್ತಿಯ ವಿವಿಧ ದೇವಾಲಯಗಳ ಮುಖ್ಯಸ್ಥರು, ಸುತ್ತಮುತ್ತಲ ಗ್ರಾಮಗಳ ರೈತರು ಹಾಗೂ ಕಚೇರಿ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-43-1237040189

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.