ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಸ್ವೆಹಳ್ಳಿ | ಮಳೆಗಾಲ.. ಮೊಗ್ಗಿನ ಅಣಬೆಯ ಸುಗ್ಗಿಯ ಕಾಲ...

Last Updated 27 ಜುಲೈ 2022, 2:14 IST
ಅಕ್ಷರ ಗಾತ್ರ

ಸಾಸ್ವೆಹಳ್ಳಿ: ಮಳೆಗಾಲ ಬಂತೆಂದರೆ ಅಣಬೆ ಪ್ರಿಯರಿಗೆ ಬಾಯಲ್ಲಿ ನೀರೂರುವುದು ಸಹಜ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಹೊಲ ಗದ್ದೆ, ತೋಟ, ಗುಡ್ಡ, ಬೆಟ್ಟದ ತಪ್ಪಲು ಸೇರಿದಂತೆ ಎಲ್ಲೆಂದರಲ್ಲಿ ಅಣಬೆಗಳು ಹುಟ್ಟಿಕೊಂಡಿವೆ. ಅದರಲ್ಲೂ ಬಲು ರುಚಿ ಇರುವ ಮೊಗ್ಗಿನ ಅಣಬೆಗಳ ಸುಗ್ಗಿ ಕಾಲವಿದು.

ಸಾಸ್ವೆಹಳ್ಳಿ ಸುತ್ತಲೂ ಕೆಲವು ವ್ಯಾಪಾರಗಳು ಇಂಥ ಅಣಬೆ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ. ಮುಂಜಾನೆ ಎದ್ದು ಅಣಬೆಗಳನ್ನು ಹುಡುಕಿಕೊಂಡು ಹೋಗುತ್ತಾರೆ. ‘ಈಗ ಅಣಬೆ ತುಂಬಾ ಅಪರೂಪವಾಗಿದೆ. ಹಿಂದೆಲ್ಲ ಮನೆಯ ಹಿತ್ತಲಲ್ಲಿ ಬೇಕಾದಷ್ಟು ಸಿಗುತ್ತಿತ್ತು’ ಎನ್ನುತ್ತಾರೆ ಕ್ಯಾಸಿನಕೆರೆ ಅಣಬೆ ಮಾರಾಟಗಾರ ಶೇಖರಪ್ಪ.

ಕೆಲವರು ಸೂರ್ಯ ಹುಟ್ಟುವ ಮುನ್ನವೇ ಎದ್ದು ಹೊಲದಿಂದ ಹೊಲಕ್ಕೆ ಅಲೆದಾಡಿ ಮೊಗ್ಗಿನ ಬೇರಿನ ಅಣಬೆಗಳನ್ನು ಕಿತ್ತು ತಂದು ಸಾರು, ಫ್ರೈ, ಡ್ರೈ, ಗ್ರೇವಿಗಳನ್ನು ತಯಾರಿಸಿ ಸವಿಯುತ್ತಿದ್ದಾರೆ. ಅಣಬೆ ಮಾಂಸಾಹಾರಿ
ಗಳಿಗೆ ಅಷ್ಟೇ ಅಲ್ಲದೇ ಸಸ್ಯಾಹಾರಿ
ಗಳಿಗೂ ಅಚ್ಚುಮೆಚ್ಚು. ಜುಲೈ ಆರಂಭದಿಂದ ಸಪ್ಟೆಂಬರ್ ತಿಂಗಳವರೆಗೂ ಅಣಬೆಗಳು ಸಿಗುತ್ತವೆ. ದಟ್ಟವಾದ ಬಿಸಿಲು ಬೀಳದ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಹುಟ್ಟುವ ಅಣಬೆಗಳಿಗೆ ಈ ಭಾಗದಲ್ಲಿ ಭಾರಿ ಬೇಡಿಕೆ ಇದೆ.

‘ಉದ್ಯೋಗ ಅರಸಿ ಬೆಂಗಳೂರು-ಮೈಸೂರು ನಗರ ಪಟ್ಟಣಗಳಿಗೆ ಹೋಗಿ ವಾಸವಾಗಿರುವವರೂ ತಮ್ಮ ಮಕ್ಕಳಿಗೆಂದು 100 ಮೊಗ್ಗಿನ ಅಣಬೆಗಳ ಒಂದು ಕಟ್ಟಿನ ಪೊಟ್ಟಣಕ್ಕೆ ₹ 600 ರಿಂದ ₹ 800 ನೀಡಿ ಖರೀದಿಸುತ್ತಾರೆ’ ಎನ್ನುತ್ತಾರೆ ಇನ್ನೊಬ್ಬ ಅಣಬೆ ಮಾರಾಟಗಾರ ಮಲ್ಪ.

‘ರಾಸಾಯನಿಕ ಕೃಷಿ ಪದ್ಧತಿಯಿಂದಾಗಿ ಅಣಬೆಗಳು ಈಗ ಅಪರೂಪವಾಗುತ್ತಿವೆ. ಚಿಗುರಿದ ಸೀಗೆ ಸೊಪ್ಪು, ಗುಡುಗು ಮಳೆಗೆ ಪುಟಿದೇಳುವ ಅಣಬೆ, ಎಳೆಬಿದಿರಿನ ಕಳಲೆ, ಬೇರ ಹಲಸು, ಅಮಟೆಕಾಯಿ ಇವೆಲ್ಲ ಮಳೆಗಾಲದಲ್ಲಿ ಮಾತ್ರ ಸಿಗುವ ಅಪರೂಪದ ತರಕಾರಿಗಳು. ವರ್ಷಕ್ಕೆ ಒಮ್ಮೆ ಅಕ್ಕಿ ರೊಟ್ಟಿ– ಕಳಲೆ ಪಲ್ಯ, ರಾಗಿಮುದ್ದೆ– ಸೀಗೆ ಸೊಪ್ಪಿನ ಸಾರು, ಅಮಟೆ ಉಪ್ಪಿನಕಾಯಿ ಅಡಿಗೆ ಮಾಡಿ ಉಂಡರೆ ರೋಗರುಜಿನ ದೂರವಾಗುತ್ತವೆ’ ಎನ್ನುತ್ತಾರೆ ಹುಣಸಘಟ್ಟ ಗ್ರಾಮದ ಗೃಹಿಣಿ ಗೌರಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT