ದಾವಣಗೆರೆ: ಹರಿಹರ ತಾಲ್ಲೂಕಿನ ಹಳೆಬಾತಿ ಗ್ರಾಮ ಸಮೀಪ ರಾಷ್ಟ್ರೀಯ ಹೆದ್ದಾರಿ– 48ಕ್ಕೆ ನಿರ್ಮಿಸಿದ ಕೆಳಸೇತುವೆ ಹಾಗೂ ಸೇವಾ (ಸರ್ವೀಸ್) ರಸ್ತೆ ಕೆರೆಯಂತಾಗಿದೆ. ಮೂರ್ನಾಲ್ಕು ಅಡಿಗಳಷ್ಟು ನಿಲ್ಲುವ ನೀರಿನಲ್ಲಿಯೇ ವಾಹನ ಸಂಚರಿಸಬೇಕಾಗಿರುವ ಸಂಕಷ್ಟ ಎದುರಾಗಿದೆ.

ಹೆದ್ದಾರಿ ಸಮೀಪದ ಪುಷ್ಪಾ ಮಹಾಲಿಂಗಪ್ಪ ವಸತಿಯುತ ಶಿಕ್ಷಣ ಸಂಸ್ಥೆ ಹಾಗೂ ಹಳೆಬಾತಿ ನಡುವಿನ ಈ ಕೆಳಸೇತುವೆ ನಿರ್ಮಾಣವಾಗಿ ಹಲವು ವರ್ಷಗಳೇ ಕಳೆದಿವೆ. ಶಿವನಳ್ಳಿ, ಬನ್ನಿಕೋಡು ಗ್ರಾಮಗಳೊಂದಿಗೆ ಹಳೆಬಾತಿಯನ್ನು ಸಂಪರ್ಕಿಸುತ್ತದೆ. ಅವೈಜ್ಞಾನಿಕವಾಗಿರುವ ಈ ಕೆಳ ಸೇತುವೆಯಲ್ಲಿ ಚಿಕ್ಕ ಮಳೆಗೂ ನೀರು ನಿಲುಗಡೆ ಆಗುತ್ತಿದ್ದು, ಸರ್ವಿಸ್ ರಸ್ತೆಗೂ ಚಾಚುತ್ತಿದೆ. ಭದ್ರಾ ನಾಲೆಯ ನೀರು ಸೇರಿ ವರ್ಷವಿಡೀ ಜಲಾವೃತವಾಗುತ್ತಿದೆ.

ಪುಣೆ–ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 48ನ್ನು 2002–03ರಲ್ಲಿ ಚತುಷ್ಪಥವಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. 2018ರಲ್ಲಿ ಇದನ್ನು ಷಟ್ಪಥಕ್ಕೆ ಪರಿವರ್ತಿಸಲಾಗಿದ್ದರೂ ಹರಿಹರ–ದಾವಣಗೆರೆಯ ನಡುವಿನ ಈ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಎರಡು ನಗರಗಳ ನಡುವಿನ 23 ಕಿ.ಮೀ.ನಲ್ಲಿ ಬಹುದಿನಗಳಿಂದ ಬಾಕಿ ಇದ್ದ 13 ಕಿ.ಮೀ ಸರ್ವಿಸ್ ರಸ್ತೆ ಇತ್ತೀಚೆಗೆ ಪೂರ್ಣಗೊಂಡಿದೆ. ಆದರೂ, ಕೆಳಸೇತುವೆ ಹಾಗೂ ಸರ್ವಿಸ್ ರಸ್ತೆಯಲ್ಲಿ ನಿಲುಗಡೆಯಾಗುವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಸುರಕ್ಷತೆಯ ದೃಷ್ಟಿಯಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಲಘು ವಾಹನ ಚಾಲಕರು ಹೆದ್ದಾರಿಗಿಂತ ಸರ್ವಿಸ್ ರಸ್ತೆಯ ಸಂಚಾರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಹಳೆಬಾತಿ ಸಮೀಪದ ಸರ್ವಿಸ್ ರಸ್ತೆಯಲ್ಲಿ ಎದುರಾಗುವ ನೀರು ಹಲವರನ್ನು ಧೃತಿಗೆಡಿಸಿದೆ. ರಾತ್ರಿ ವೇಳೆ ಇಲ್ಲಿ ಸಂಚರಿಸುವುದು ಅಸುರಕ್ಷಿತ ಎಂಬ ಭಾವನೆ ಮೂಡಿಸಿದೆ.

ಹಳೆಬಾತಿ ಗ್ರಾಮದ ರೈತರ ಜಮೀನುಗಳು ಹೆದ್ದಾರಿಯ ಎರಡು ಬದಿಯಲ್ಲಿವೆ. ಗ್ರಾಮದಿಂದ ಜಮೀನಿಗೆ ಸಾಗಲು ಕೆಳಸೇತುವೆ ಬಳಸಬೇಕು. ಚಿಕ್ಕ ಮಳೆಗೂ ಈ ಕೆಳಸೇತುವೆ ಜಲಾವೃತಗೊಳ್ಳುವುದರಿಂದ ರೈತರಿಗೆ ತೊಂದರೆಯಾಗಿದೆ. ಬಹುದೂರದ ಮತ್ತೊಂದು ಕೆಳಸೇತುವೆಯನ್ನು ಬಳಸಿ ಜಮೀನುಗಳಿಗೆ ತೆರಳಬೇಕಾಗಿದೆ.

ಸರ್ವಿಸ್ ರಸ್ತೆ ಬದಿಯಲ್ಲ ನಿರ್ಮಿಸಿದ ಮಳೆ ನೀರು ಚರಂಡಿ ಕೂಡ ಅವೈಜ್ಞಾನಿಕವಾಗಿದೆ. ಭದ್ರಾ ನಾಲೆಯಿಂದ ಜಮೀನುಗಳಿಗೆ ಬರುವ ನೀರು ಚರಂಡಿ ಮೂಲಕ ಸಾಗುವ ಬದಲು ಸರ್ವಿಸ್ ರಸ್ತೆಯಲ್ಲಿ ನಿಲುಗಡೆ ಆಗುತ್ತಿದೆ. ಚರಂಡಿ ದುರಸ್ತಿ ಹಾಗೂ ನೀರು ನಿಲುಗಡೆಯ ಸಮಸ್ಯೆಯ ಕುರಿತು ಗ್ರಾಮಸ್ಥರು ಹಲವು ಬಾರಿ ಗಮನ ಸೆಳೆದರೂ ಪ್ರಯೋಜನವಾಗಿಲ್ಲ.

ಕುಂದುವಾಡ ಕೆಳಸೇತುವೆ ವಿಸ್ತರಣೆ

ದಾವಣಗೆರೆ ಹೊರವಲಯದ ಕುಂದುವಾಡ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಕೆಳಸೇತುವೆ ನಿರ್ಮಿಸುವ ವಿಚಾರದಲ್ಲಿ ಗ್ರಾಮಸ್ಥರು ಮುಂದಿಟ್ಟ ಬೇಡಿಕೆಗೆ ಹೆದ್ದಾರಿ ಪ್ರಾಧಿಕಾರ ಕೊನೆಗೂ ಸ್ಪಂದಿಸಿದೆ. 18 ಮೀಟರ್ ಅಗಲ ಹಾಗೂ 5 ಮೀಟರ್ ಎತ್ತರದ ಕೆಳಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದೆ.

‘ಹಲವು ಸುತ್ತಿನ ಚರ್ಚೆಯ ಬಳಿಕ 18 ಮೀಟರ್ ಅಗಲ ಹಾಗೂ 5 ಮೀಟರ್ ಎತ್ತರದ ಕೆಳಸೇತುವೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಿಕೊಂಡಿದೆ. ಈ ಸಂಬಂಧದ ಪ್ರಸ್ತಾವಕ್ಕೆ ಹೆದ್ದಾರಿ ಸಚಿವಾಲಯದ ಅನುಮೋದನೆ ಮಾತ್ರ ಬಾಕಿ ಇದೆ. ಕಾಮಗಾರಿ ಶೀಘ್ರ ಶುರುವಾಗಲಿದ್ದು, ಟ್ರ್ಯಾಕ್ಟರ್, ಬಸ್ ಸೇರಿದಂತೆ ದೊಡ್ಡ ವಾಹನಗಳ ಸಂಚಾರಕ್ಕೂ ತೊಂದರೆ ಆಗದು’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.

ಹೆದ್ದಾರಿಯ ಎರಡೂ ಬದಿಯಲ್ಲಿ ಜಮೀನುಗಳಿವೆ. ರೈತರು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಲು ಕೆಳಸೇತುವೆ ಬಳಸಲು ಆಗುತ್ತಿಲ್ಲ. ಪ್ರತಿನಿತ್ಯ 2 ಕಿ.ಮೀ ಹೆಚ್ಚುವರಿ ಕ್ರಮಿಸುತ್ತಿದ್ದೇವೆ
ಷಣ್ಮುಖ, ರೈತ, ಹಳೆಬಾತಿ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-43-1396264289

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.