ದಾವಣಗೆರೆ: ನಿರಂತರ ಮಳೆಯಿಂದಾಗಿ ಜಿಲ್ಲೆಯ ಭತ್ತ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಇಲ್ಲಿನ ಎಪಿಎಂಸಿಯಲ್ಲಿ ಶನಿವಾರ ಕ್ವಿಂಟಲ್ ಭತ್ತಕ್ಕೆ ಗರಿಷ್ಠ ₹ 2,901 ದರ ಇದ್ದು, ಸರಾಸರಿ ₹ 2,600 ಇದೆ. ಉತ್ತಮ ದರವಿದ್ದರೂ, ಮಳೆಯಿಂದಾಗಿ ಭತ್ತ ಕಟಾವು ಸಾಧ್ಯವಾಗುತ್ತಿಲ್ಲ.

ಮೇ ಆರಂಭದಲ್ಲಿ ಭತ್ತಕ್ಕೆ ಗರಿಷ್ಠ ₹ 2,400 ದರ ಇತ್ತು. ಕೆಲ ದಿನಗಳಿಂದ ದರ ಏರುಮುಖದಲ್ಲಿದೆ. ಮಳೆ ನಿಲ್ಲದಿದ್ದರೆ ದರ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಆದರೆ, ಕಟಾವಿಗೆ ವರುಣ ಅಡ್ಡಿಯಾಗಿರುವುದರಿಂದ ಎಪಿಎಂಸಿಗೆ ಬರುವ ಭತ್ತದ ಆವಕ ಪ್ರಮಾಣವೂ ಕುಸಿದಿದೆ.

ಜಿಲ್ಲೆಯಲ್ಲಿ ಭದ್ರಾ ಬಲದಂಡೆ ಕಾಲುವೆ ನೀರು ನೆಚ್ಚಿಕೊಂಡು 54,895 ಹೆಕ್ಟೇರ್ ಪ್ರದೇಶದಲ್ಲಿ ಬೇಸಿಗೆ ಹಂಗಾಮಿನ ಭತ್ತ ಬೆಳೆಯಲಾಗಿದೆ. 3.43 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ನಿರೀಕ್ಷಿಸಲಾಗಿತ್ತು. ಸದ್ಯ ಶೇ 20ರಿಂದ 30ರಷ್ಟು ಮಾತ್ರ ಕಟಾವು ಆಗಿದೆ. ಮಳೆ ಆರ್ಭಟಕ್ಕೆ ಭತ್ತದ ಬೆಳೆ ಮಣ್ಣಿನ ಪಾಲಾಗುತ್ತಿದೆ.

ಎಪಿಎಂಸಿಗೆ ಶನಿವಾರ 3,500 ಕ್ವಿಂಟಲ್ ಭತ್ತ ಆವಕವಾಗಿದೆ. ಸಾಮಾನ್ಯವಾಗಿ ಬೇಸಿಗೆ ಭತ್ತ ಕೈಗೆ ಬಂದಾಗ ಆವಕದ ಪ್ರಮಾಣ 10,000 ಕ್ವಿಂಟಲ್ ಮೀರುತ್ತಿತ್ತು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

22ರಂದು ಗರಿಷ್ಠ ದರ ₹2,939, 21ರಂದು ₹ 2,965, 20ರಂದು ₹ 2,880 ಗರಿಷ್ಠ ದರ ಇತ್ತು. ಆರ್ಎನ್ಆರ್ ತಳಿಯ ಉತ್ತಮ ಗುಣಮಟ್ಟದ ಭತ್ತಕ್ಕೆ ಗರಿಷ್ಠ ₹ 2,600, ಶ್ರೀರಾಮ್ ತಳಿಯ ಭತ್ತಕ್ಕೆ ಗರಿಷ್ಠ ₹ 2,900 ದರ ದೊರೆಯುತ್ತಿದೆ. ಜಿಲ್ಲೆಯಲ್ಲಿ ಬಹುಪಾಲು ಆರ್ಎನ್ಆರ್ ತಳಿಯ ಭತ್ತ ಕೃಷಿ ಆಗಿದೆ. ನೇರವಾಗಿ ಖರೀದಿಸುವ ವ್ಯಾಪಾರಿಗಳು ಕ್ವಿಂಟಲ್ಗೆ ₹ 2,600– ₹ 2,700 ದರ ನೀಡುತ್ತಿದ್ದಾರೆ.

‘ಭತ್ತದ ಕಟಾವು ಆಗುತ್ತಿಲ್ಲ. ದಿನ ಬಿಟ್ಟು ದಿನ ಮಳೆ ಸುರಿಯುತ್ತಲೇ ಇದೆ. ಭತ್ತದ ಬೆಳೆ ಹಾಳಾಗುತ್ತಿದ್ದರೂ, ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇವೆ’ ಎನ್ನುತ್ತಾರೆ ಮಾಗಾನಹಳ್ಳಿಯ ರೈತ ಹನುಮಂತಪ್ಪ.

‘ಈ ಸಲ ಇಳುವರಿ ಚೆನ್ನಾಗಿದೆ. ಇನ್ನೊಂದು ವಾರ ಕಳೆದಿದ್ದರೆ ಕಟಾವು ಮುಗಿದು ಉತ್ತಮ ಆದಾಯ ಕಾಣುತ್ತಿದ್ದೆವು. ಈಗ ಖರ್ಚು ಮಾಡಿದ ಹಣ ವಾಪಸಾದರೂ ಸಾಕು ಎಂಬ ಸ್ಥಿತಿ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಭತ್ತದ ದರ ಕ್ವಿಂಟಲ್ಗೆ ₹ 2,000ದಿಂದ ₹ 2,050 ಇತ್ತು. ಈ ಸಲ ಉತ್ತಮ ದರವಿದ್ದರೂ, ಪ್ರಯೋಜನವಾಗುತ್ತಿಲ್ಲ’ ಎಂದು ಓಬಜ್ಜಿಹಳ್ಳಿಯ ರೈತ ರಾಘವೇಂದ್ರ ನಾಯ್ಕ ಬೇಸರ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-51-121967922

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.