ದಾವಣಗೆರೆ: ‘ಪಂಚಮಸಾಲಿ ಗುರುಪೀಠದ ಟ್ರಸ್ಟಿಗಳು ಹಾಗೂ ಅವರ ಹಿಂಬಾಲಕರು ಖಾಲಿ ಕುರ್ಚಿಗಳಿಗೆ ಲೆಕ್ಕ ಒಪ್ಪಿಸಿದ್ದಾರೆ. ಟ್ರಸ್ಟಿಗಳು ಸಮುದಾಯದವರನ್ನು ಕುಡುಕರು ಎಂಬಂತೆ ಬಿಂಬಿಸಿ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಕ್ಷಮೆ ಕೋರದಿದ್ದರೆ ಅವರು ಹೋಗುವ ಸಭೆ, ಸಮಾರಂಭಗಳಲ್ಲಿ ಅವರನ್ನು ಪ್ರಶ್ನಿಸುವಂತೆ ಸಮುದಾಯದವರಿಗೆ ಕರೆ ನೀಡುತ್ತೇವೆ’ ಎಂದು ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಹೇಳಿದರು.

‘ಟ್ರಸ್ಟಿಗಳು ಕಪ್ಪುಹಣವನ್ನು ಬಿಳಿ ಹಣವನ್ನಾಗಿ ಬದಲಿಸಿಕೊಳ್ಳಲು ಗುರುಪೀಠವನ್ನು ಬಳಸಿಕೊಂಡಿರುವ ಅನುಮಾನ ಇದೆ. ಸಹಿ ಫೋರ್ಜರಿ ಮಾಡಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ದಾಖಲೆ ಸಮೇತ ಆದಾಯ ತೆರಿಗೆ (ಐಟಿ), ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ದೂರು ನೀಡುತ್ತೇವೆ. ಮೇ 20ರ ವರೆಗೆ ಗಡುವು ನೀಡುತ್ತೇವೆ. ಕ್ಷಮೆ ಕೋರಿ ಸಮುದಾಯದವರ ಮುಂದೆ ತಲೆ ಬಾಗದಿದ್ದರೆ ಚಳವಳಿ ಪ್ರಾರಂಭಿಸುತ್ತೇವೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಮೊದಲ ಹಂತದಲ್ಲಿ ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳಲ್ಲಿ ಸಮಿತಿ ರಚಿಸಿ ಭಕ್ತರು ನೀಡಿದ ದೇಣಿಗೆ ಮೊತ್ತದ ವಿವರ ಸಂಗ್ರಹಿಸುತ್ತೇವೆ’ ಎಂದು ತಿಳಿಸಿದರು.

‘ಮಠದಲ್ಲಿ ಪ್ರತಿಭಾ ಪುರಸ್ಕಾರ ಸೇರಿ ಹಲವು ಕಾರ್ಯಕ್ರಮಗಳು ನಡೆಯಬೇಕಿದೆ. ಈ ಕಾರಣಕ್ಕೆ ಜಿಲ್ಲಾಡಳಿತ ನಿಷೇಧಾಜ್ಞೆಯನ್ನು ವಾಪಸ್ ಪಡೆಯಬೇಕು. ಸ್ವಾಮೀಜಿ ಸಮುದಾಯದಿಂದ ದೇಣಿಗೆ ಸಂಗ್ರಹಿಸಿದ್ದರೆ ಅವರೂ ಲೆಕ್ಕ ಒಪ್ಪಿಸಬೇಕು’ ಎಂದು ಹೇಳಿದರು.

ಮುಖಂಡರಾದ ಆನಂದ ಜರ್ಲಿ, ವೀರಾಪುರ ಬಸವರಾಜ, ಶಂಕರಗೌಡ ಬ್ಯಾಡಗಿ, ಸೋಮಣ್ಣ ಬೇವಿನಮರದ, ಸಿದ್ದಣ್ಣ ಚಿಕ್ಕಬಿದರಿ, ಬಾಬಣ್ಣ ಹಾಗೂ ಇನ್ನಿತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-43-242263

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.