ಪಾಂಡೋಮಟ್ಟಿ (ಚನ್ನಗಿರಿ): ‘ಜೀವನದಲ್ಲಿ ಪರಿವರ್ತನೆಗೆ ಒಂದು ಅವಕಾಶವಿರುತ್ತದೆ. ಅದನ್ನು ಅರ್ಥ ಮಾಡಿಕೊಂಡು ಛಲದಿಂದ ಸಾಧನೆ ಮಾಡಿದರೆ ಬದುಕು ಸಾರ್ಥಕವಾಗುತ್ತದೆ. ಶಿವಾನುಭವ ಹಾಗೂ ಲೋಕಾನುಭವ ಸಂಪಾದಿಸಿದರೆ ಜೀವನದಲ್ಲಿ ಯಶಸ್ಸು ಖಚಿತ’ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಈಚೆಗೆ ನಡೆದ 883 ನೇ ಮಾಸಿಕ ಶಿವಾನುಭವ ಹಾಗೂ ಶಿವ ನಾಗಮಯ್ಯ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಆತ್ಮಶುದ್ಧ ಇಲ್ಲದವರು ಕಾಯಕದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ದುಷ್ಟ ಯೋಚನೆಗಳಿಂದ ಹೊರಬರಲು ಶರಣರ ತತ್ವಗಳು ನೀತಿ ಪಾಠಗಳಾಗಿವೆ. ಮೊದಲು ನಮ್ಮ ಅಂತರಂಗದ ವ್ಯಕ್ತಿತ್ವವನ್ನು ಶುದ್ಧ ಮಾಡಿಟ್ಟುಕೊಳ್ಳಬೇಕು’ಎಂದರು.

ಪ್ರಾಧ್ಯಾಪಕ ಮಂಜುನಾಥ್, ಇಂಚರ, ಜೇನುಕೃಷಿಕ ಭೈರೇಶ್, ಶಿವಲಿಂಗಪ್ಪ, ಎಂ.ಯು. ಚನ್ನಬಸಪ್ಪ, ಧನಂಜಯ್, ಶಿವಮೂರ್ತಪ್ಪ, ಎಂ.ಬಿ. ನಾಗರಾಜ್, ಟಿ.ವಿ. ಚಂದ್ರಪ್ಪ, ಎಸ್.ಆರ್. ಕುಮಾರ್, ಆಶಾ ಉಪಸ್ಥಿತರಿದ್ದರು.

ಬೆಟ್ಟದಹಳ್ಳಿ ಗವಿ ಮಠದ ಚಂದ್ರಶೇಖರ್ ಸ್ವಾಮೀಜಿ ಹಾಗೂ ಸಿಂಗೆಗುಡ್ಡದ ನಂದೀಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-43-620560937

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.