ದಾವಣಗೆರೆ: ಕಂದಾಯ ಇಲಾಖೆ ಅನುಷ್ಠಾನಕ್ಕೆ ತಂದಿರುವ ಕಾಗದ ರಹಿತ ಆಸ್ತಿ ನೋಂದಣಿ ವಂಚನೆಗೆ ರಹದಾರಿ ಮಾಡಿಕೊಡಲಿದ್ದು, ಭೂಮಾಫಿಯಾಗೆ ಅವಕಾಶ ಕಲ್ಪಿಸಲಿದೆ ಎಂದು ಜಿಲ್ಲಾ ದಸ್ತಾವೇಜು (ಪತ್ರ) ಬರಹಗಾರರ ಸಂಘದ ಅಧ್ಯಕ್ಷ ಡಿ.ಕೆ. ಸಂಗಮೇಶ್ ಎಲಿಗಾರ್ ಆರೋಪಿಸಿದರು.

‘ಕಾಗದ ರಹಿತ ಆಸ್ತಿ ನೋಂದಣಿಯಲ್ಲಿ ಖರೀದಿದಾರರು ಹಾಗೂ ಮಾರಾಟಗಾರರ ಚಿತ್ರ ಇರುವುದಿಲ್ಲ. ಸಹಿ ಹಾಕುವ ವ್ಯವಸ್ಥೆ ಕೂಡ ರದ್ದುಪಡಿಸಲಾಗಿದೆ. ಕೇವಲ ಮೊಬೈಲ್ ಫೋನ್ ಒಟಿಪಿ ಪಡೆದು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ. ಇದು ಅಕ್ರಮಗಳಿಗೆ ಎಡೆ ಮಾಡಿಕೊಡುತ್ತದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿ ಶೇ 60ಕ್ಕೂ ಹೆಚ್ಚು ರೈತ ಕುಟುಂಬಗಳಿವೆ. ಕೃಷಿ ಭೂಮಿಯನ್ನು ಹೊಂದಿರುವ ರೈತರು ಇದರಿಂದ ಸಮಸ್ಯೆಗೆ ಸಿಲುಕಲಿದ್ದಾರೆ. ವಿದೇಶದ ಈ ವ್ಯವಸ್ಥೆಯನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಕರ್ನಾಟಕಕ್ಕೆ ತಂದು ಪ್ರಮಾದ ಎಸಗಿದ್ದಾರೆ. ಇದರ ವಿರುದ್ಧ ಮೇ 11ರಂದು ಬೆಳಿಗ್ಗೆ 10ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಅಂಬೇಡ್ಕರ್ ವೃತ್ತದಿಂದ ಜಿಲ್ಲಾ ನೋಂದಣಾಧಿಕಾರಿ ಕಚೇರಿಯವರೆಗೆ ದ್ವಿಚಕ್ರ ವಾಹನಗಳ ಜಾಥಾ ನಡೆಸಲಾಗುವುದು’ ಎಂದು ವಿವರಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾನಂದ, ಖಜಾಂಚಿ ಎಸ್.ರಾಜಶೇಖರ್, ಡಿ.ಆರ್.ಗಿರಿರಾಜು, ಧನರಾಜ್, ಕರಿಬಸಪ್ಪ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-43-2141343860

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.