ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಲೇಬೆನ್ನೂರು |‘125 ಎಕರೆ ಭತ್ತದ ಬೆಳೆಗೆ ಹಾನಿ‘

Published 9 ನವೆಂಬರ್ 2023, 16:29 IST
Last Updated 9 ನವೆಂಬರ್ 2023, 16:29 IST
ಅಕ್ಷರ ಗಾತ್ರ

ಮಲೇಬೆನ್ನೂರು: ಸ್ವಾತಿ ಮಳೆ ಹಾಗೂ ಗಾಳಿಯ ಆರ್ಭಟಕ್ಕೆ ಹೋಬಳಿ ವ್ಯಾಪ್ತಿಯಲ್ಲಿ 125 ಎಕರೆಗೂ ಹೆಚ್ಚು ಭತ್ತದ ಫಸಲು ನೆಲಕಚ್ಚಿದೆ.

ಕಳೆದೆರಡು ದಿನಗಳಿಂದ ರಾತ್ರಿವೇಳೆ ಮಿಂಚು ಗುಡುಗಿನ ಆರ್ಭಟದೊಂದಿಗೆ ಗಾಳಿ ಸಹಿತ ಬಿರುಮಳೆ ಸುರಿಯುತ್ತಿದೆ. ಮುಂಚಿತವಾಗಿ ನಾಟಿ ಮಾಡಿದ ಭತ್ತ ಕಾಳು ಕಟ್ಟುತ್ತಿದ್ದು ಕೆಲವೆಡೆ ಮುರಿದುಕೊಂಡು ಬಿದ್ದಿದೆ, ಕೆಲವೆಡೆ ಚಾಪೆ ಹಾಸಿದೆ.

ನಾಲೆಯ ನೀರು ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದ ಕೃಷಿಕರು ಈಗ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ತೆನೆ ಕಟ್ಟಿದ ಭತ್ತದ ಬೆಳೆ ಹಾಳಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಮಳೆ ಮುಂದುವರಿದಿದೆ. ಕೆಲವು ಭಾಗದಲ್ಲಿ ತಡವಾಗಿ ನಾಟಿ ಮಾಡಿದವರಿಗೆ ಮಳೆ ಸಂತಸ ತಂದಿದೆ.

ಕಂಬತ್ತನಹಳ್ಳಿ 10 ಎಕರೆ, ಹುಲುಗಿನಹೊಳೆ 10, ಎಳೆಹೊಳೆ 10, ಧೂಳೆಹೊಳೆ 25, ಇಂಗಳಗೊಂದಿ 15, ವಾಸನ 20, ಉಕ್ಕಡಗಾತ್ರಿ 10, ಕುಣಿಬೆಳೆಕೆರೆ 25 ಎಕರೆ ಬೆಳೆ ಹಾನಿಗೊಳಗಾಗಿದೆ.

ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ನಷ್ಟದ ಅಂದಾಜು ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT