ಬುಧವಾರ, ನವೆಂಬರ್ 20, 2019
20 °C

ದಾವಣಗೆರೆ: ಧಾರಾಕಾರ ಮಳೆಗೆ ನೂರಾರು ಎಕರೆ ಈರುಳ್ಳಿ ಬೆಳೆ ಜಲಾವೃತ 

Published:
Updated:

ಹರಪನಹಳ್ಳಿ: ತಾಲೂಕಿನ ವಿವಿಧೆಡೆ ಸೋಮವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು ನೂರಾರು ಎಕರೆ ಜಲಾವೃತಗೊಂಡು, ಲಕ್ಷಾಂತರ ರೂಪಾಯಿ ಹಾನಿಯಾಗಿದೆ. 

ಹರಪನಹಳ್ಳಿ ಸಮೀಪದ ದಡಿಗಾರನಹಳ್ಳಿ ಗೋಕಟ್ಟೆ ಹೊಡೆದು ಬೆಳೆಗಳು ಜಲಾವೃತವಾಗಿವೆ, ಮೈದೂರು,‌ಲೋಲೇಶ್ವರ, ಪೃಥ್ವೇಶ್ವರ, ಬೆಣ್ಣಿಹಳ್ಳಿ ವ್ಯಾಪ್ತಿಯಲ್ಲಿ ನೂರಾರು ಎಕರೆ ಈರುಳ್ಳಿ ಬೆಳೆ ಜಲಾವೃತವಾಗಿ ಕೊಚ್ಚಿಕೊಂಡು ಹೋಗಿದ್ದು, ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. 

ಮೈದೂರಿನಲ್ಲಿ 15 ಮನೆಗಳಿಗೆ ಹಾನಿಯಾಗಿದೆ, ಚಿಗಟೇರಿ, ಬಾವಿಹಳ್ಳಿ, ಕೊಂಗನಹೊಸೂರು, ಕಣಿವಿಹಳ್ಳಿ, ಕೋಡಿಹಳ್ಳಿ, ಕೂಲಹಳ್ಳಿ, ಬಾಗಳಿ, ಬಂಡ್ರಿ ವ್ಯಾಪ್ತಿಯಲ್ಲಿ ಮನೆಗಳಿಗೆ ಹಾನಿಯಾಗಿವೆ.

ಪ್ರತಿಕ್ರಿಯಿಸಿ (+)